ಪಂಜಾಬ್‌ನಲ್ಲಿ ಕೊರೊನಾ ಕೇಸ್‌ ಹೆಚ್ಚಳ: ವೀಕೆಂಡ್ ಲಾಕ್‌ಡೌನ್ ಘೋಷಣೆ

ಚಂಡೀಗಡ, ಆಗಸ್ಟ್‌ 20: ದಿನೇ ದಿನೇ ಕೊರೊನಾವೈರಸ್ ಕೇಸ್‌ಗಳ ಹೆಚ್ಚಳದಿಂದಾಗಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಗುರುವಾರ (ಆಗಸ್ಟ್ 20) ತುರ್ತು ಕ್ರಮಗಳನ್ನು ಆದೇಶಿಸಿದ್ದಾರೆ. ಈ ಕ್ರಮಗಳಲ್ಲಿ ಪಂಜಾಬ್‌ನ ಎಲ್ಲಾ 167 ನಗರಗಳು ಮತ್ತು ಪಟ್ಟಣಗಳಲ್ಲಿ ವಾರಾಂತ್ಯದ ಲಾಕ್‌ಡೌನ್ ವಿಸ್ತರಣೆ ಮತ್ತು ದೈನಂದಿನ ರಾತ್ರಿ ಕರ್ಫ್ಯೂ (ಸಂಜೆ 7 ರಿಂದ ಬೆಳಿಗ್ಗೆ 5 ರವರೆಗೆ ) ಸೇರಿದೆ.

Recommended Video

      Sumalatha ಸೊಂಟಕ್ಕೆ ಕೈ ಹಾಕಿದ Yediyurappa | Onendia Kannada

      ಆಗಸ್ಟ್ 31 ರವರೆಗೆ ಜಾರಿಯಲ್ಲಿರುವಂತೆ ತುರ್ತು ಕ್ರಮಗಳಲ್ಲಿ, ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯ ಮೇಲಿನ ನಿರ್ಬಂಧಗಳು, ಸಾರ್ವಜನಿಕ ಕೂಟಗಳ ನಿಷೇಧ (ಮದುವೆ ಮತ್ತು ಅಂತ್ಯಕ್ರಿಯೆಗಳನ್ನು ಹೊರತುಪಡಿಸಿ) ಮತ್ತು ಐದು ಹೆಚ್ಚು ಕೊರೊನಾಪೀಡಿತ ಜಿಲ್ಲೆಗಳಲ್ಲಿ 50 ರಷ್ಟು ಅಂಗಡಿಗಳನ್ನು ಮುಚ್ಚುವುದು, ಅನಿವಾರ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವುದು ನಿಷೇಧಿಸಿದೆ.

      ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಗುರುವಾರ ಸಂಜೆ ಪ್ರಕಟಣೆ ನೀಡಿ, ಕೊರೊನಾವೈರಸ್ ಪ್ರಕರಣಗಳಲ್ಲಿನ ಹೆಚ್ಚಳವನ್ನು ಎದುರಿಸಲು "ಯುದ್ಧದಂತಹ ಸಿದ್ಧತೆ" ಯನ್ನು ಕರೆ ನೀಡಿದರು.

      Amarinder Singhs New Lockdown Rules For Punjab

      "ಸಾಕು ಸಾಕು, ರಾಜ್ಯದ ಆರ್ಥಿಕತೆಗೆ ಧಕ್ಕೆಯಾಗದಂತೆ ನಾವು ಕಠಿಣವಾಗಿರಬೇಕು" ಎಂದು ಮುಖ್ಯಮಂತ್ರಿ ಇಂದು ಹೇಳಿದರು, ರಾಜ್ಯದಲ್ಲಿ 900 ಕ್ಕೂ ಹೆಚ್ಚು ಕೋವಿಡ್-ಸಂಬಂಧಿತ ಸಾವುಗಳು ನನಗೆ ನೋವುಂಟುಮಾಡುತ್ತವೆ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

      ಅಮೃತಸರ, ಲುಧಿಯಾನ, ಎಸ್‌ಎಎಸ್ ನಗರ, ಪಟಿಯಾಲ ಮತ್ತು ಜಲಂಧರ್ ಐದು ಜಿಲ್ಲೆಗಳು ಹೆಚ್ಚು ಕೊರೊನಾ ಪೀಡಿತ ಜಿಲ್ಲೆಗಳಾಗಿವೆ ಎಂದು ಸಮೀಕ್ಷೆಯಿಂದ ತಿಳಿದು ಬಂದ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಆಗಸ್ಟ್ 1 ಮತ್ತು 17 ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ, ಈ ಜಿಲ್ಲೆಗಳಲ್ಲಿ ಕಂಟೋನ್‌ಮೆಂಟ್ ವಲಯಗಳಲ್ಲಿರುವ ಶೇಕಡಾ 27.7 ರಷ್ಟು ಜನರು ವೈರಸ್‌ಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+