ಬಳ್ಳಾರಿ; 11,51,283 ಮತದಾರರು, ಮಹಿಳೆಯರೇ ಮೇಲುಗೈ
ಬಳ್ಳಾರಿ, ಏಪ್ರಿಲ್ 17; ಕರ್ನಾಟಕದ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಏಪ್ರಿಲ್ 11ರ ತನಕ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಲು ಅವಕಾಶ ನೀಡಲಾಗಿತ್ತು. ಹೊಸದಾಗಿ ಪಟ್ಟಿ ಸೇರಿದ ಮತದಾರರನ್ನು ಸೇರಿಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಹೊಸದಾಗಿ ಪಟ್ಟಿ ಸೇರಿದವರಿಗೆ ಈ ಬಾರಿಯ ಚುನಾವಣೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಬಳ್ಳಾರಿ ಜಿಲ್ಲೆಯ ಮತದಾರರ ಪಟ್ಟಿ ಅಂತಿಮಗೊಂಡಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 11,51,283 ಮತದಾರರು ಮತಚಲಾವಣೆ ಮಾಡಲು ಅರ್ಹತೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ 38,866 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಮಹಿಳಾ ಮತದಾರರು ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ 5,84,307 ಮಹಿಳಾ ಮತದಾರರು ಇದ್ದಾರೆ. 5,66,805 ಪುರುಷ ಮತದಾರರು ಮತ್ತು 171 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದಾರೆ. ಮೇ 10ರಂದು ಮತದಾನಕ್ಕಾಗಿ 1222 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.

ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದೆ. ಜಿಲ್ಲೆಯಲ್ಲಿ 16,845 80 ವರ್ಷ ಮೇಲ್ಪಟಟ ಮತ್ತು 15,047 ವಿಕಲಚೇತನ ಮತದಾರರು ಮತ್ತು 1406 ವಿಐಪಿ ಮಾರ್ಕ್ ಮತದಾರರು ಇದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕ್ಷೇತ್ರವಾರು ಮತದಾರರ ಮಾಹಿತಿ; ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ನಗರ, ಬಳ್ಳಾರಿ, ಗ್ರಾಮೀಣ, ಕಂಪ್ಲಿ, ಸಿರುಗುಪ್ಪ, ಸಂಡೂರು ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲಾಡಳಿತ ಕ್ಷೇತ್ರವಾರು ಇರುವ ಮತಗಟ್ಟೆಗಳು ಮತ್ತು ಮತದಾರರ ವಿವಿರಗಳನ್ನು ಬಿಡುಗಡೆ ಮಾಡಿದೆ.
ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 1,06,386 ಪುರುಷ, 1,07,714 ಮಹಿಳಾ, 29 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 2,14,129 ಮತದಾರರಿದ್ದಾರೆ. ಇವರಲ್ಲಿ ಯುವ ಮತದಾರರು 7,958. 2,509 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 4,309 ವಿಶೇಷ ಚೇತನ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 240 ಮತಗಟ್ಟೆಗಳಿವೆ.
ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 242 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ವಿಧಾನಸಭಾ ಕ್ಷೇತ್ರದಲ್ಲಿ 1,06,711 ಪುರುಷ, 1,10,292 ಮಹಿಳಾ,38 ಜನ ಇತರೆ ಮತದಾರರಿದ್ದು, ಒಟ್ಟು 2,17,041 ಮತದಾರರಿದ್ದಾರೆ. ಇವರಲ್ಲಿ 6,943 ಯುವ ಮತದಾರರು, 3,128 ಜನ 80 ವರ್ಷ ಮೇಲ್ಪಟ್ಟ ಮತದಾರರು, 3,686 ವಿಶೇಷಚೇತನ ಮತದಾರರು.
ಇನ್ನೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 1,16,060 ಪುರುಷ, 1,22,098 ಮಹಿಳಾ ಹಾಗೂ 49 ಜನ ಇತರೆ ಮತದಾರರಿದ್ದು, ಒಟ್ಟು 2,38,207 ಮತದಾರರಿದ್ದಾರೆ. 7,833 ಯುವ ಮತದಾರರು, 3,437 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು. 2,989 ವಿಶೇಷ ಮತದಾರರು ಹಾಗೂ 385 ವಿಐಪಿ ಮತದಾರಿದ್ದಾರೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 262 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಕ್ಷೇತ್ರದ ಪುರುಷ ಮತದಾರರು 1,25,880. ಮಹಿಳಾ ಮತದಾರರು 1,32,900 ಮತ್ತು 29 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿ ಒಟ್ಟು 2,58,809 ಮತದಾರರಿದ್ದಾರೆ. ಯುವ ಮತದಾರರ ಸಂಖ್ಯೆ 8,332. 4,691 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 1,370 ವಿಶೇಷ ಚೇತನ ಮತದಾರರು.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 251 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಪುರುಷ ಮತದಾರರು 1,11,768. ಮಹಿಳಾ ಮತದಾರರು 1,11,303, ಇತರೆ 26 ಜನರು ಇದ್ದಾರೆ. ಒಟ್ಟು ಮತದಾರರು 2,23,097. 7,800 ಯುವ ಮತದಾರರು, 3,080 ಜನ ವಯಸ್ಕ ಮತದಾರರು, 2,693 ವಿಶೇಷಚೇತನ ಮತದಾರರು ಎಂದು ಜಿಲ್ಲಾಡಳಿತ ಹೇಳಿದೆ.












Click it and Unblock the Notifications