ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ವೈ ಮೇಟಿ ರಾಸಲೀಲೆ ಸಿಡಿ ನಾನು ನೋಡಿಲ್ಲ: ಅನುಪಮಾ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜನವರಿ 30: 'ಶಾಸಕ ಎಚ್.ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ ನಾನು ಮಧ್ಯವರ್ತಿಯಾಗಿದ್ದು ನಿಜ, ಆದರೆ, ಸಿಡಿಯಲ್ಲಿ ಏನಿತ್ತು ಎಂದು ನಾನು ನೋಡಿಲ್ಲ, ಪೇದೆ ಶುಭಾಶ್ ಮುಗಳಖೋಡ್ ಸಿಡಿಯೊಂದಿಗೆ ನನ್ನನ್ನ ಭೇಟಿಯಾಗಿದ್ರು' ಎಂದು ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾಯದರ್ಶಿ ಅನುಪಮಾ ಶೆಣೈ ಹೇಳಿದರು.

ಪ್ರಾದೇಶಿಕ ಪಕ್ಷ ಸ್ಥಾಪನೆ ಕುರಿತು ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 'ಸಿಡಿಯೊಂದಿಗೆ ಬಂದಿದ್ದ ಪೇದೆ ಸುಭಾಶ್‌ಗೆ ರಾಜಶೇಖರ್ ಮುಲಾಲಿ ನಂಬರ್ ಕೊಟ್ಟಿದೆ, ಆದ್ರೆ ಆ ಸಿಡಿಯಲ್ಲೇನಿದೆ' ಎಂದು ನಾನು ನೋಡಿಲ್ಲ ಎಂದರು. ಮಾಧ್ಯಮದವರ ಪ್ರಶ್ನೆಗಳ ಸುರಿಮಳೆಗೆ ಬೇಸತ್ತ ಕೂಡ್ಲಿಗಿಯ ಮಾಜಿ ಡಿವೈ ಎಸ್ಪಿ ಅನುಪಮಾ ಅವರು ಸುದ್ದಿಗೋಷ್ಠಿ ಅರ್ಧಕ್ಕೆ ಬಿಟ್ಟು ಹೊರ ನಡೆದ ಘಟನೆ ನಡೆಯಿತು.

Elections 2018: Bharatiya Janashakti Congress Anupama Shenoy on HY Meti CD Scam

ಅಲ್ಲದೇ ಈ ಪ್ರಕರಣದಲ್ಲಿ ಸಂತ್ರಸ್ಥೆ ವಿಜಯಲಕ್ಷ್ಮಿ ಡೀಲ್ ಮಾಡಿಕೊಂಡ ಬಗ್ಗೆ ಮಾಧ್ಯಮದವರು ಪ್ರಡ್ನಿಸಿದಾಗ ಗಲಿಬಿಲಿಯಾದ ಅನುಪಮಾ ಶೆಣೈ, ಬಾಗಲಕೋಟೆ ಮಾಧ್ಯದವರೆಲ್ಲ ಶಾಸಕ ಎಚ್.ವೈ ಮೇಟಿ ಪರವಾಗಿದ್ದೀರಿ ಎಂದು ಆರೋಪಿಸಿದರು.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಅನುಪಮಾ ಶೆಣೈ ಮಧ್ಯೆ ಕೆಲಕಾಲ ವಾಗ್ವಾದ ನಡೆದಾಗ, ಮಾಧ್ಯಮದವರೆಲ್ಲ ಸಂತ್ರಸ್ಥೆ ವಿಜಯಲಕ್ಷ್ಮಿಯನ್ನ ನ್ಯೂಸ್‌ಗಾಗಿ ಬಳಸಿಕೊಂಡಿದ್ದೀರಿ ಎಂದು ಆರೋಪಿಸಿ ಹೊರ ನಡೆದರು.

English summary
Former Deputy Superintendent of Police of Kudligi, Bharatiya Janashakti Congress general secretary Anupama Shenoy says she has not seen the MLA HY Meti CD visuals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X