ವಾರದಲ್ಲಿ ಎರಡು ದಿನ ಸ್ಮಾರ್ಟ್‌ ಫೋನ್‌ನಿಂದ ಸಂಪೂರ್ಣ ದೂರ : ಹೊಸ ಪ್ರಯೋಗದಿಂದ ವ್ಯಕ್ತಿಯ ಜೀವನದಲ್ಲಾದ ಬದಲಾವಣೆ ?

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಿಲ್ಲದ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ. ಹೀಗಿರುವಾಗ, ವಾರದಲ್ಲಿ ಎರಡು ದಿನ ಮೊಬೈಲ್ ಫೋನ್ ಸಂಪೂರ್ಣವಾಗಿ ಆಫ್ ಮಾಡಿ ಕುಳಿತುಕೊಳ್ಳುವುದು ಎನ್ನುವ ವಿಚಾರ ಕೇಳುವುದಕ್ಕೆ ಸುಲಭ ಎನಿಸಿದರೂ, ಅದನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದು ಸಾಧ್ಯವಾಗದ ಮಾತು. ವ್ಯಕ್ತಿಯೊಬ್ಬರು ತಾವು ಶನಿವಾರ ಮತ್ತು ಭಾನುವಾರ ಸ್ಮಾರ್ಟ್‌ ಪೋನ್‌ನಿಂದ ದೂರ ಉಳಿಯುವ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇಂಟರ್ನೆಟ್ ಜಗತ್ತಿಗೆ ನಾವು ಎಷ್ಟು ದಾಸರಾಗಿದ್ದೇವೆ ಎಂಬುದರ ಕುರಿತು ಈ ಪ್ರಯೋಗವು ಚರ್ಚೆ ಹುಟ್ಟು ಹಾಕಿದೆ.

ಡಿಜಿಟಲ್ ಜಗತ್ತಿನಿಂದ ದೂರ ಸರಿದ ಸಿದ್ಧಾರ್ಥ್ ಭಿಮಾನಿ:

ಸಿದ್ಧಾರ್ಥ್ ಭಿಮಾನಿ ಎಂಬುವವರು ವಾರಾಂತ್ಯದಲ್ಲಿ ಐಫೋನ್‌ನಿಂದ ದೂರ ಉಳಿಯಲು ಕೈಗೊಂಡ ಕಠಿಣ ನಿಯಮದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನಾನು ವಾರಾಂತ್ಯದಲ್ಲಿ ಡಿಜಿಟಲ್ ಡಿಟಾಕ್ಸ್ ಮಾಡುತ್ತಿದ್ದೆ. ಪ್ರತಿ ಶುಕ್ರವಾರ ರಾತ್ರಿ ನನ್ನ ಸ್ಮಾರ್ಟ್‌ಫೋನ್ ಆಫ್ ಮಾಡಿ, ಭಾನುವಾರದವರೆಗೆ ಸಾಮಾನ್ಯ ನೋಕಿಯಾ ಫ್ಲಿಪ್ ಫೋನ್ ಬಳಸಲು ಪ್ರಾರಂಭಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.

Man Switched Off His Smartphone

ಆರಂಭದಲ್ಲಿ ಈ ಬದಲಾವಣೆ ವಿಚಿತ್ರವೆನಿಸಿದರೂ, ಕ್ರಮೇಣ ಇದು ಅವರ ದಿನಚರಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಸಾಮಾಜಿಕ ಜಾಲತಾಣಗಳು, ಆಪ್ ನೋಟಿಫಿಕೇಶನ್‌ಗಳ ಕಿರಿಕಿರಿ ಇಲ್ಲದ ಕಾರಣ ಅವರ ದೈನಂದಿನ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡುಬಂದಿತು.

ಕುಟುಂಬದೊಂದಿಗೆ ಗುಣಮಟ್ಟದ ಸಮಯ:

"ಮೊಬೈಲ್ ಇಲ್ಲದ ಕಾರಣ ಅನಿರೀಕ್ಷಿತವಾಗಿ ಸಾಕಷ್ಟು ಬಿಡುವಿನ ಸಮಯ ಸಿಕ್ಕಿತು. ಇದರಿಂದಾಗಿ ಅವರು ಪುಸ್ತಕಗಳನ್ನು ಓದುವುದು, ಮಗಳೊಂದಿಗೆ ಆಟವಾಡುವುದು ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಸಾಧ್ಯವಾಗತೊಡಗಿತು. ಮಾತ್ರವಲ್ಲ ಸ್ಮಾರ್ಟ್‌ಫೋನ್ ಇಲ್ಲದ ಕಾರಣ ಊಟದ ಸಮಯ, ಮಾತುಕತೆಗಳು ಮತ್ತು ಸಣ್ಣಪುಟ್ಟ ಕೌಟುಂಬಿಕ ಕ್ಷಣಗಳು ಯಾವುದೇ ಅಡೆತಡೆಯಿಲ್ಲದೆ ನೆರವೇರಿದವು. ಇದು ಮನಸ್ಸಿಗೆ ನೆಮ್ಮದಿ ನೀಡಿ, ಆತಂಕವನ್ನು ಕಡಿಮೆ ಮಾಡಿತು ಎಂದು ಸಿದ್ಧಾರ್ಥ್ ಹೇಳಿದ್ದಾರೆ.

ಎದ್ದ ಕೂಡಲೇ ಮೊಬೈಲ್ ನೋಡಿದ್ರೇ ಸ್ಟ್ರೆಸ್ ಹೆಚ್ಚಾಗಿ ಹುಚ್ಚರಾದಂತಾಗಬಹುದು! ಹುಷಾರು
ಎದ್ದ ಕೂಡಲೇ ಮೊಬೈಲ್ ನೋಡಿದ್ರೇ ಸ್ಟ್ರೆಸ್ ಹೆಚ್ಚಾಗಿ ಹುಚ್ಚರಾದಂತಾಗಬಹುದು! ಹುಷಾರು

ಪ್ರಾಯೋಗಿಕ ಸವಾಲುಗಳು ಮತ್ತು ಡಿಜಿಟಲ್ ಅವಲಂಬನೆ:

ಡಿಜಿಟಲ್ ಮುಕ್ತ ಜೀವನ ನೆಮ್ಮದಿ ನೀಡಿದರೂ, ದಿನಗಳು ಕಳೆದಂತೆ ಪ್ರಾಯೋಗಿಕ ಸವಾಲುಗಳು ಎದುರಾಗತೊಡಗಿದವು. ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದಲ್ಲಿ ಎಷ್ಟು ಆಳವಾಗಿ ಬೆರೆತುಹೋಗಿವೆ ಎಂಬ ಕಹಿ ಸತ್ಯ ಆಗ ಅರಿವಿಗೆ ಬಂತು. ಸಾಮಾನ್ಯ ಕೀಪ್ಯಾಡ್ ಫೋನ್‌ಗೆ ಕಾಂಟ್ಯಾಕ್ಟ್‌ಗಳನ್ನು ವರ್ಗಾಯಿಸುವಾಗ ಹಲವು ನಂಬರ್‌ಗಳು ಮಿಸ್ ಆಗಿದ್ದವು, ಹೀಗಾಗಿ ಸಂವಹನ ಕಷ್ಟವಾಯಿತು.

ಅದಕ್ಕಿಂತ ಹೆಚ್ಚಾಗಿ, ಇಂದಿನ ಅತ್ಯಗತ್ಯ ಆಪ್‌ಗಳಾದ ನ್ಯಾವಿಗೇಷನ್‌ ಮ್ಯಾಪ್ಸ್, ಫುಡ್ ಡೆಲಿವರಿ ಮತ್ತು ಡಿಜಿಟಲ್ ಪೇಮೆಂಟ್ ಆಪ್‌ಗಳು ಲಭ್ಯವಿಲ್ಲದ ಕಾರಣ ಸಿದ್ಧಾರ್ಥ್ ತೀವ್ರ ತೊಂದರೆ ಅನುಭವಿಸಿದರು. ಪ್ರಯಾಣದ ಸಮಯದಲ್ಲಿ ಅಥವಾ ತುರ್ತು ಸಂದರ್ಭಗಳಲ್ಲಿ ಅವರು ತಮ್ಮ ಪತ್ನಿಯ ಮೊಬೈಲ್ ಫೋನ್ ಅನ್ನೇ ಅವಲಂಬಿಸಬೇಕಾಗಿ ಬಂತು.

"ಹೋಟೆಲ್ ಬಿಲ್ ಪಾವತಿಸುವಾಗ ಕಾರ್ಡ್‌ಗಳು, ಆಫರ್‌ಗಳು ಮತ್ತು ಆಪ್‌ಗಳನ್ನು ಬಳಸಲು ಸಾಧ್ಯವಾಗದಿರುವುದು ಸಿದ್ದಾರ್ಥ್‌ಗೆ ತೀವ್ರ ಮುಜುಗರ ಹಾಗೂ ಕಷ್ಟವನ್ನುಂಟು ಮಾಡಿತು.

Review: ವಿನ್ಯಾಸ, ಗುಣಮಟ್ಟ, ಡಿಸ್‌ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್‌ OnePlus Nord 6 ಫೋನ್‌
Review: ವಿನ್ಯಾಸ, ಗುಣಮಟ್ಟ, ಡಿಸ್‌ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್‌ OnePlus Nord 6 ಫೋನ್‌

ಸ್ಪೂರ್ತಿ ಮತ್ತು ಎಚ್ಚರಿಕೆಯ ಪಾಠ:

ಸಿದ್ಧಾರ್ಥ್ ಅವರ ಈ ವಾರಾಂತ್ಯದ ಪ್ರಯೋಗವು ಡಿಜಿಟಲ್ ಜಗತ್ತಿನಿಂದ ದೂರ ಇರುವುದು ಮಾನಸಿಕವಾಗಿ ಶಾಂತಿ ನೀಡುವುದರಲ್ಲಿ ಎರಡು ಮಾತಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್ ಇಲ್ಲದೆ ಬದುಕುವುದು ಪ್ರಾಯೋಗಿಕವಾಗಿ ಎಷ್ಟು ಕಷ್ಟ ಎಂಬುದನ್ನೂ ಎತ್ತಿ ತೋರಿಸಿದೆ. ಇವರ ಅನುಭವವು ಡಿಜಿಟಲ್ ಡಿಟಾಕ್ಸ್ ಮಾಡಲು ಬಯಸುವವರಿಗೆ ಒಂದೆಡೆ ಸ್ಪೂರ್ತಿಯಾಗಿದ್ದರೆ, ಇನ್ನೊಂದೆಡೆ ಎಚ್ಚರಿಕೆಯ ಪಾಠವೂ ಆಗಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+