ಪಂಜಾಬ್‌ನಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯಿಂದ 23 ಜನರಿಗೆ ಸೋಂಕು

ಚಂಡೀಗಢ, ಮಾರ್ಚ್ 27: ಪಂಜಾಬ್‌ನಲ್ಲಿ ಕೊರೊನಾವೈರಸ್‌ನಿಂದ ಮಾರ್ಚ್ 18 ರಂದು ಮೃತಪಟ್ಟ ವ್ಯಕ್ತಿ ಕನಿಷ್ಟವೆಂದರೂ 23 ಮಂದಿಗೆ ಕೊರೊನಾ ಹರಡಿಸಿರುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಂಜಾಬ್‌ನಲ್ಲಿ ಒಟ್ಟು 33 ಕೊರೊನಾ ಸೋಂಕಿತ ಪ್ರಕರಣಗಳಿವೆ ಅದರಲ್ಲಿ 23 ಮಂದಿಗೆ ಆ ವೃದ್ಧನಿಂದಲೇ ಸೋಂಕು ತಗುಲಿದೆ ಎನ್ನಲಾಗಿದೆ. 15 ಜಿಲ್ಲೆಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಗುರುದ್ವಾರದ 70 ವರ್ಷದ ವೃದ್ಧರೊಬ್ಬರು ಜರ್ಮನಿ ಹಾಗೂ ಇಟಲಿಗೆ ಎರಡು ವಾರಗಳ ಕಾಲ ಪ್ರವಾಸಕ್ಕೆಂದು ತೆರಳಿದ್ದರು.

ಭಾರತದಲ್ಲಿ ಕೊರೊನಾ ರೋಗಿಗಳು-LIve tracker

ಇಬ್ಬರು ಸ್ನೇಹಿತರೊಂದಿಗೆ ಅವರು ಪ್ರವಾಸಕ್ಕೆ ತೆರಳಿದ್ದರು. ಆದರೆ ಗೃಹಬಂಧನದಲ್ಲಿರಲೇ ಇಲ್ಲ. ಮಾರ್ಚ್ 6 ರಂದು ದೆಹಲಿಗೆ ಬಂದು ಅಲ್ಲಿಂದ ಪಂಜಾಬ್‌ಗೆ ವಾಪಸಾಗಿದ್ದರು. ಸೋಂಕಿತ ವ್ಯಕ್ತಿ ಮಾರ್ಚ್ 8-10ರವರೆಗೆ ಆನಂದ್‌ಪುರ ಸಾಹಿಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು.ಬಳಿಕ ಶಹೀದ್ ಭಗತ್ ಸಿಂಗ್ ನಗರಕ್ಕೆ ತೆರಳಿದ್ದರು.

Punjab Man Who Died Of COVID-19 Infected 23

ಕೊರೊನಾ ವೈರಸ್ ಪಾಸಿಟಿವ ಬರುವ ಮುನ್ನವೇ ಸುಮಾರು 100 ಮಂದಿಯನ್ನು ಭೇಟಿಯಾಗಿದ್ದರು. ಅವರ ಇಬ್ಬರು ಸ್ನೇಹಿತರು ಕೂಡ ಸುಮಾರು 15 ಹಳ್ಳಿಗಳನ್ನು ಸುತ್ತಿದ್ದರು.

ಅವರ ಕುಟುಂಬದಲ್ಲಿ 14 ಮಂದಿಗೆ ಕೊರೊನಾ ತಗುಲಿದೆ. ಇದೀಗ ವೈದ್ಯರ ತಂಡ ಹಳ್ಳಿಗೆ ತೆರಳಿದ್ದು ತಪಾಸಣೆ ನಡೆಸುತ್ತಿದೆ. ಮೊಹಾಲಿ, ಅಮೃತಸರ, ಹೋಷಿಯಾಪುರ್, ಜಲಂಧರ್‌ನಲ್ಲಿ ಕೊರೊನಾ ವೈರಸ್ ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಇದುವರೆಗೆ 18 ಮಂದಿ ಮೃತಪಟ್ಟಿದ್ದು ಸೋಂಕಿತರ ಸಂಖ್ಯೆ 734ಕ್ಕಿಂತಲೂ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+