ಆಕೆ ಗರ್ಭಿಣಿ ಹೊಡಿಬೇಡಿ ಎಂದು ಅಂಗಲಾಚಿದರೂ ಕೇಳಲಿಲ್ಲ
ಬಾಗಲಕೋಟೆ, ಡಿಸೆಂಬರ್ 10: ಚಿಂದಿ ಆಯುತ್ತಿದ್ದ ಗರ್ಭಿಣಿಯನ್ನು ಕಳ್ಳಿ ಎಂದು ಗ್ರಾಮಸ್ಥರು ಥಳಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಚಿಂದಿ ಆಯುತ್ತಿದ್ದ ಇಬ್ಬರು ಮಹಿಳೆಯರಿಗೆ ಅವರನ್ನು ಕಳ್ಳಿಯರೆಂದುಕೊಂಡು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಅದರಲ್ಲಿ ಒಬ್ಬರು ಗರ್ಭಿಣಿಯಿದ್ದು ಮಾನವೀಯತೆಯನ್ನು ಮರೆತು ಜನರು ನಡೆದುಕೊಂಡಿದ್ದಾರೆ.
ಬಾಗಲಕೋಟೆಯ ಜಮಖಂಡಿಯಲ್ಲಿಈ ಘಟನೆ ನಡೆದಿದೆ,ಚಿಂದಿ ಆಯುವ ಮಹಿಳೆಯರ ಮೇಲೆ ದುಷ್ಕರ್ಮಿಗಳು ಪ್ರತಾಪ ತೋರಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆಕೆ ಗರ್ಭಿಣಿ ಹೊಡೆಯಬೇಡಿ ಎಂದು ಅಂಗಲಾಚಿ ಬೇಡಿದರೂ ಕೇಳುವ ಕಿವಿ ಅಲ್ಲಿರಲಿಲ್ಲ.

ಮಹಿಳೆಯರ ಕೂದಲು ಹಿಡಿದು ಹೊಡೆದಿದ್ದಲ್ಲದೆ, ಕಾಲಿನಿಂದ ಒದ್ದು, ಹಗ್ಗದಿಂದಲೂ ಹೊಡೆದು ಹಲ್ಲೆ ನಡೆಸಿದ್ದಾರೆ. ನಿಜವಾದ ಕಳ್ಳಿ ಅಲ್ಲದಿದ್ದರೂ ಕೂಡ ಆಕೆ ಕಳ್ಳಿ ಹೌದೋ ಅಲ್ಲವೋ ಎಂದು ತಿಳಿದುಕೊಳ್ಳುವ ತಾಳ್ಮೆ ಸಾರ್ವಜನಿಕರಿಗಿರಲಿಲ್ಲ.












Click it and Unblock the Notifications