ಹೊಸಪೇಟೆ-ಹರಿಹರ, ಬಳ್ಳಾರಿ-ಹೊಸಪೇಟೆ ಡೆಮು ರೈಲು; ವೇಳಾಪಟ್ಟಿ
ಬಳ್ಳಾರಿ, ಏಪ್ರಿಲ್ 12; ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ಹೊಸಪೇಟೆ-ಹರಿಹರ (ದಾವಣಗೆರೆ) ಮಾರ್ಗದ ಡೆಮು ರೈಲಿಗೆ ಸೋಮವಾರ ಚಾಲನೆ ಸಿಕ್ಕಿದೆ. ಮಂಗಳವಾರದಿಂದ ರೈಲು ಸಂಚಾರ ಆರಂಭವಾಗಿದೆ.
ಬಳ್ಳಾರಿ-ಹರಿಹರ ನಡುವೆ ಸಂಚಾರ ನಡೆಸುವ ರೈಲು ಸಂಖ್ಯೆ 07395 (ದಾವಣಗೆರೆ ಮಾರ್ಗ) ಸಂಖ್ಯೆಯ ವಿಶೇಷ ಡೆಮು ರೈಲಿಗೆ ಪ್ರವಾಸೋದ್ಯಮ, ಪರಿಸರ ಹಾಗೂ ಜೀವ ವೈವಿಧ್ಯ ಸಚಿವ ಆನಂದ್‍ಸಿಂಗ್ ಸೋಮವಾರ ಹಸಿರು ನಿಶಾನೆ ತೋರಿಸಿದರು.
ನಂತರ ಮಾತನಾಡಿದ ಅವರು, "ಹೊಸಪೇಟೆಯಿಂದ ಹರಿಹರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಲು 197 ರೂ. ವೆಚ್ಚವಾಗಲಿದ್ದು, ಅದೇ ರೈಲಿನಲ್ಲಿ 35 ರೂ. ಗಳಲ್ಲಿ ಪ್ರಯಾಣಿಸಬಹುದಾಗಿದೆ. ಬಳ್ಳಾರಿಯಿಂದ ಹರಿಹರಕ್ಕೆ ಚಲಿಸಲುವ ಈ ರೈಲಿಗೆ ಹೊಸಪೇಟೆಯಲ್ಲಿಯೇ ಚಾಲನೆ ನೀಡಲಾಗುತ್ತಿದ್ದು, ಈ ಹೊಸಪೇಟೆ ಮಣ್ಣಿನ ವಿಶೇಷತೆ ಅಂತಹದ್ದು" ಎಂದರು.
ಈ ರೈಲು ಸೇವೆಯಿಂದ ಜನರಿಗೆ ತುಂಬಾ ಉಪಯುಕ್ತವಾಗಲಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪ, ಸಚಿವ ಆನಂದ್ ಸಿಂಗ್ ಕರೆ ನೀಡಿದ್ದಾರೆ. ರೈಲು ಓಡಿಸಲು ಶ್ರಮಿಸಿದ ಎಲ್ಲರಿಗೂ ಉಭಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಈ ವಿಶೇಷ ಡೆಮು ಪ್ಯಾಸೆಂಜರ್ ರೈಲು 10 ಬೋಗಿಯನ್ನು ಹೊಂದಿದೆ. ಏಪ್ರಿಲ್ 12ರಿಂದ ಅ. 15ರವರೆಗೆ ಭಾನುವಾರ ಹೊರತುಪಡಿಸಿ ವಾರದ ಉಳಿದ ಎಲ್ಲಾ ದಿನಗಳು ಸಂಚಾರ ನಡೆಸಲಿದೆ. ಬಳಿಕ ಪ್ರಯಾಣಿಕರ ಬೇಡಿಕೆ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ರೈಲಿನ ವೇಳಾಪಟ್ಟಿ
ಬಳ್ಳಾರಿ-ಹರಿಹರ ನಡುವೆ ರೈಲು ಸಂಖ್ಯೆ 07395 ಸಂಚಾರ ನಡೆಸಲಿದೆ. ಬೆಳಗ್ಗೆ 7.30ಕ್ಕೆ ಬಳ್ಳಾರಿಯಿಂದ ಹೊರಡುವ ರೈಲು ಕುಡತಿನಿ, ತೋರಣಗಲ್ಲು ಮುಖಾಂತರ ಬೆಳಗ್ಗೆ 9.10ಕ್ಕೆ ಹೊಸಪೇಟೆಗೆ ತಲುಪಿ ಅಲ್ಲಿಂದ 9.15ಕ್ಕೆ ಹೊರಟು ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ, ಮಾರ್ಗವಾಗಿ ಮಧ್ಯಾಹ್ನ12.50ಕ್ಕೆ ದಾವಣಗೆರೆಗೆ ತಲುಪಿ ಅಲ್ಲಿಂದ ಮಧ್ಯಾಹ್ನ 1ಕ್ಕೆ ಹೊರಟು ಮಧ್ಯಾಹ್ನ 1.50ಕ್ಕೆ ಹರಿಹರಕ್ಕೆ ತಲುಪುತ್ತದೆ.

ದಾವಣಗೆರೆ-ಹೊಸಪೇಟೆ ವೇಳಾಪಟ್ಟಿ
ಹರಿಹರದಿಂದ ರೈಲು ಸಂಖ್ಯೆ 07396 ಮಧ್ಯಾಹ್ನ 2ಕ್ಕೆ ಹೊರಟು ದಾವಣಗೆರೆ, ಹರಪನಹಳ್ಳಿ, ಕೊಟ್ಟುರು, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಹೊಸಪೇಟೆಗೆ ಸಂಜೆ 5.25ಕ್ಕೆ ತಲುಪಲಿದೆ. ಅಲ್ಲಿಂದ 6.30ಕ್ಕೆ ಹೊರಟು ತೋರಣಗಲ್ಲು, ಕುಡತಿನಿ ಮಾರ್ಗವಾಗಿ ಬಳ್ಳಾರಿಗೆ ರಾತ್ರಿ 8 ಗಂಟೆಗೆ ಬಂದು ತಲುಪುತ್ತದೆ.

ಹೊಸಪೇಟೆ-ಬಳ್ಳಾರಿ ನಡುವಿನ ರೈಲು
ಹೊಸಪೇಟೆ-ಬಳ್ಳಾರಿ ನಡುವೆ ರೈಲು ಸಂಖ್ಯೆ 07397 ಸಂಚಾರ ನಡೆಸಲಿದೆ. ರೈಲು ಬೆಳಗ್ಗೆ 5.40ಕ್ಕೆ ಹೊಸಪೇಟೆಯಿಂದ ಹೊರಟು ಗಾದಿಗನೂರು, ತೋರಣಗಲ್ಲು, ದರೋಜಿ, ಕುಡತಿನಿ ಮಾರ್ಗವಾಗಿ ಬಳ್ಳಾರಿಗೆ ಬೆಳಗ್ಗೆ 7.20ಕ್ಕೆ ತಲುಪುತ್ತದೆ.
ಬಳ್ಳಾರಿ-ಹೊಸಪೇಟೆ ನಡುವೆ ರೈಲು ಸಂಖ್ಯೆ 07398 ಸಂಖ್ಯೆ ಸಂಚಾರ ನಡೆಸಲಿದೆ. ರೈಲು ರಾತ್ರಿ 8.10ಕ್ಕೆ ಹೊರಟು ಕುಡತಿನಿ, ದರೋಜಿ, ತೋರಣಗಲ್ಲು, ಗಾದಿಗನೂರು ಮಾರ್ಗವಾಗಿ ರಾತ್ರಿ 9.45ಕ್ಕೆ ಹೊಸಪೇಟೆ ತಲುಪಲಿದೆ. ಭಾನುವಾರ ಹೊರತುಪಡಿಸಿ ಉಳಿದ ದಿನ ಸಂಚಾರ.

ಹೊಸಪೇಟೆ-ಹುಬ್ಬಳ್ಳಿ ರೈಲು
ಹೊಸಪೇಟೆ-ಹುಬ್ಬಳ್ಳಿ ನಡುವೆ ಡೆಮು ರೈಲು ಸಂಚಾರ ನಡೆಸಲಿದೆ. ರೈಲು ಸಂಖ್ಯೆ 07393 ಶನಿವಾರದಂದು ರಾತ್ರಿ 10ಕ್ಕೆ ಹೊಸಪೇಟೆಯಿಂದ ಹೊರಟು ಮುನಿರಾಬಾದ್, ಗಿಣಿಗೇರಾ, ಕೊಪ್ಪಳ, ಭಾಣಾಪುರ, ಬನ್ನಿಕೊಪ್ಪ, ಗದಗ, ಅಣ್ಣಿಗೇರಿ ಶಿಶ್ವಿನಹಳ್ಳಿ ಮಾರ್ಗವಾಗಿ ಬೆಳಗ್ಗೆ 12.55ಕ್ಕೆ ಎಸ್. ಎಸ್. ಎಸ್. ಹುಬ್ಬಳ್ಳಿ ತಲುಪಲಿದೆ.
ರೈಲು ಸಂಖ್ಯೆ 07394 ಪ್ರತಿ ಭಾನುವಾರದಂದು ರಾತ್ರಿ 11.30ಕ್ಕೆ ಎಸ್. ಎಸ್. ಎಸ್. ಹುಬ್ಬಳ್ಳಿಯಿಂದ ಹೊರಟು ಶಿಶ್ವನಹಳ್ಳಿ, ಅಣ್ಣಿಗೇರಿ, ಗದಗ, ಬನ್ನಿಕೊಪ್ಪ, ಭಾಣಾಪುರ, ಕೊಪ್ಪಳ, ಗಿಣಿಗೇರಾ, ಮುನಿರಾಬಾದ್ ಮಾರ್ಗವಾಗಿ ಬೆಳಗ್ಗೆ 2.30ಕ್ಕೆ ಹೊಸಪೇಟೆಗೆ ಬಂದು ತಲುಪುತ್ತದೆ.
|
ರೈಲಿನ ಪ್ರಯಾಣ ದರ
ಹೊಸಪೇಟೆ-ಹರಿಹರ (ದಾವಣಗೆರೆ) ಡೆಮು ವಿಶೇಷ ರೈಲಿನ ಪ್ರಯಾಣ ದರ ಹೀಗಿದೆ.












Click it and Unblock the Notifications