ಯಲಬುರ್ಗಾ ಕ್ಷೇತ್ರದಿಂದ ವೀಣಾ ಕಾಶಪ್ಪನವರ ಸ್ಪರ್ಧೆ?

ಬಾಗಲಕೋಟೆ, ಮಾರ್ಚ್ 27 : ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಕ್ಷೇತ್ರ ಯಲಬುರ್ಗಾದಿಂದ ವೀಣಾ ಕಾಶಪ್ಪನವರ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಗಳವಾರ ಬಾಗಲಕೋಟೆಯ ನವನಗರದ ಪತ್ರಿಕಾಭವನದಲ್ಲಿ ಕ್ರಿಕೆಟ್ ಅಕಾಡೆಮಿಯೊಂದರ ಕುರಿತು ವೀಣಾ ಕಾಶಪ್ಪನವರ ಪತ್ರಿಕಾಗೋಷ್ಢಿ ನಡೆಸಿದರು. ಈ ಸಂದರ್ಭದಲ್ಲಿ ಹಲವು ರಾಜಕೀಯ ವಿಚಾರಗಳ ಕುರಿತು ಮಾತನಾಡಿದರು.

'ಯಲಬುರ್ಗ ಹಾಗೂ ಕುಷ್ಠಗಿ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಗಾಗಿ ಸ್ಪರ್ಧಮಾಡುವಂತೆ ಪಕ್ಷದ ಮುಖಂಡರು, ಸಮುದಾಯದವರು ಅಪೇಕ್ಷೆ ಪಡುತ್ತಿದ್ದಾರೆ' ಎಂದು ವೀಣಾ ಕಾಶಪ್ಪನವರ ಹೇಳಿದರು.

'ಪಕ್ಷದ ನಾಯಕರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಪಕ್ಷ ಒಪ್ಪಿದರೆ ಯಲಬುರ್ಗ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಿದ್ದಳಿದ್ದೇನೆ. ಈ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೂ ತರುತ್ತೇನೆ' ಎಂದರು.

Veena Kashappanavar may contest for elections from Yelburga

ಯಲಬುರ್ಗಾ ಕ್ಷೇತ್ರದ ಹಾಲಿ ಶಾಸಕರು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ. ರಾಯರೆಡ್ಡಿ ಅವರ ಆಪ್ತರಾದ ನವಲಿ ಹಿರೇಮಠ ಅವರು ಕಳೆದ ವಾರ ಬಿಜೆಪಿ ಸೇರಿದ್ದಾರೆ. ಇದರಿಂದಾಗಿ ವಿಜಯಾನಂದ‌ ಕಾಶಪ್ಪನವರ ಅವರು ಅಸಮಾಧಾನಗೊಂಡಿದ್ದಾರೆ.

ಯಲಬುರ್ಗಾ ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದವರು ಹೆಚ್ಚಿದ್ದಾರೆ. ಆದ್ದರಿಂದ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಅವರು ಯಲಬುರ್ಗಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ವೀಣಾ ಕಾಶಪ್ಪನವರ ಅವರು ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು. ಅವರು ಜಿಲ್ಲೆಯನ್ನು ತೊರೆದು ಕೊಪ್ಪಳ ಜಿಲ್ಲೆಗೆ ಸೇರುವ ಯಲಬುರ್ಗಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ?, ಕಾಂಗ್ರೆಸ್ ಪಕ್ಷ ಹಾಲಿ ಸಚಿವರು ಇರುವ ಕ್ಷೇತ್ರದಲ್ಲಿ ಬೇರೆಯವರಿಗೆ ಟಿಕೆಟ್ ನೀಡಲಿದೆ? ಎಂದು ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+