ಬಳ್ಳಾರಿ: ಬಿಜೆಪಿ ಮಣಿಸಲು ಕಾಂಗ್ರೆಸ್‌ ಜತೆ ಕೈ ಜೋಡಿಸಿದ ಕಮ್ಯುನಿಸ್ಟ್‌ ಪಕ್ಷ

ಬಳ್ಳಾರಿ, ಅಕ್ಟೋಬರ್ 24: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಪಕ್ಷದ ಜೊತೆ ಕಮ್ಯುನಿಷ್ಟ್‌ ಪಕ್ಷ (ಸಿಪಿಐ) ಕೈ ಜೋಡಿಸಿದ್ದು, ಬಿಜೆಪಿಯನ್ನು ಸೋಲಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಫ್ಯಾಸಿಸ್ಟ್‌ ಶಕ್ತಿಗಳನ್ನು ಸೋಲಿಸಲು ಈ ಕಮ್ಯುನಿಸ್ಟ್‌ ಪಕ್ಷ ಕಾಂಗ್ರೆಸ್‌ ಜತೆ ಕೈಜೋಡಿಸಿದೆ ಎಂದು ಹೇಳಿದರು.

ಕಮ್ಯುನಿಸ್ಟ್‌ ಪಕ್ಷ ಶಿಸ್ತಿನ ಪಕ್ಷ. ಅದರ ಬೆಂಬಲ ಕಾಂಗ್ರೆಸ್‌ಗೆ ಸಿಕ್ಕಿರುವುದು ಲಕ್ಷ ವೋಟುಗಳನ್ನು ಹೆಚ್ಚಿಸಲಿದೆ. ಸಿಪಿಐನ ಸದಸ್ಯರಾಗಿರುವ ಕಾರ್ಮಿಕರ ಬೆಂಬಲ ಸಿಕ್ಕಿರುವುದು ನಮಗೆ ಬಲ ನೀಡಿದೆ. ಆ ಮೂಲಕ ಉಗ್ರಪ್ಪ ಅವರ ಗೆಲುವು ನಿಶ್ಚಿತಾಗಲಿದೆ ಎಂದು ಅವರು ಹೇಳಿದರು.

Bellary: communist party (cpi) joins hands with congress

ಅಕ್ಟೋಬರ್ 31ರಂದು ಬಳ್ಳಾರಿಯಲ್ಲಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಜಂಟಿಯಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದರು.

ಸಿಪಿಐ ಮುಖಂಡ ಲೋಕೇಶ್ ಮಾತನಾಡಿ, ಕೋಮುವಾದಿ ಪಕ್ಷವಾದ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವ ನಿರ್ಧಾರ ಮಾಡಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+