ಬಾಗಲಕೋಟೆಯ ಶಿವಯೋಗಿ ಮಂದಿರಕ್ಕೆ ಅಮಿತ್ ಶಾ ಭೇಟಿ

Recommended Video

      ಬಾಗಲಕೋಟೆಯ ಶಿವಯೋಗಿ ಮಂದಿರಕ್ಕೆ ಅಮಿತ್ ಶಾ ಭೇಟಿ | Oneindia Kannada

      ಬಾಗಲಕೋಟೆ, ಏಪ್ರಿಲ್ 03 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಾಗಲಕೋಟೆಯ ಶಿವಯೋಗ ಮಂದಿರಕ್ಕೆ ಭೇಟಿ ನೀಡಿದರು. ಎರಡು ದಿನಗಳ ಪ್ರವಾಸಕ್ಕಾಗಿ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಿದ್ದಾರೆ.

      ಮಂಗಳವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿರುವ ಶಿವಯೋಗ ಮಂದಿರಕ್ಕೆ ಅಮಿತ್ ಶಾ ಭೇಟಿ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ಪ್ರಹ್ಲಾದ್ ಜೋಶಿ, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

      ನಂತರ ರಾಷ್ಟ್ರೀಯ ವೀರಶೈವ ಮಹಾಸಭಾ ಹಮ್ಮಿಕೊಂಡಿದ್ದ ಸಂತರೊಂದಿಗೆ ನಡೆದ ಸಂವಾದದಲ್ಲಿ ಅಮಿತ್ ಶಾ ಪಾಲ್ಗೊಂಡರು. ಅನ್ನದಾನ ಶಿವಯೋಗಿಗಳು, ಶ್ರೀಶೈಲ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ನೂರಾರು ವೀರಶೈವ ಪೂಜ್ಯರು ಸಂವಾದದಲ್ಲಿ ಪಾಲ್ಗೊಂಡಿದ್ದರು.

      Amit Shah visits Shivayogi mandir Badami, Bagalkot

      'ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ವೀರಶೈವ ಲಿಂಗಾಯತ ಎಂದು ಸಮಾಜವನ್ನು ಒಡೆಯುವ ಶಕ್ತಿ ಹುಟ್ಟುಕೊಂಡಿದೆ' ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

      'ಒಗ್ಗಟ್ಟಾಗಿದ್ದ ವೀರಶೈವ ಮತ್ತು ಲಿಂಗಾಯತ ಸಮಾಜವನ್ನು ಒಂದು ಕೇವಲ ರಾಜಕೀಯಕ್ಕೋಸ್ಕರ ಒಡೆಯುವ ಕೆಲಸವನ್ನು ಮಾಡಿದ್ದಾರೆ. ಬರುವ ಬಿಜೆಪಿ ಸರ್ಕಾರ ನಿಮ್ಮ ಅಪೇಕ್ಷಯಂತೆ ಕೆಲಸ ಮಾಡಲಿದೆ' ಎಂದು ಹೇಳಿದರು.

      Amit Shah visits Shivayogi mandir Badami, Bagalkot

      'ರಾಜ್ಯದಲ್ಲಿ ಚುನಾವಣೆ ಆರಂಭವಾಗಿದೆ, ಮಠಾಧೀಶರ ಆಶೀರ್ವಾದ ನಮಗೆ ಬೇಕು. ವೀರಶೈವ ಸಮಾಜ ಶಿಸ್ತು ಮತ್ತು ಪ್ರಶಿಕ್ಷಣಕ್ಕೆ ದಾರಿಯಾಗಿದೆ. ಧರ್ಮದ ಆಧಾರದ‌ ಮೇಲೆ ಆಚರಣೆಗಳು ನಡೆಯುತ್ತಿವೆ. ರಾಜಕೀಯ ಕಾರಣಕ್ಕಾಗಿ ಧರ್ಮವನ್ನು ಒಡೆಯುವ ಕೆಲಸವನ್ನು ಮಾಡಲು ನಾವು ಬಿಡುವುದಿಲ್ಲ' ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+