Liquor Price Hike: ಮದ್ಯ ಪ್ರಿಯರಿಗೆ ಶಾಕ್ ಕೊಟ್ಟು ಭರ್ಜರಿ ಲಾಭ ಮಾಡಿಕೊಂಡ ಕರ್ನಾಟಕ ಸರ್ಕಾರ
Liquor Price Hike: ಕರ್ನಾಟಕ ಸರ್ಕಾರವು ಹೊಸ ಅಬಕಾರಿ ನೀತಿಯನ್ನು ಜಾರಿ ಮಾಡುವ ಮೂಲಕ ರಾಜ್ಯದ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿತ್ತು. ಈ ಮೂಲಕ ಕರ್ನಾಟಕದಲ್ಲಿ ವಿವಿಧ ಮದ್ಯಗಳ ಬೆಲೆ ಏರಿಕೆಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಮದ್ಯದ ಬೆಲೆಗಳಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಬೆಲೆಯು ಭಾರೀ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಸರ್ಕಾರವು ನೂತನ ಅಬಕಾರಿ ನೀತಿಯನ್ನು 2026ರ ಮೇ 11ರಿಂದ ಜಾರಿಗೆ ಬರುವಂತೆ ಆದೇಶ ಮಾಡಿತ್ತು. ಇನ್ನು ಹೊಸ ಅಬಕಾರಿ ನೀತಿಯಿಂದ ಹಲವು ಮಹತ್ವದ ಬದಲಾವಣೆಗಳು ಆಗಿವೆ. ಅದರಲ್ಲಿ ಮುಖ್ಯವಾಗಿ ಮದ್ಯ ಪ್ರಿಯರಿಗೆ ಹೊಸ ಅಬಕಾರಿ ನೀತಿಯಿಂದ ಸಂಕಷ್ಟವಾಗಿದ್ದರೆ, ರಾಜ್ಯ ಸರ್ಕಾರಕ್ಕೆ ಮಾತ್ರ ಭರ್ಜರಿ ಆದಾಯ ಹರಿದು ಬಂದಿದೆ.
ಕರ್ನಾಟಕದಲ್ಲಿ ಹೊಸ ಅಬಕಾರಿ ನೀತಿ ಜಾರಿಯಾದ ಮೇಲೆ ಅಂದರೆ 30 ದಿನಗಳಲ್ಲಿ ಕರ್ನಾಟಕದಾದ್ಯಂತ 443.49 ಲಕ್ಷ ಲೀಟರ್‌ಗಳಷ್ಟು ಐಎಂಎಲ್ ಹಾಗೂ 403.10 ಲಕ್ಷ ಲೀಟರ್‌ಗಳಷ್ಟು ಬಿಯರ್ ಮಾರಾಟವಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ. 2025ರ ಮೇ 11ರಿಂದ ಜೂನ್ 11ರವರೆಗೆ 433.12 ಲಕ್ಷ ಲೀಟರ್‌ಗಳಷ್ಟು ಐಎಂಎಲ್ ಹಾಗೂ 252.87 ಲಕ್ಷ ಲೀಟರ್‌ಗಳಷ್ಟು ಬಿಯರ್ ಮಾರಾಟವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಇದೇ ಅವಧಿಯಲ್ಲಿ ಬರೋಬ್ಬರಿ 3,022 ಕೋಟಿ ರೂಪಾಯಿ ವರಮಾನ ಸಂಗ್ರಹವಾಗಿದೆ.

ಕಳೆದ ವರ್ಷಕ್ಕಿಂತಲೂ ಹೆಚ್ಚು ಆದಾಯ
ಇನ್ನು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಸರ್ಕಾರವು ವಿವಿಧ ಮದ್ಯಗಳ ಬೆಲೆ ಹೆಚ್ಚಳ ಮಾಡಿದರೂ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ. ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಮಾರಾಟವು ಭಾರೀ ಕುಸಿತ ಕಂಡಿತ್ತು. ಸರ್ಕಾರವು ಇದರ ಹೊರತಾಗಿ ಈಚೆಗೆ ಜಾರಿ ಮಾಡಿರುವ ಹೊಸ ಅಬಕಾರಿ ನೀತಿಯು ಹಲವು ಕಾರಣಗಳಿಗೆ ಭಿನ್ನವಾಗಿದೆ. ಇದರಿಂದ ಮಾರಾಟವು ಹೆಚ್ಚಳವಾಗಿದೆ ಉತ್ತಮ ಆದಾಯವೂ ಸಹ ಹರಿದು ಬರುತ್ತಿದೆ. 2025ರ ಮೇ 11-ಜೂನ್ 11ರ ನಡುವಿನ ಅವಧಿಗೆ ಹೋಲಿಕೆ ಮಾಡಿದರೆ, 2026ರ ಇದೇ ಅವಧಿಯಲ್ಲಿ ಬರೋಬ್ಬರಿ 150.23 ಲಕ್ಷ ಲೀಟರ್‌ಗಳಷ್ಟು ಬಿಯರ್ ಹೆಚ್ಚುವರಿಯಾಗಿ ಮಾರಾಟ ಆಗಿದೆ ಎಂದು ಹೇಳಲಾಗಿದೆ. ಇದರಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯ ಮೊತ್ತವೂ ಸಹ ಹೆಚ್ಚಳವಾಗಿದೆ.
ಮದ್ಯದ ಬೆಲೆ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರ
ಇನ್ನು ಕರ್ನಾಟಕ ಸರ್ಕಾರವು ಈಚೆಗೆ ಮದ್ಯದ ಬೆಲೆಯಲ್ಲಿ ಹೆಚ್ಚಳ ಮಾಡಿತ್ತು. ವಿವಿಧ ಮದ್ಯದ ಬೆಲೆಯು ಭಾರೀ ಹೆಚ್ಚಳವಾಗಿತ್ತು. ವಿಸ್ಕಿ, ರಮ್‌ನಂತಹ ವಿವಿಧ ಮದ್ಯಗಳ ಐಎಂಎಲ್ ಬೆಲೆಯನ್ನು ಹೊಸ ಅಬಕಾರಿ ನೀತಿ ಅಡಿಯಲ್ಲಿ ಭಾರೀ ಮೊತ್ತದಲ್ಲಿ ಹೆಚ್ಚಿಸಲಾಗಿತ್ತು. 50 ರೂಪಾಯಿಗೆ ಮಾರಾಟವಾಗುತ್ತಿದ್ದ 90 ಎಂ.ಎಲ್‌ನ ಟೆಟ್ರಾಪ್ಯಾಕ್‌ಗಳ ಬೆಲೆಯನ್ನು 78 ರೂಪಾಯಿಯಿಂದ 80 ರೂಪಾಯಿಗೆ ಹೆಚ್ಚಿಸಲಾಗಿತ್ತು. ಇದರಿಂದ ವಿವಿಧ ಮದ್ಯಗಳ ಮಾರಾಟವೂ ಸಹ ಹೆಚ್ಚಳವಾಗಿದೆ. ಅಲ್ಲದೆ ಸರ್ಕಾರಕ್ಕೆ ಬರುತ್ತಿದ್ದ ಆದಾಯವೂ ಸಹ ಗಣನೀಯವಾಗಿ ಹೆಚ್ಚಳವಾಗಿದೆ. 2025ರ ಮೇ 11-ಜೂನ್ 11ರ ಅವಧಿಗೆ ಹೋಲಿಕೆ ಮಾಡಿದರೆ, 2026ರ ಇದೇ ಅವಧಿಯಲ್ಲಿ ಐಎಂಎಲ್ ಮಾರಾಟವು ಕೇವಲ 10 ಲಕ್ಷ ಲೀಟರ್‌ಗಳಷ್ಟು ಮಾತ್ರ ಏರಿಕೆಯಾಗಿದೆ ಎಂದೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.














Click it and Unblock the Notifications