ಕಲ್ಕಿ ಭಗವಾನ್ ಐಟಿ ರೇಡ್; 9 ಕೋಟಿ ಮೌಲ್ಯದ $ ಸೇರಿ 33 ಕೋಟಿ ವಶ

ಅಮರಾವತಿ (ಆಂಧ್ರಪ್ರದೇಶ), ಅಕ್ಟೋಬರ್ 18: ವಿವಾದಿತ- ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್ ಮತ್ತು ಅವರ ಮಗ ಕೃಷ್ಣಗೆ ಸೇರಿದ ಸ್ಥಳಗಳಲ್ಲಿ 33 ಕೋಟಿ ರುಪಾಯಿಯನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿದೆ. ಅದರಲ್ಲಿ 9 ಕೋಟಿ ಮೌಲ್ಯದ ಅಮೆರಿಕನ್ ಡಾಲರ್ ಸಹ ಸೇರಿದೆ.

ಐಟಿ ಅಧಿಕಾರಿಗಳಿಂದ ಒಂದೇ ಸಮಯಕ್ಕೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ 40 ಸ್ಥಳಗಳಲ್ಲಿ ದಾಳಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಬುಧವಾರದಿಂದ ಆರಂಭವಾದ ಈ ಕಾರ್ಯಾಚರಣೆಯಲ್ಲಿ 300 ಅಧಿಕಾರಿಗಳು ಇದ್ದರು. ಶುಕ್ರವಾರದಂದು ಸಂಪೂರ್ಣ ಶೋಧ ಕಾರ್ಯಾಚರಣೆ ಮುಗಿಯಬಹುದು ಎನ್ನಲಾಗಿದೆ.

ನಗದು ಹೊರತುಪಡಿಸಿ ಅನುಮಾನಾಸ್ಪದವಾಗಿ ಹೂಡಿಕೆ ಮಾಡಿರುವುದಕ್ಕೆ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡು ಹಾಗೂ ನಿಯಮಗಳನ್ನು ಮೀರಿ ಕೀನ್ಯಾದಲ್ಲೂ ದೊಡ್ಡ ಪ್ರಮಾಣದಲಿ ಭೂಮಿ ಖರೀದಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತೆರಿಗೆ ಕಳ್ಳತನ ಹಾಗೂ ಹಣಕಾಸು ದುರುಪಯೋಗದ ಬಗ್ಗೆ ಬಂದ ಗುಪ್ತಚರ ವರದಿ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ.

Income Tax seizes 33 Crore From Premises Of Kalki Bhagwan And Son

ಚಿತ್ತೂರಿನಲ್ಲಿ ಇರುವ ಕಲ್ಕಿ ಭಗವಾನ್ ಆಶ್ರಮ ಸೇರಿದಂತೆ ಚೆನ್ನೈ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ 20 ಸ್ಥಳಗಳಲ್ಲಿ ಐಟಿ ದಾಳಿ ನಡೆದಿದೆ. ಕಲ್ಕಿ ಭಗವಾನ್ ರ ಮಗ ಕೃಷ್ಣ 'ಒನ್ ನೆಸ್ ಟೆಂಪಲ್' ನ ನಿರ್ವಹಣೆ ಮಾಡುತ್ತಾರೆ. ಅತ್ಯಾಧುನಿಕ ಸೌಕರ್ಯ ಇರುವ ಧಾರ್ಮಿಕ ವಿಶ್ವವಿದ್ಯಾಲಯ ಅದು. ಇನ್ನು ಹಲವು ಹೆಸರಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಗಳನ್ನು ಕೂಡ ನಡೆಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+