ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರ ನಾಯ್ಕ ಮುನ್ನಡೆ
ಬಳ್ಳಾರಿ, ಮೇ 15 : ಹಡಗಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರ ನಾಯ್ಕ ಮುನ್ನಡೆ ಸಾಧಿಸಿದ್ದಾರೆ. ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಸಾಧಿಸುತ್ತಿರುವ ಇವರು ಮೂರನೇ ಸುತ್ತಿನಲ್ಲಿಯೂ 3212 ಮತಗಳ ಮುನ್ನಡೆ ಸಾಧಿಸುತ್ತಿದ್ದಾರೆ. ಬಿಜೆಪಿ ಎರಡನೇ ಸ್ಥಾನದಲ್ಲಿದೆ.
ಮಾಜಿ ಸಚಿವ ಎಂ.ಪಿ ಪ್ರಕಾಶ್ ಅವರ ಶಿಷ್ಯ, ಹಾಲಿ ಶಾಸಕ ಕಾಂಗ್ರೆಸ್ಸಿನ ಪಿ.ಟಿ ಪರಮೇಶ್ವರ ನಾಯ್ಕ 2013ರಲ್ಲಿ ಬಿಜೆಪಿಯ ಚಂದನಾಯ್ಕರನ್ನು ಸೋಲಿಸಿದ್ದರು. ಮಾಜಿ ಸಚಿವ ಹಾಗೂ ರಾಜಕೀಯ ಮುತ್ಸದ್ಧಿ ಎಂ.ಪಿ. ಪ್ರಕಾಶ್ ಅವರ ಶಿಷ್ಯನೆಂಬುದೇ ಪರಮೇಶ್ವರ್ ನಾಯ್ಕ ಅವರಿಗಿದ್ದ ಪ್ಲಸ್ ಪಾಯಿಂಟ್.
ನಾನಾ ಕಾರಣಗಳಿಗಾಗಿ ಪರಮೇಶ್ವರ್ ನಾಯ್ಕ್ ಗೆ ಈ ಬಾರಿ ಗೆಲುವು ಅಷ್ಟು ಸುಲಭವಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ಅವರು ಮುನ್ನಡೆ ಕಾಯ್ದುಕೊಳ್ಳುವ ರೀತಿ ಎಲ್ಲರಿಗೂ ಅಚ್ಚರಿ ತಂದಿದೆ.













Click it and Unblock the Notifications