20 ವರ್ಷಗಳಿಂದ ಉಚಿತ ವಿದ್ಯುತ್ ಪಡೆಯುತ್ತಿದೆ ಈ ಗ್ರಾಮ

ಬಾಗಲಕೋಟೆ, ಜೂನ್ 8: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದೆ, ಇದಕ್ಕೆ ಹಲವು ಷರತ್ತುಗಳನ್ನು ವಿಧಿಸಿದೆ. 200 ಯುನಿಟ್ ಉಚಿತ ಎಂದೇಳಿ ಈಗ ಷರತ್ತು ವಿಧಿಸುತ್ತಿರುವುದಕ್ಕೆ ವಿರೋಧ ಕೂಡ ವ್ಯಕ್ತವಾಗಿದೆ. ಜುಲೈ ತಿಂಗಳಿನಿಂದ ಅರ್ಹರು ಉಚಿತ ವಿದ್ಯುತ್ ಪಡೆಯಲಿದ್ದಾರೆ.

ಆದರೆ ಈ ಗ್ರಾಮ ಕಳೆದ 20 ವರ್ಷಗಳಿಂದ ಉಚಿತ ವಿದ್ಯುತ್ ಪಡೆಯುತ್ತಿದೆ. ಹೌದು, ಬಾಗಲಕೋಟೆ ಜಿಲ್ಲೆಯ ಶಿರೋಳ ಗ್ರಾದ ನಿವಾಸಿಗಳು ಕಳೆದ 20 ವರ್ಷದಿಂದ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

State Awaits Congress Promise

ಸಾಕಷ್ಟು ಹೋರಾಟ ನಡೆಸಿದ ಬಳಿಕ ಶಿರೋಳ ಗ್ರಾಮಕ್ಕೆ ಉಚಿತ ವಿದ್ಯುತ್ ಸಿಕ್ಕಿದೆ. 2003ರಲ್ಲಿ ಈ ಗ್ರಾಮದಲ್ಲಿ ಭಾರಿ ಪ್ರತಿಭಟನೆ ನಡೆಸಿದ ಬಳಿಕ ಈ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. 2003ಕ್ಕೆ ಮೊದಲು ಈ ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು, ಬೆಳೆಗಳಿಗೆ ನೀರು ಕೊಡಲು ಕೂಡ ಸಾಧ್ಯವಾಗದೆ ಭಾರಿ ನಷ್ಟ ಅನುಭವಿಸಿದ್ದರು.

ಭಾರಿ ಪ್ರತಿಭಟನೆ ಬಳಿಕ ಬಿಲ್ ಕಟ್ಟದ ಗ್ರಾಮಸ್ಥರು

ವಿದ್ಯುತ್ ಅಭಾವದ ವಿರುದ್ಧ ರೈತ ಸಂಘದ ಸದಸ್ಯರ ಜೊತೆಗೂಡಿ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಕೂಡಿ ಹಾಕಿ ಬೀಗಹಾಕಲಾಗಿತ್ತು. ಈ ಭಾರಿ ಪ್ರತಿಭಟನೆಯ ನಂತರ ಅಧಿಕಾರಿಗಳು ಈ ಗ್ರಾಮದಲ್ಲಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ.

ಶಿರೋಳ ಗ್ರಾಮದ ವಾಸಿ ವೆಂಕಣ್ಣ ಮಳಲಿ ಮಾತನಾಡಿ, "ನಮ್ಮ ಗ್ರಾಮಕ್ಕೆ 2003ರವರೆಗೂ ವಿದ್ಯುತ್ ಸಮಸ್ಯೆ ತೀವ್ರವಾಗಿತ್ತು, ಕೃಷಿಗೆ ಸಮರ್ಪಕವಾಗಿ ನೀರು ಕೊಡಲು ಕೂಡ ವಿದ್ಯುತ್ ಕೊರತೆ ಇತ್ತು, ಇದರಿಂದ ಪ್ರತಿ ಬಾರಿ ನಷ್ಟವಾಗುತ್ತಿತ್ತು. ಕರ್ನಾಟಕ ವಿದ್ಯುತ್ ಮಂಡಳಿಯ (ಕೆಇಬಿ) ಅಧಿಕಾರಿಗಳು ಸರಿಯಾದ ವಿದ್ಯುತ್ ಪೂರೈಕೆಗಾಗಿ ಮಾಡಿದ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ 2003 ರಲ್ಲಿ ಶಿರೋಳ ಗ್ರಾಮ ಪಂಚಾಯಿತಿ ಕಚೇರಿ ಎದುರು ರೈತ ಸಂಘದ ಮುಖಂಡರ ನೇತೃತ್ವದಲ್ಲಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ತಂಡವನ್ನು ಪಂಚಾಯಿತಿ ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ಮಾಡಲಾಗಿತ್ತು" ಎಂದು ಹೇಳಿದರು.

ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವವರೆಗೂ ವಿದ್ಯುತ್ ಬಿಲ್ ಕಟ್ಟದಂತೆ ಸೂಚನೆ ನೀಡಿದ್ದರು. ಧರಣಿ ನಂತರ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿದ್ದರೂ, ಗ್ರಾಮಸ್ಥರು ಮಾತ್ರ ವಿದ್ಯುತ್ ಬಿಲ್ ಕಟ್ಟುವುದನ್ನು ನಿಲ್ಲಿದ್ದಾರೆ ಎಂದು ಗ್ರಾಮಸ್ಥ ವೆಂಕಣ್ಣ ಮಳಲಿ ತಿಳಿಸಿರುವುದಾಗಿ ವರದಿಯಾಗಿದೆ.

ಶಿರೋಲ್‌ನಲ್ಲಿ ಅನೇಕ ಹೊಸ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ, ಮಾಲೀಕರು ಸ್ವತಃ ವಿದ್ಯುತ್ ಮೀಟರ್‌ಗಳು ಮತ್ತು ಕೇಬಲ್‌ಗಳನ್ನು ಸಂಬಂಧಪಟ್ಟ ಇಲಾಖೆಯ ಅನುಮೋದನೆಯಿಲ್ಲದೆ ಅಳವಡಿಸಿದ್ದಾರೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+