ಬೋರ್‌ವೆಲ್‌ಗೆ ಬಿದ್ದಿದ್ದ ಪುಟಾಣಿಯನ್ನು ರಕ್ಷಿಸಿದರೂ ಬದುಕುಳಿಯಲಿಲ್ಲ
ಅಮೃತಸರ, ಜೂನ್ 11: ಆಗ ತಾನೆ ನಡೆಯಲು ಕಲಿತಿದ್ದ ಪುಟಾಣಿ ಹೇಗೋ ಬೋರ್‌ವೆಲ್ ಆಯತಪ್ಪಿ ಬಿದ್ದಿದ್ದ ನಾಲ್ಕು ದಿನದ ಸತತ ಕಾರ್ಯಾಚರಣೆ ಬಳಿಕ ಹೊರ ತೆಗೆದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಫತೇಹ್ವೀರ್ ಸಿಂಗ್ ಎನ್ನುವ ಎರಡು ವರ್ಷ ಮಗು 150 ಅಡಿ ಬೋರ್‌ವೆಲ್ ಒಳಗೆ ಬಿದ್ದಿತ್ತು. ಕಳೆದ 109 ಗಂಟೆಗಳಿಂದ ವಿವಿದ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದವು. ಕಾರ್ಯಾಚರಣೆ ವಿಳಂಬವಾಗುತ್ತಿದೆ ಎನ್ನುವ ಸಾರ್ವಜನಿಕರ ಪ್ರತಿಭಟನೆಯ ನಡುವೆಯೇ ಮಗುವಿನ ರಕ್ಷಣೆಯ ಸಿಹಿಸುದ್ದಿಯನ್ನು ಅಧಿಕಾರಿಗಳು ನೀಡಿದ್ದರು ಆದರೆ ಕೆಲವೇ ಗಂಟೆಗಳಲ್ಲಿ ಮಗು ಅಸುನೀಗಿದೆ.
ಅಲ್ಟ್ರಾ ಸೊಫೆಸ್ಟಿಕೇಟೆಡ್ ಹಾಗೂ ಹೈ ಡೆನ್ಸಿಟಿ ಡ್ರಿಲ್ಲಿಂಗ್ ಯಂತ್ರಗಳ ಮೂಲಕ 150 ಮೀಟರ್ ಆಳ ಕೊರೆದ ರಕ್ಷಣಾ ಕಾರ್ಯಾಚರಣೆ ತಂಡವು ಮಗುವನ್ನು ರಕ್ಷಿಸಿತ್ತು, ಮಗುವಿಗೆ ಕಳೆದ 109 ಗಂಟೆಗಳ ಅವಧಿಯಲ್ಲಿ ಆಮ್ಲಜನಕ ಹಾಗೂ ಆಹಾರ ನೀಡಲಾಗುತ್ತಿತ್ತು.

ಜತೆಗೆ ಕ್ಯಾಮರಾದ ಮೂಲಕ ಮಗುವಿನ ಚಲನ ವಲನ ಮೇಲೂ ಗಮನ ಇಡಲಾಗಿತ್ತು. ಆದರೂ ಮಗು ಮೃತಪಟ್ಟಿದೆ. ಈ ಬೋರ್‌ವೆಲ್ 150 ಅಡಿ ಆಳ ಹಾಗೂ ಕೇವಲ 7 ಇಂಚು ಅಗಲವಿತ್ತು. ಹೆಚ್ಚಿನ ಚಿಕಿತ್ಸೆಗೆಂದು ಪುಟಾಣಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಸಾವನ್ನಪ್ಪಿದ್ದಾನೆ.
ಬೆಳಗ್ಗೆ 4 ಗಂಟೆ ಸುಮಾರಿಗೆ ಕೊಳವೆಬಾಯಿಯಿಂದ ಮಗುವನ್ನು ಹೊರ ತೆಗೆಯಲಾಗಿತ್ತು. ಯಾವ ರೀತಿಯಾಗಿ ಮಗುವನ್ನು ರಕ್ಷಿಸಲಾಗಿದೆ ಆ ವಿಧಾನ ತಪ್ಪು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications