ರಶ್ಮಿಕಾ ಮಂದಣ್ಣ ಫಸ್ಟ್‌ ಕ್ರಶ್ ರಕ್ಷಿತ್‌ ಶೆಟ್ಟಿ ಅಲ್ಲ, ಮತ್ಯಾರು? ಅವ್ರಿಗೂ ಅವರ ಕೈಲಿರೋ ಟ್ಯಾಟೂಗೂ ಸಂಬಂಧ ಇದೆಯಾ!

ರಶ್ಮಿಕಾ ಮದುವೆ ಆಗಿ ಒಂದಿಷ್ಟು ತಿಂಗಳು ಕಳೆದಿದೆ. ಅವರ ಕೈಯಲ್ಲೊಂದು ಟ್ಯಾಟೂ ಮದುವೆಗೆ ಮುಂಚಿನಿಂದಲೂ ಇದೆ. ಅವರ ಫಸ್ಟ್‌ ಕ್ರಶ್‌ ರಕ್ಷಿತ್‌ ಶೆಟ್ಟಿ ಅಲ್ಲ. ಬೇರೆ ಯಾರೋ ಇದ್ದಾರೆ. ಅವರು ಯಾರು ಅನ್ನೋದು ಈಗ ಗೊತ್ತಾಗಿದೆ. ಅವರ ಕೈಯಲ್ಲಿರೋ ಟ್ಯಾಟೂಗೂ ಈ ಕ್ರಶ್‌ಗೂ ಸಂಬಂಧ ಇದೆಯಾ?

ರಶ್ಮಿಕಾ ಮಂದಣ್ಣ ನಟನೆಯ ʼಕಾಕ್‌ಟೇಲ್‌ 2ʼ ಸಿನಿಮಾ ಕಲೆಕ್ಷನ್‌ ೫೦ ಕೋಟಿ ದಾಟುತ್ತಿದೆ. ಈ ಸಿನಿಮಾ ಎಂಟರ್‌ಟೇನ್‌ಮೆಂಟ್‌ ಕೊಡೋದ್ರಲ್ಲಿ ಯಶಸ್ವಿ ಆಗಿದೆ ಅಂತ ಜನ ಮಾತಾಡ್ಕೊಳ್ತಿದ್ದಾರೆ. ಇಲ್ಲಾಂದರೆ ಸಾಲು ಸಾಲು ಬಾಲಿವುಡ್‌ ಸಿನಿಮಾಗಳು ತೋಪಾಗುತ್ತಿರುವಾಗ ಎರಡೇ ದಿನದಲ್ಲಿ ಐವತ್ತು ಕೋಟಿ ರು. ಕಲೆಕ್ಷನ್‌ ದಾಟೋದು ಅಂದರೆ ಸಣ್ಣ ಮಾತಲ್ಲ. ಇದರಲ್ಲಿ ರಶ್ಮಿಕಾಗಿಂತ ಕೃತಿ ಸನೂನ್‌ ಪಾತ್ರವೇ ಹೈಲೈಟ್‌ ಆಗಿದೆ. ರಶ್ಮಿಕಾ ಅಭಿನಯಕ್ಕೆ ಅಷ್ಟಾಗಿ ಸ್ಕೋಪ್‌ ಸಿಕ್ಕಿಲ್ಲ. ಇದರ ಜೊತೆಗೆ ಒಂದಿಷ್ಟು ಮಂದಿ ರಶ್ಮಿಕಾ ಹಿಂದಿ ಉಚ್ಚರಣೆ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಆದರೆ ಅದಕ್ಕೆ ರಶ್ಮಿಕಾ ಅಭಿಮಾನಿಗಳೂ ಕರಕ್ಟಾಗಿ ಉತ್ತರ ಕೊಟ್ಟಿದ್ದಾರೆ. ಸಾಲು ಸಾಲು ಬಾಲಿವುಡ್‌ ನಟಿಯರು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸುತ್ತಾರೆ. ಅವರ ತೆಲುಗು, ಕನ್ನಡ ಅಥವಾ ತಮಿಳು ಉಚ್ಛರಣೆ ಎಷ್ಟರ ಮಟ್ಟಿಗೆ ಸರಿ ಇರುತ್ತೆ.. ಆದರೂ ಅವರ ಭಾಷಾ ಕಲಿಕೆಯನ್ನು ದಕ್ಷಿಣ ಭಾರತೀಯರು ಹೀಗಳೆದಿಲ್ಲ. ಬದಲಿಗೆ ಸ್ನೇಹದಿಂದ ಅವರ ಭಾಷಾ ಕಲಿಕೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಸದಾ ಹೊಟ್ಟೆಕಿಚ್ಚು ಪಡುವುದರಲ್ಲಿ ಇನ್ನೊಬ್ಬರು ಯಶಸ್ಸಿನ ಮೆಟ್ಟಿಲೇರುತ್ತಿದ್ದಾರೆ ಅಂದರೆ ಅವರನ್ನು ಹೇಗೆ ಬೀಳಿಸೋದು ಅಂತ ಲೆಕ್ಕಾಚಾರ ಹಾಕೋದ್ರಲ್ಲಿ ಬಾಲಿವುಡ್‌ನವರು ಪಂಟರು. ಅವರು ತಮ್ಮ ಈ ಟ್ಯಾಲೆಂಟ್‌ ಅನ್ನು, ಈ ಖತರ್‌ನಾಕ್‌ ಕೆಲಸಕ್ಕೆ ಹಾಕುವ ಸಮಯವನ್ನು ಒಳ್ಳೆ ಸಿನಿಮಾ ಮಾಡಲು ಕೊಟ್ಟಿದ್ದಿದ್ದರೆ ಬಾಲಿವುಡ್‌ಗೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಸೌತ್‌ ಇಂಡಸ್ಟ್ರಿಯವರು ಬಾಲಿವುಡ್‌ನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Rashmika Mandanna

ಪಾತ್ರಕ್ಕೆ ಟೀಕೆ ಬಂದರೂ ರಶ್ಮಿಕಾ ಬೇಡಿಕೆ ತಗ್ಗಿಲ್ಲ

ಇನ್ನು ರಶ್ಮಿಕಾ ವಿಚಾರಕ್ಕೆ ಬಂದರೆ ಅವರ ʼಕಾಕ್‌ಟೇಲ್‌ 2ʼ ಸಿನಿಮಾ ಯಶಸ್ವಿಯಾದರೂ ಅವರ ಪಾತ್ರದ ಬಗ್ಗೆ ಅಷ್ಟಾಗಿ ಪಾಸಿಟಿವ್‌ ಕಾಮೆಂಟ್‌ ಬಂದಿಲ್ಲ ಅಂತಲೇ ಹೇಳಬಹುದು. ಕೃತಿ ಸನೂನ್‌ ಪಾತ್ರದಷ್ಟು ಇವರ ಪಾತ್ರಕ್ಕೆ ಪ್ರಿಫರೆನ್ಸ್‌ ಇಲ್ಲದಿದ್ದರೂ ಸಂಭಾವನೆ ವಿಚಾರದಲ್ಲಿ ಮೋಸ ಆಗಿಲ್ಲ ಎಂಬ ಮಾತು ಕೇಳಿ ಬಂದಿದೆ. ರಶ್ಮಿಕಾ ಬರೋಬ್ಬರಿ ೧೫ ಕೋಟಿ ಸಂಭಾವನೆ ಪಡೆದು ದುಬಾರಿ ಗಳಿಕೆಯ ಹೀರೋಯಿನ್‌ಗಳಲ್ಲಿ ಒಬ್ಬರು ಅಂತ ಗುರುತಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಸಿನಿಮಾದಲ್ಲಿ ಮಹತ್ವವಿಲ್ಲದೇ ಹೋದರೂ ಅವರ ಚರಿಷ್ಮಾಕ್ಕೆ ಇದೇನೂ ಧಕ್ಕೆಯಾದ ಹಾಗಿಲ್ಲ. ಅವರ ಮಿಲಿಯನ್‌ಗಟ್ಟನೆ ಫ್ಯಾನ್‌ ಫಾಲೋವಿಂಗ್‌ ಅವರ ಬೆಂಬಲಕ್ಕೆ ಸದಾ ನಿಲ್ಲುತ್ತದೆ. ಇದೀಗ ಅವರ ಫಸ್ಟ್‌ ಕ್ರಶ್‌ ಬಗೆಗಿನ ಮಾತು ಸಖತ್ತಾಗಿ ಹೈಪ್‌ ಕ್ರಿಯೇಟ್‌ ಮಾಡಿದೆ.

ಶ್ರೀಲೀಲಾ ಕನ್ನಡ ಕೇಳಿದ್ರೆ ಖುಷಿಯಾಗುತ್ತೆ: ರಿಷಬ್‌ ಮುಂದೆ ರಶ್ಮಿಕಾಗೆ ಟಾಂಟ್‌ ಕೊಟ್ರಾ ನಿರೂಪಕ?
ಶ್ರೀಲೀಲಾ ಕನ್ನಡ ಕೇಳಿದ್ರೆ ಖುಷಿಯಾಗುತ್ತೆ: ರಿಷಬ್‌ ಮುಂದೆ ರಶ್ಮಿಕಾಗೆ ಟಾಂಟ್‌ ಕೊಟ್ರಾ ನಿರೂಪಕ?

ಮೊದಲ ಕ್ರಶ್‌ ಯಾರು?

ರಶ್ಮಿಕಾ ಮಂದಣ್ಣ ಅವರ ಮೊದಲ ಕ್ರಶ್‌ ಯಾರು ಅನ್ನೋದು ಸದ್ಯದ ಪ್ರಶ್ನೆ. ಕೆಲವರು ರಕ್ಷಿತ್‌ ಶೆಟ್ಟಿ ಹೆಸರು ಹೇಳಿದರೂ ಅವರು ಸರಿಯುತ್ತರ ಅಲ್ಲ. ಅವರಿಗೆ ಫಸ್ಟ್‌ ಕ್ರಶ್‌ ಆಗಿದ್ದು ಏಳನೇ ಕ್ಲಾಸಿನ ಹುಡುಗನ ಮೇಲಂತೆ. ರಶ್ಮಿಕಾ ಆಗ ಐದನೇ ಕ್ಲಾಸಿನಲ್ಲಿದ್ದರಂತೆ. ಆ ಏಳನೇ ಕ್ಲಾಸ್‌ ಹುಡುಗ ಒಂಚೂರು ಸ್ಮೈಲ್‌ ಮಾಡಿದರೂ ಇಡೀ ದಿನ ಫುಲ್‌ ಸ್ವಿಂಗ್‌ನಲ್ಲಿ ಇರುತ್ತಿದ್ದರಂತೆ. ಆ ಹುಡುಗ ಪಾಸ್‌ ಔಟ್‌ ಆಗಿ ಹೋದಮೇಲೆ ಬೇಜಾರಾಗಿತ್ತಂತೆ. ಫಸ್ಟ್‌ ಕ್ರಶ್‌ ಅನ್ನೋದು ಸಖತ್‌ ಕ್ಯೂಟ್‌ ಆಗಿರುತ್ತೆ. ಲೈಫ್‌ಲಾಂಗ್‌ ನೆನಪಿಟ್ಟುಕೊಳ್ಳೋ ಹಾಗಿರುತ್ತೆ ಅನ್ನೋದು ರಶ್ಮಿಕಾ ಮಾತು.

ಕೈಯಲ್ಲಿರುವ ಟ್ಯಾಟೂಗೂ ಕ್ರಶ್‌ಗೂ ಸಂಬಂಧ..

ಫಸ್ಟ್‌ ಕ್ರಶ್‌ಗೂ ಅವರ ಕೈಯಲ್ಲಿರುವ ಟ್ಯಾಟೂಗೂ ಯಾವುದೇ ಸಂಬಂಧ ಇಲ್ಲವಂತೆ. ರಶ್ಮಿಕಾ ಅವರ ಕೈಯಲ್ಲಿರುವ ಆ ಕ್ಯೂಟ್‌ ಟ್ಯಾಟೂವನ್ನು ಅವರು ೧೬ನೇ ವಯಸ್ಸಿನಲ್ಲಿ ಹಾಕಿಸಿಕೊಂಡಿರೋದಂತೆ. ಮನೆಯಲ್ಲಿ ಅಮ್ಮನಿಗಾಗಲೀ ಅಪ್ಪನಿಗಾಗಲೀ ಈ ವಿಷಯವೇ ಗೊತ್ತಿರಲಿಲ್ಲವಂತೆ. ಆದರೂ ರಶ್ಮಿಕಾಗೆ ಟ್ಯಾಟೂ ಬಗ್ಗೆ ಹೆಮ್ಮೆ ಇದೆ.

 Rashmika Mandanna: ಅವನನ್ನ ಮದುವೆಯಾಗಿದ್ದೇ ನನ್ನ ಬದುಕಿನ ಅತ್ಯಂತ ಸುಂದರ ಕ್ಷಣ: ಸೀಕ್ರೆಟ್‌ ಬಿಚ್ಚಿಟ್ಟ ರಶ್ಮಿಕಾ
Rashmika Mandanna: ಅವನನ್ನ ಮದುವೆಯಾಗಿದ್ದೇ ನನ್ನ ಬದುಕಿನ ಅತ್ಯಂತ ಸುಂದರ ಕ್ಷಣ: ಸೀಕ್ರೆಟ್‌ ಬಿಚ್ಚಿಟ್ಟ ರಶ್ಮಿಕಾ

ಟ್ಯಾಟೂದಲ್ಲಿ ಏನಿದೆ?

Irreplaceable ಅಂತ ರಶ್ಮಿಕಾ ಕೈಯ ಹಿಂಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕಾಲೇಜ್‌ನಲ್ಲಿರುವಾಗ ಒಬ್ಬ ಹುಡುಗ ಹೇಳಿದ್ನಂತೆ. ಹುಡುಗೀರು ಟ್ಯಾಟೂ ಹಾಕಿಸಿಕೊಳ್ಳೋದು ತುಂಬಾನೇ ಕಷ್ಟ. ಸೂಜಿಯಿಂದ ಚುಚ್ಚಿಸಿಕೊಂಡು ನೋವು ತಿನ್ನುವಷ್ಟು ಶಕ್ತಿ ಅವರಿಗಿಲ್ಲ ಅಂತೆಲ್ಲ ಮಾತನಾಡಿದ್ದನಂತೆ. ಇದರಿಂದ ರೊಚ್ಚಿಗೆದ್ದ ರಶ್ಮಿಕಾ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡೇ ಬಿಟ್ಟರಂತೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಯುನೀಕ್‌ನೆಸ್‌ ಇರುತ್ತೆ. ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವುದಕ್ಕಾಗೋದಿಲ್ಲ, ಒಬ್ಬರ ಥರ ಇನ್ನೊಬ್ಬರು ಇರೋದೂ ಇಲ್ಲ. ಹೀಗಾಗಿ ತನ್ನ ಬದಲಿಗೆ ಯಾರನ್ನೂ ಪ್ಲೇಸ್‌ಮೆಂಟ್‌ ಮಾಡಕ್ಕಾಗಲ್ಲ ಅಂತ Irreplaceable ಅಂತ ಟ್ಯಾಟೂ ಹಾಕಿಸಿಕೊಂಡರಂತೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+