ಹಿರೇಹಡಗಲಿಯಲ್ಲಿ ಪಾಕಿಸ್ತಾನದ ಪರ ಪೋಸ್ಟರ್ ಹಾಕಿದ ದೇಶ ವಿರೋಧಿ ಅರೆಸ್ಟ್
ಬಳ್ಳಾರಿ, ಫೆಬ್ರವರಿ 27: ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಪರ ಪೋಸ್ಟರ್ ಹಾಕಿದ ದೇಶ ವಿರೋಧಿಯನ್ನು ಹಿರೇಹಡಗಲಿ ಪೋಲಿಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಮೆಹಬೂಬ್ ಮುಜಾವರ್ ಬಂಧನಕ್ಕೊಳಗಾದ ದೇಶ ವಿರೋಧಿ.ಈತ ಕಳೆದ ಎರಡು ದಿನಗಳ ಹಿಂದೆ ಪಾಕಿಸ್ತಾನದ ಸೇನೆಗೆ ಬೆಂಬಲಿಸಿ ಫೇಸ್ ಬುಕ್ ನಲ್ಲಿ ಪೋಸ್ಟರ್ ಶೇರ್ ಮಾಡಿದ್ದ.
ಆ ನಂತರ ಮೆಹಬೂಬ್ ಮುಜಾವರ್ ವಿರುದ್ಧ ಸ್ಥಳೀಯರಿಂದ ಬಾರಿ ವಿರೋಧ ವ್ಯಕ್ತವಾಗಿತ್ತು. ಈ ಮಾಹಿತಿ ತಿಳಿದ ಕೆಲವೇ ನಿಮಿಷಗಳಲ್ಲಿ ಪ್ರೊಬೇಷನರಿ ಡಿವೈಎಸ್ಪಿ ಜಾವೇದ್ ಇನಾಂದಾರ್ ನೇತೃತ್ವದಲ್ಲಿ ಮೆಹಬೂಬ್ ಮುಜಾವರ್ ನನ್ನು ಬಂಧಿಸಲಾಗಿದೆ.

ಇದೀಗ ಹಿರೇಹಡಗಲಿ ಪೊಲೀಸರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications