ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾದಾಮಿ ಐಟಿ ದಾಳಿ ನೆಪ ಮಾತ್ರ: ಎಚ್‌ಡಿಕೆ ಆರೋಪ

By Nayana
|
Google Oneindia Kannada News

ಬಾಗಲಕೋಟೆ, ಮೇ 09: ಐಟಿ ದಾಳಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅವರ ನಿರೀಕ್ಷೆಯಂತೆ ದೊಡ್ಡಮಟ್ಟದ ಹಣ ಸಿಗುತ್ತಿಲ್ಲ. ಕೇವಲ ನೆಪಮಾತ್ರಕ್ಕೆ ಮಾತ್ರ ಐಟಿ ದಾಳಿ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಮಾತನಾಡಿದ ಅವರು, ಆರ್.ಆರ್. ನಗರದ ಚುನಾವಣೆ ಮುಂದೂಡಿದರೆ ಒಳ್ಳೆಯದು. ಎಲ್ಲೆಲ್ಲಿ ಜೆಡಿಎಸ್ ಸ್ಟ್ರಾಂಗ್ ಇದೆಯೋ ಅಲ್ಲಿ ಈ ರೀತಿ ನಡೆಯುತ್ತಿದೆ. ಕೇವಲ ಆರ್.ಆರ್‌. ನಗರದಲ್ಲಿ ಇದು ನಡೆಯುತ್ತಿಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲೂ ನಮ್ಮ ಪಕ್ಷದ ಪರ ಇರುವ ಗ್ರಾಮದ ಮತದಾರರ ಹೆಸರು ಡಿಲಿಟ್ ಮಾಡಿದ್ದಾರೆ ಎಂದರು.

ಆನಂದ್ ಸಿಂಗ್ ಗೆ ಸೇರಿದ ಬಾದಾಮಿಯ ರೆಸಾರ್ಟ್ ಮೇಲೆ ಐಟಿ ದಾಳಿಆನಂದ್ ಸಿಂಗ್ ಗೆ ಸೇರಿದ ಬಾದಾಮಿಯ ರೆಸಾರ್ಟ್ ಮೇಲೆ ಐಟಿ ದಾಳಿ

ತಹಶೀಲ್ದಾರ್ , ಆರ್ ಓ ಸೇರಿದಂತೆ ಅಧಿಕಾರಿಗಳು 10 ಸಾವಿರಕ್ಕೂ ಅಧಿಕ ಮತದಾರರ ಹೆಸರನ್ನು ಡಿಲೀಟ್ ಮಾಡಿದ್ದಾರೆ. ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ.

HDK accuses IT raid on Congress only name shake

ನಾವೇನು ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ದೂರು ನೀಡುವುದಿಲ್ಲ. ಒಂದೊಮ್ಮೆ ದೂರು ನೀಡಿದರೂ ಪ್ರಯೋಜನವಿಲ್ಲ. ಚುನಾವಣೆ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸೋ ನಿರೀಕ್ಷೆ ನಮಗಿಲ್ಲ. ಚುನಾವಣೆ ಆಯೋಗದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯದಲ್ಲಿ ತೀರ್ಪು ನೀಡು೮ವವರು ಯಡಿಯೂರಪ್ಪ, ಸಿದ್ದರಾಮಯ್ಯ ಅಲ್ಲ. ರಾಜ್ಯದ ಜನರೇ ತೀರ್ಪುನೀಡಲಿದ್ದಾರೆ. ಇದರಿಂದ ರಾಜ್ಯದಲ್ಲಿ ಯಾರಿಗೆ ಎಷ್ಟು ಸೀಟ್ ಬರುತ್ತದೆ ಎಂದುಕಾದು ನೋಡೋಣ ಎಂದರು.

English summary
Former chief minister H.D.Kumaraswamy accused Income Tax department that raids were only name shake on congress and no big amount was found during the inspection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X