Gold Rate Today: ಇಂದು ಮಾರುಕಟ್ಟೆಯಲ್ಲಿ ಅಚ್ಚರಿ ಬೆಳವಣಿಗೆ; 22k ಬಂಗಾರ ದರದಲ್ಲಿ ಭಾರೀ ಏರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಚಿನ್ನಕ್ಕೆ ಬೇಡಿಕೆ ಮುಂದುವರಿದಿದ್ದು, ದರದಲ್ಲಿ ಏರಿಳಿತ ಕಂಡು ಬಂದಿದೆ. ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಇಂದು ಸೋಮವಾರ (ಜೂನ್ 22ರಂದು) 22 ಕ್ಯಾರಟ್ ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ದರ ಭಾರೀ ಏರಿಕೆ ದಾಖಲಿಸಿದೆ. ವಾರದ ಮೊದಲ ದಿನವೇ ಚಿನ್ನ ಗ್ರಾಹಕರಿಗೆ ಆಘಾತ ನೀಡಿದ್ದು, ವಾರ ಪೂರ್ತಿ ದರ ಹೆಚ್ಚಳ ಮುಂದುವರಿಯುವ ಸಾಧ್ಯತೆ ಇದೆ. ಇನ್ನೂ ಬೆಳ್ಳಿ ದರದಲ್ಲಿ ಬದಲಾವಣೆ ಆಗಿದೆಯಾ? ಇಲ್ಲಿದೆ ಮಾಹಿತಿ.

* ಇಂದು 22 ಕ್ಯಾರಟ್ 01 ಗ್ರಾಂ ಚಿನ್ನದ ಬೆಲೆಗೆ 40 ರೂಪಾಯಿ ಏರಿಕೆ ಆಗಿದೆ. ಒಟ್ಟು 10 ಗ್ರಾಂಗೆ 400 ರೂಪಾಯಿ ಹೆಚ್ಚಳವಾಗಿದ್ದು, ದರ 1,34,300 ರೂ. ಹೆಚ್ಚಾಗಿದೆ.

* ಅದೇ ರೀತಿ 24 ಕ್ಯಾರಟ್ ಒಂದು ಗ್ರಾಂ ಬಂಗಾರದ ದರ ಒಂದೇ ದಿನಕ್ಕೆ 43 ರೂಪಾಯಿಗೆ ಏರಿಕೆ ಆಗಿದೆ. ಒಟ್ಟು 10 ಗ್ರಾಂ ಚಿನ್ನದ ಬೆಲೆ 430ರೂಪಾಯಿಗೆ ಹೆಚ್ಚಾಗಿದ್ದ ದರ 1,46,510 ರೂಪಾಯಿ ಮುಟ್ಟಿದೆ.

Gold Rate Gain

* 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ 320 ರೂಪಾಯಿ ಏರಿಕೆ ಆಗಿದ್ದು, 10 ಗ್ರಾಂಗೆ 1,09,880 ರೂಪಾಯಿ ತಲುಪಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಜೂನ್ 16ರಿಂದ ನಿರಂತರವಾಗಿ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನವು ಜೂನ್ 20ರಿಂದ ಪಾಸಿಟಿವ್ ಟ್ರೆಂಡ್‌ಗೆ ಮರಳಿತು. ಶನಿವಾರ ಏರಿಕೆ ಆಗಿದ್ದು ಬಿಟ್ಟರೆ, ನೆನ್ನೆ ಭಾನುವಾರ ಚಿನ್ನ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದು, ಇಂದು ಸೋಮವಾರ ಮತ್ತೆ ಏರಿಕೆ ಆಗಿದ್ದು, ವ್ಯಾಪಾರಿಗಳು, ವರ್ತಕರ ನಿರಾಳತೆಗೆ ಕಾರಣವಾಗಿದೆ.

Gold, Silver Price: ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿದೆ ಜೂನ್ 21ರ ಚಿನ್ನದ ದರಪಟ್ಟಿ
Gold, Silver Price: ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿದೆ ಜೂನ್ 21ರ ಚಿನ್ನದ ದರಪಟ್ಟಿ

ಬೆಳ್ಳಿ ದರದಲ್ಲಿ ಆಯ್ತಾ ಬದಲಾವಣೆ?

ಚಿನ್ನದಂತೆ ಬೆಳ್ಳಿಯು ಆಭರಣ ಹಾಗೂ ಕೈಗಾರಿಕೆ ಉದ್ದೇಶಗಳಿಗೆ ನಿರಂತರವಾಗಿ ಬಳಕೆ ಆಗುತ್ತಿದೆ. ಇತ್ತೀಚೆಗೆ 4.2 ಲಕ್ಷ ರೂಪಾಯಿ ಗರಿಷ್ಠ ದರ ತಲುಪಿದ್ದ ದರವು ಇದೀಗ 2.50 ಲಕ್ಷ ರೂಪಾಯಿಗೆ ಯಥಾ ಸ್ಥಿತಿ ಕಾಯ್ದುಕೊಂಡಿದೆ. ಕಳೆದ ಮೂರು ದಿನಗಳಿಂದ ಒಂದು ಕೆಜಿ ಬೆಳ್ಳಿ ದರವು 2,50,000 ರೂಪಾಯಿಗೆ ಸ್ಥಿರವಾಗಿದೆ. ಸದ್ಯ ಯಾವುದೇ ಬದಲಾವಣೆ ಇಲ್ಲ. ಈ ವಾರದಲ್ಲಿ ಈ ಬಿಳಿ ಲೋಹದ ಬೆಲೆ ಕೊಂಚ ಹೆಚ್ಚಳ ಸಾಧ್ಯತೆ ಇದೆ.

ನಗರವಾರು 22 ಕ್ಯಾರಟ್ 1 ಗ್ರಾಂ ಚಿನ್ನದ ದರಪಟ್ಟಿ

ಬೆಂಗಳೂರು: 13,430 ರೂಪಾಯಿ

ಚೆನ್ನೈ: 13,599 ರೂಪಾಯಿ

ಮುಂಬೈ: 13,430 ರೂಪಾಯಿ

ದೆಹಲಿ: 13, 445 ರೂಪಾಯಿ

ಕೊಲ್ಕತ್ತಾ: 13,430 ರೂಪಾಯಿ

ಹೈದರಾಬಾದ್: 13,430 ರೂಪಾಯಿ

ಕೇರಳ: 13,430 ರೂಪಾಯಿ

ಪುಣೆ: 13,430 ರೂಪಾಯಿ

ಅಹ್ಮದಾಬಾದ್: 13,435 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+