ಟಿವಿ ಸ್ಫೋಟ: ಹಾಸಿಗೆ ಹಿಡಿದಿದ್ದ ಮಹಿಳೆ ಸಾವು

ಬಳ್ಳಾರಿ, ಜೂನ್ 11: ಆ ನತದೃಷ್ಟ ಮಹಿಳೆ ಅದಾಗತಾನೆ ಡಯಾಲಿಸಿಸ್ ಮುಗಿಸಿಕೊಂಡು ಮನೆಗೆ ಬಂದು ಹಾಸಿಗೆಯಲ್ಲಿ ಉರುಳಿಕೊಂಡಿದ್ದರು. ಅದೇ ಘಳಿಗೆಯಲ್ಲಿ ಯಮರಾಯ ಟಿವಿ ಸ್ಫೋಟ ರೂಪದಲ್ಲಿ ಆಕೆಯ ಮೇಲೆ ಎರಗಿ, ಜೀವಂತವಾಗಿ ದಹಿಸಿದ್ದಾನೆ.

37 ವರ್ಷದ ಪಾರ್ವತಿ ಎಂಬುವವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಹಾಗಾಗಿ ದಿನಾ ದೂರದ ವಿಜಯನಗರ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ತೆರಳಿ ಡಯಾಲಿಸಿಸ್ ಚಿಕಿತ್ಸೆ ಪೂರೈಸಿಕೊಂಡು ಬರುತ್ತಿದ್ದರು.

ಮಂಗಳವಾರವೂ ಎಂದಿನಂತೆ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಚಿಕಿತ್ಸೆಯ ಬಳಲಿಕೆಯಲ್ಲಿ ಉಸ್ಸಪ್ಪಾ ಅಂತ ಹಾಸಿಗೆ ಮೇಲೆ ಉರುಳಿಕೊಂಡಿದ್ದಾರೆ. ಬೇಸರ ಕಾಡಿ, ಟಿವಿ ಆನ್ ಮಾಡಿದ್ದಾರೆ. (ಫ್ರಿಜ್ ಸ್ಫೋಟ: ಮೈಸೂರು ದಿವಾನರ ಮೊಮ್ಮಗಳ ಸಾವು)

Bellary: 37-year-old bed-ridden kidney patient Parvathi killed in TV explosion

ಆದರೆ ಹೈ ವೋಲ್ಟೇಜಿನಿಂದ ಟಿವಿ ಸೆಟ್ ದಿಢಿಗ್ಗನೆ ಹೊತ್ತಿಕೊಂಡು ಉರಿಯಲಾರಂಭಿಸಿದೆ. ಜತೆಗೆ ಸ್ಫೋಟವುಂಟಾಗಿ ಇಡೀ ಟಿವಿ ಈ ಮಹಿಳೆಯ ಮೇಲೆ ಉರುಳಿಬಿದ್ದಿದೆ. ಮಹಿಳೆಗೆ ಬೆಂಕಿ ತಾಗಿ, ಷಾಕ್ ಆಗಿ ಸ್ಥಳದಲ್ಲೇ ದಹಿಸಿಹೋಗಿದ್ದಾರೆ.

ಇದು ಪಾರ್ವತಿ ಮನೆಯವರು ಹೇಳುವ ಕಥೆ. ಆದರೆ ಸ್ಥಳಕ್ಕೆ ಆಗಮಿಸಿದ ಕೌಲ್ ಬಜಾರ್ ಪೊಲೀಸರು ತನಿಖೆ ನಡೆಸಿದ್ದು, ಸುತ್ತಮುತ್ತಲ ಮನೆಗಳಲ್ಲಿ ಹೈ ವೋಲ್ಟೇಜ್ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಪೊಲೀಸರು ಇದೀಗ ಪಾರ್ವತಿ ಸಜೀವ ದಹನಕ್ಕೆ ಬೇರೆಯದೇ ಕಾರಣವಿದೆಯಾ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+