Ballari: ಸಿನಿಮಾ ಸ್ಟೈಲ್‍ನಲ್ಲಿ ಕಾರಿನಲ್ಲಿ ಮದುವೆಯಾದ ಪ್ರೇಮಿಗಳು

ಬಳ್ಳಾರಿ ಜನವರಿ 3: ಸಿನಿಮಾ ಸ್ಟೈಲ್‍ನಲ್ಲಿ ಪೇಮಿಗಳು ಕಾರಿನಲ್ಲಿ ಮದುವೆಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಕಿರಾತಕ ಪಿಲ್ಮ್ ಸ್ಲೈಲ್‌ನಲ್ಲಿ ಪ್ರೇಮಿಗಳು ಕಾರಿಯಲ್ಲಿ ಹಾರ ಬದಲಿಸಿ ಮದ್ವೆಯಾಗಿದ್ದಾರೆ. ಶಿವಪ್ರಸಾದ್ ಹಾಗೂ ಅಮೃತಾ ಪ್ರೇಮ ವಿವಾಹದ ಜೋಡಿ. ಯುವತಿ ಪೋಷಕರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಿಪಡಿದ್ದರು. ಇಬ್ಬರು ಬೇರೆ ಬೇರೆ ಜಾತಿಯವರಾದ್ದರಿಂದ ಪೋಷಕರು ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ.

Ballari: Lovers married in a car in movie style

ಕೊಪ್ಪಳ ಮೂಲದ ಯುವತಿ ಅಮೃತಾ ಹಾಗೂ ಬಳ್ಳಾರಿಯ ತೆಕ್ಕಲಕೋಟೆಯ ಯುವಕ ಶಿವಪ್ರಸಾದ್ ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಹುಡುಗಿ ಮೇಲ್ ಜಾತಿ, ಹುಡುಗ ಕೆಳ ಜಾತಿ ಹಿನ್ನಲೆ ಪ್ರೇಮ ವಿವಾಹಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿದೆ.

ಹೀಗಾಗಿ ಯುವತಿ ಅಮೃತಾ ಒಂದು ಬಾರಿ ಪೋಷಕರು ಬೇಕೆಂದು, ಮತ್ತೊಂದು ಬಾರಿ ಪೇಮಿ ಬೇಕೆಂದು ದ್ವಂದ್ವ ಹೇಳಿಕೆ ನೀಡಿದ್ದಾಳೆ. ಅಮೃತಾ ದ್ವಂದ್ವ ಹೇಳಿಕೆ ಹಿನ್ನಲೆ ಶಾಂತಿಧಾಮ ಮುಂದೆ ಯುವತಿ ಹಾಗೂ ಪ್ರೇಮಿಯ ನಡುವೆ ಹೈಡ್ರಾಮವೇ ನಡೆದಿದೆ. ಸಿನಿಮೀ ರೀತಿಯಲ್ಲಿ ಯುವತಿಯನ್ನ ಯುವಕ ಎಳೆದ್ಯೋಲು ಯತ್ನಿಸಿದ್ದರಿಂದ ಕೆಲಕಾಲ ಸಾಂತ್ವನ ಕೇಂದ್ರ ಮುಂದೆ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಇಬ್ಬರೂ ಪೋಷಕರ ನಡುವೆ ಗಲಾಟೆ ಕೂಡ ನಡೆದಿದೆ.

ಬಲವಂತವಾಗಿ ಅಮೃತಾಳನ್ನು ಪೋಷಕರು ಕಾರಿನಲ್ಲಿ ಕರೆದೊಯ್ಯುತ್ತಿದ್ದಂತೆ ಅಮೃತಾ 'ಗಂಡ ಬೇಕು' ಅಂತಾ ಅರಚಾಡಿದ್ದಾಳೆ. ಈ ವೇಳೆ ಪ್ರೇಮಿ ಕಾರು ಅಡ್ಡಗಟ್ಟಿ ಪ್ರೇಯಸಿಗಾಗಿ ಪೋಷಕರ ಮುಂದೆ ಗೋರರಿದಿದ್ದಾನೆ. ಇದೆಲ್ಲವೂ ಪೊಲೀಸರ ಮುಂದೆಯೇ ನಡೆದಿದೆ.

ಶಿವಪ್ರಸಾದ್ ಹೆಂಡ್ತಿನೂ ಬೇಕು, ರಕ್ಷಣೆನೂ ಬೇಕು ಇಡೀ ರಾತ್ರಿ ಸಾಂತ್ವನ ಕೇಂದ್ರ ಮುಂದೆ ಕುಳಿತು ಪಟ್ಟು ಹಿಡಿದಿದ್ದರಿಂದ ಅಮೃತಾ ಘೋಷಕರು ಆಕೆಯನ್ನು ಸಾಂತ್ವನ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+