ಕರ್ನಾಟಕ ಗೃಹ ಮಂಡಳಿ ಸೈಟು ಹಂಚಿಕೆ: ನಿವೇಶನ ಅಳತೆ, ಠೇವಣಿ ವಿವರಗಳು
ಬಳ್ಳಾರಿ, ಅಕ್ಟೋಬರ್ 23: ಕರ್ನಾಟಕ ಗೃಹ ಮಂಡಳಿ ಜಿಲ್ಲೆಗಳಲ್ಲಿ ನಿವೇಶನಗಳನ್ನು ಅಭಿವೃದ್ಧಿಗೊಳಿಸಿ ಅವುಗಳನ್ನು ಮಾರಾಟ ಮಾಡುತ್ತದೆ. ಈಗ ಬಳ್ಳಾರಿಯಲ್ಲಿ ವಿವಿಧ ಅಳತೆಯ ನಿವೇಶನಗಳನ್ನು ಸಿದ್ಧಗೊಳಿಸಿ ಅವುಗಳನ್ನು ಮಾರಾಟ ಮಾಡುವ ಅಧಿಸೂಚನೆ ಪ್ರಕಟಿಸಿದೆ. ನಿವೇಶನದ ಅಳತೆ, ನೋಂದಣಿ ಶುಲ್ಕ, ಆರಂಭಿಕ ಠೇವಣಿ ಶುಲ್ಕದ ಮಾಹಿತಿಯನ್ನು ಜನರ ಮಾಹಿತಿಗಾಗಿ ಬಿಡುಗಡೆ ಮಾಡಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
1956ರಲ್ಲಿ ರಚಿತವಾಗಿದ್ದ ಮೈಸೂರು ಗೃಹ ಮಂಡಳಿ ತದನಂತರ ಕರ್ನಾಟಕ ಗೃಹ ಮಂಡಳಿ ಅಧಿನಿಯಮ 1962ರ ಮೇರೆಗೆ ಕರ್ನಾಟಕ ಗೃಹ ಮಂಡಳಿಯಾಗಿ ಮರುನಾಮಕರಣಗೊಂಡಿತು. ಕರ್ನಾಟಕ ಗೃಹ ಮಂಡಳಿಯ ಮೂಲ ಉದ್ದೇಶ ವಸತಿ ಸ್ಥಳಾವಕಾಶದ ಬಗೆಗೆ ವ್ಯವರಿಸುವ ಮತ್ತು ಅದರ ಅಗತ್ಯತೆಯನ್ನು ಪೂರೈಸುವ ಉದ್ದೇಶಕ್ಕಾಗಿ ಅವಶ್ಯವಿರುವಂತಹ ಯೋಜನೆಗಳನ್ನು ರೂಪಿಸುವುದಾಗಿದೆ.

ಜನರಿಗೆ ಅಗತ್ಯವಿರುವ ಬಡಾವಣೆ, ನಿವೇಶನ ಒದಗಿಸುವ ಕಾಮಗಾರಿಗಳನ್ನು ನಿರ್ವಹಿಸುವುದು ಹಾಗೂ ಹಂಚಿಕೆ ಮಾಡುವುದು ಕರ್ನಾಟಕ ಗೃಹ ಮಂಡಳಿಯ ಉದ್ದೇಶವಾಗಿದೆ. ಜನರಿಗೆ ಕಡಿಮೆ ದರದಲ್ಲಿ ಮನೆ/ ನಿವೇಶನ ಒದಗಿಸಲು ಮಂಡಳಿ ಪ್ರಯತ್ನಿಸುತ್ತಿದೆ. ಸಇದು ಕರ್ನಾಟಕದಾದ್ಯಂತ ಗೃಹ ನಿರ್ಮಾಣದ ಅತ್ಯಂತ ಪ್ರಮುಖ ಸ್ವಾಯುತ್ತತೆಯ ಸಂಸ್ಥೆಯಾಗಿದೆ.
ಬಳ್ಳಾರಿಯಲ್ಲಿ ನಿವೇಶನ ಹಂಚಿಕೆ: ಈಗ ಕರ್ನಾಟಕ ಗೃಹ ಮಂಡಳಿ ವತಿಯಿಂದ ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕು, ಬಳ್ಳಾರಿ ನಗರದ ಮಿಂಚೇರಿ ಗ್ರಾಮದ ಜಮೀನುಗಳಲ್ಲಿ ಎಲ್ಲಾ ಮೂಲ ಸೌಲಭ್ಯದೊಂದಿಗೆ ವಿವಿಧ ಜನರಿಗೆ ಅಗತ್ಯಕ್ಕೆ ಅನುಗುಣವಾಗಿ, ಗುಣಮಟ್ಟದ ವಿವಿಧ ವರ್ಗಗಳ ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಆಸಕ್ತ ಸಾರ್ವಜನಿಕರು e-payment ಮೂಲಕ ಈ ಕೆಳಗಿನಂತೆ ನೋಂದಣಿ ಶುಲ್ಕ ಮತ್ತು ಅರಂಭಿಕ ಠೇವಣಿ ಹಣವನ್ನು ಪಾವತಿ ಮಾಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಕೆ ಮಾಡಲು ವಿಳಾಸ https://www.khb.karnataka.gov.in. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 31.10.2024.
ಉದ್ದೇಶಿತ ಬಡಾವಣೆ ಬಳ್ಳಾರಿ ಜಿಲ್ಲೆಯ, ಬಳ್ಳಾರಿ ತಾಲ್ಲೂಕು, ಬಳ್ಳಾರಿ ನಗರದ ಮಿಂಚೇರಿ ಗ್ರಾಮದ ಸರ್ವೆ ನಂಬರ್ 1, 2, 3, 4, 5, 6, 7, 8, 9, 10, 11, 12, 13, 14/ಎ ಮತ್ತು ಬಿ, 15/ಎ, ಬಿ, ಸಿ, 16/17ಎ, 20, 21, 22, 23, 140/2, 141, 142, 149 ಮತ್ತು 150/ಎ ಮತ್ತು ಬಿ ಇತರೆ ಜಮೀನಿನಲ್ಲಿ. ವರ್ಗಗಳು ಎಲ್‌ಐಜಿ, ಎಂಐಜಿ, ಹೆಚ್‌ಐಜಿ,-1, ಹೆಚ್‌ಐಜಿ-2,
ನಿವೇಶನಗಳ ಅಳತೆ (ಚ. ಮೀ.ಗಳಲ್ಲಿ) ಎಲ್‌ಐಜಿ 9.00*12.00, ಎಂಐಜಿ 9.00*15.00, ಹೆಐಜಿ-1 12.00*18.00, ಹೆಐಜಿ-2 15.00*24.00. ನೋಂದಣಿ ಶುಲ್ಕ ರೂ. ಎಲ್‌ಐಜಿ 500, ಎಂಐಜಿ 1000, ಹೆಐಜಿ-1 1500, ಹೆಐಜಿ-2 1500.
ಆರಂಭಿಕ ಠೇವಣಿಗಳು. ಎಲ್‌ಐಜಿ 20,000, ಎಂಐಜಿ 30,000, ಹೆಐಜಿ-1 40,000, ಹೆಐಜಿ-2 50,000 ರೂ.ಗಳು. ನಿವೇಶನದ ತಾತ್ಕಾಲಿಕ ಅಂದಾಜು ಬೆಲೆ 500 ರೂ.ಗಳು.
ಕರ್ನಾಟಕ ಗೃಹ ಮಂಡಳಿ ಪರಿಸರದೊಡನೆ ಸಾಮರಸ್ಯ ಹೊಂದಿರುವ ಅತ್ಯಾಧುನಿಕ ಮೂಲ ಸೌಲಭ್ಯಗಳ ಸಹಿತ ನಿವೇಶನಗಳನ್ನು ಅಭಿವೃದ್ಧಿಗೊಳಿಸುತ್ತದೆ. ಈಗ ಗ್ರಾಮದ ಜಮೀನುಗಳಲ್ಲಿ ಎಲ್ಲಾ ಮೂಲ ಸೌಲಭ್ಯದೊಂದಿಗೆ ನಿವೇಶನಗಳನ್ನು ಅಭಿವೃದ್ಧಿಗೊಳಿಸಿದೆ. ಇದರ ಹಂಚಿಕೆಗೆ ಅರ್ಜಿ ಕರೆದಿದೆ.
ನ್ಯಾಯ ಸಮ್ಮತವಾದ, ಪರಿಸರ ಸ್ನೇಹಿ, ಒಪ್ಪಬಹುದಾದ, ಕೈಗೆಟುಕುವ ಬೆಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು ಕರ್ನಾಟಕ ಗೃಹ ಮಂಡಳಿ ಗುರಿಯಾಗಿದೆ. ಸುಸಜ್ಜಿತ ಬಡಾವಣೆ ಹಾಗೂ ಅದರ ಮೂಲ ಸೌಕರ್ಯ, ಸೇವೆಗಳನ್ನುಒದಗಿಸುವುದು ಪಾರದರ್ಶಕವಾದ ರೀತಿಯಲ್ಲಿ ಗ್ರಾಹಕ ಸ್ನೇಹಿಯಾಗಿ ಸಮಾಲೋಚಕನಾಗಿ ಮತ್ತು ಸಹಭಾಗಿಯಾಗಿ ಕಾರ್ಯ ನಿರ್ವಹಿಸುವುದು ಮಂಡಳಿ ಧ್ಯೇಯವಾಗಿದೆ.












Click it and Unblock the Notifications