ಆಂಧ್ರಪ್ರದೇಶ: ಲ್ಯಾಪ್‌ಟಾಪ್ ಸ್ಫೋಟಗೊಂಡು ಮಹಿಳಾ ಟೆಕ್ಕಿಗೆ ಗಂಭೀರ ಗಾಯ
ಅಮರಾವತಿ, ಏಪ್ರಿಲ್ 18: ಚಾರ್ಜ್ ಹಾಕಿಕೊಂಡು ಕೆಲಸ ಮಾಡುವಾಗ ಲ್ಯಾಪ್‌ಟಾಪ್ ಸ್ಫೋಟಗೊಂಡು ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗಿಯೊಬ್ಬರು ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬದ್ವೆಲ್‌ನಲ್ಲಿ ನಡೆದಿದೆ.
ಬದ್ವೇಲ್‌ನ ಮೇಕವಾರಿಪಲ್ಲಿಯ ಸುಮಲತಾ (24) ಎಂಬ ಮಹಿಳಾ ಟೆಕ್ಕಿ ಗಂಭೀರ ಗಾಯಗಳಿಂದ ಆಸ್ಪತ್ರೆ ಸೇರಿದ್ದಾರೆ. ಆದರೆ ಜೀವಕ್ಕೆ ಅಪಾಯವಾಗಿಲ್ಲ.
ಚಾರ್ಜ್ ಹಾಕಿಕೊಂಡು ಕೆಲಸ ಮಾಡುತ್ತಿರುವಾಗ ಲ್ಯಾಪ್‌ಟಾಪ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ಸ್ಪೋಟಗೊಂಡಿದೆ. ಗಾಯಾಳು ಸುಮಲತಾ ಅವರನ್ನು ಕುಟುಂಬಸ್ಥರು ಕಡಪ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಕೊರೊನಾ ಸೋಂಕು ಕಾರಣದಿಂದಾಗಿ ಕಳೆದು ಎರಡು ವರ್ಷಗಳಿಂದ ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಂ)ನಲ್ಲಿರುವ ಉದ್ಯೋಗಿಗಳು ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬೇಕಿದೆ. ಚಾರ್ಜ್ ಹಾಕಿ ಕೆಲಸ ಮಾಡುವುದರಿಂದ ಲ್ಯಾಪ್‌ಟಾಪ್‌ನ ಕೆಲಸದ ಒತ್ತಡ ಮತ್ತು ವಿದ್ಯುತ್ ಶಾಖ ಹೆಚ್ಚಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
ಲ್ಯಾಪ್‌ಟಾಪ್ ಮೂಲಕ ಕೆಲಸ ಮಾಡುವ ಉದ್ಯೋಗಿಗಳು ಚಾರ್ಜ್ ಹಾಕಿ ಕೆಲಸ ಮಾಡುವುದನ್ನು ನಿಯಂತ್ರಿಸಿ ಎಂಬುದನ್ನು ಈ ಘಟನೆ ಎಚ್ಚರಿಸಿದೆ. ಕಚೇರಿಯಲ್ಲಿ ಎಸಿ ಸೌಲಭ್ಯ ಇರುವುದರಿಂದ ಲ್ಯಾಪ್‌ಟಾಪ್ ಬೇಗ ಬಿಸಿಯಾಗುವುದಿಲ್ಲ.












Click it and Unblock the Notifications