ಮಹಿಳಾ ಮತದಾರರು ಹೆಚ್ಚಿರುವ ಕಡೆ ಪಿಂಕ್ ಮತಗಟ್ಟೆ ಸ್ಥಾಪನೆ
ಬಾಗಲಕೋಟೆ, ಮೇ 11 : ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇದ್ದು, ಮತದಾನ ನಡೆಯುವ ಸ್ಥಳಗಳಿಗೆ ಸಿಬ್ಬಂದಿಗಳು ಮತದಾನಕ್ಕೆ ಬೇಕಾಗುವ ಸಾಮಾಗ್ರಿಗಳನ್ನು
ಸಂಗ್ರಹಿಸಿ ತೆರಳಿದರು.
ಜಿಲ್ಲೆಯ ವಿವಿಧ ಮತಗಟ್ಟೆ ಕೇಂದ್ರಗಳಿಗೆ ತೆರಳಲು ಸಿಬ್ಬಂದಿಗೆ ಕೆಎಸ್ಆರ್ ಟಿಸಿ ಬಸ್ ಹಾಗೂ ಖಾಸಗಿ ವಾಹನಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿತ್ತು. ಇನ್ನು ಪೊಲೀಸ್ ಸಿಬ್ಬಂದಿ, ಅರೆಸೇನಾ ಪಡೆಯವರು, ಹೋಮ್ ಗಾರ್ಡ್ಸ್ ಸಿಬ್ಬಂದಿಯನ್ನು ಸಹ ಮತಗಟ್ಟೆ ಭದ್ರತೆಗೆ ಕಳುಹಿಸಲಾಯಿತು.
ಜಿಲ್ಲೆಯ 7 ಮತಕ್ಷೇತ್ರಗಳ ಪೈಕಿ 15 ಮತಗಟ್ಟೆಗಳಲ್ಲಿ ಮಹಿಳಾ ಮತದಾರರು ಹೆಚ್ಚಿಗೆ ಇರುವ ಮತಗಟ್ಟೆಗಳಲ್ಲಿ ಸಖಿ/ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆ ಸಿಬ್ಬಂದಿಗಳನ್ನು ಮತಗಟ್ಟೆಗೆ ರವಾನಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ನಗರದ ಸಕ್ರಿ ಕಾಲೇಜ್ ಮೈದಾನದಲ್ಲಿ ನಡೆಯಿತು. ಜಿಲ್ಲೆಯಲ್ಲಿ 14,546 ಅಂಗವೈಕಲ್ಯ ಹೊಂದಿರುವ ಮತದಾರರು ಇದ್ದಾರೆ. ಅವರಿಗೆ ಮತಗಟ್ಟೆ ಒಳಗೆ ಹೋಗಲು ವೀಲ್ ಚೇರ್ ವ್ಯವಸ್ಥೆ, ಮ್ಯಾಗ್ನಿಪೈಯಿಂಗ್ ಲೆನ್ಸ್ ಹಾಗೂ ಹಿರಿಯ ನಾಗರಿಕರಿಗೆ ವಾಕಿಂಗ್ ಸ್ಟಿಕ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ 1696 ಮತಗಟ್ಟೆಗಳಿಗೆ 10,176 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇವಿಎಂ ಹಾಗೂ ವಿವಿಪ್ಯಾಟ್ ಮಶಿನ್ ಹಾಗೂ ದಾರ ಮತ್ತು ಮತದಾನ ದಿನದಂದು ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಸಿಬ್ಬಂದಿಗೆ ಚುನಾವಣಾ ಅಧಿಕಾರಿಗಳು ನೀಡಿದರು.

ಬಾಗಲಕೋಟೆ ಜಿಲ್ಲೆಯ ಮತದಾರರ ವಿವರ
ಮುಧೋಳ-1,96,094
ತೇರದಾಳ-2,20,340
ಜಮಖಂಡಿ-203681
ಬೀಳಗಿ-218214
ಬಾದಾಮಿ-217721
ಬಾಗಲಕೋಟೆ-230825
ಹುನಗುಂದ-214145
ಒಟ್ಟು 15,01020 ಮತದಾರರು ಇದ್ದಾರೆ.












Click it and Unblock the Notifications