ಚುನಾವಣೆಗೂ ಹೊಸ ಪಕ್ಷ ಕಟ್ಟಿದ ಮಾಜಿ ಮುಖ್ಯಮಂತ್ರಿ!
ಅಹಮದಾಬಾದ್, ಆಗಸ್ಟ್ 21: ಕಾಂಗ್ರೆಸ್ ಪಕ್ಷ ತೊರೆದಿರುವ ಮಾಜಿ ಮುಖ್ಯಮಂತ್ರಿ ಶಂಕರ್ ಸಿನ್ಹಾ ವಘೇಲಾ ತಮ್ಮದೇ ಹೊಸ ಪಕ್ಷ ಕಟ್ಟಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಶಂಕರ್ ವಘೇಲಾ ತಮ್ಮ ಪಕ್ಷಕ್ಕೆ ಪ್ರಜಾಶಕ್ತಿ ಡೆಮಾಕ್ರಾಟಿಕ್ ಪಾರ್ಟಿ ಎಂದು ಹೆಸರಿಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ತೊರೆದ ಬಳಿಕ ಕೇಂದ್ರ ಗುಜರಾತ್ ಕ್ಷೇತ್ರಕ್ಕೆ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಕೇಂದ್ರ ಗುಜರಾತನ್ನು ಕ್ಷತ್ರಿಯ-ಹರಿಜನ್-ಆದಿವಾಸಿ-ಮುಸ್ಲಿಂ (KHAM) ಬೆಲ್ಟ್ ಎಂದೇ ಕರೆಯಲಾಗುತ್ತದೆ. ಶಂಕರ್ ಸಿನ್ಹಾ ವಘೇಲಾ ಪಕ್ಷ ತೊರೆದು ಜನ್ ವಿಕಲ್ಪ ಮೋರ್ಚಾ ಸೇರಿದ್ದರೂ ಈಗ ಹೊಸ ಪಕ್ಷದ ಮೂಲಕ ಹೊಸ ಹುರುಪಿನೊಂದಿಗೆ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದಾರೆ.
ಹೊಸ ಪಕ್ಷ ಉದಯದ ಮೂಲಕ ಚುನಾವಣಾ ರಾಜಕೀಯಕ್ಕೆ ಮರುಪ್ರವೇಶವನ್ನು ವಘೇಲಾ ಘೋಷಿಸಿದ್ದಾರೆ. ಈ ಕುರಿತಂತೆ ಗಾಂಧಿನಗರದಲ್ಲಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಜನರು ಬಿಜೆಪಿಯ ಪರ್ಯಾಯವನ್ನು ಹುಡುಕುತ್ತಿದ್ದಾರೆ, ನನಗೆ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಬಾಗಿಲು ಮುಚ್ಚಿದೆ, ಆದ್ದರಿಂದ ನಾನು ಪ್ರಜಾ ಶಕ್ತಿ ಡೆಮಾಕ್ರಟಿಕ್ ಪಕ್ಷವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಪಕ್ಷವನ್ನು ಒಂದೂವರೆ ವರ್ಷಗಳ ಹಿಂದೆ ನೋಂದಾಯಿಸಲಾಗಿದೆ. ಈಗ ನಾವು ಪಕ್ಷದ ಮೂಲಕ ಕಣಕ್ಕಿಳಿಯಲು ಸಿದ್ದವಾಗುತ್ತಿದ್ದೇವೆ'' ಎಂದರು.

ವಘೇಲಾ ತಮ್ಮ ಫೇಸ್‌ಬುಕ್ ಪುಟದಲ್ಲಿ ಈಗಾಗಲೇ ರಾಜ್ಯದ ಜನರಿಗೆ 12 ಲಕ್ಷ ರೂ.ಗಳ ಆರೋಗ್ಯ ವಿಮೆ ರಕ್ಷಣೆ, ವಾರ್ಷಿಕ 12 ಲಕ್ಷ ರೂ. ಗಳಿಸುವ ಕುಟುಂಬಕ್ಕೆ 12 ನೇ ತರಗತಿಯವರೆಗೆ ಉಚಿತ ಶಿಕ್ಷಣ, ಯುವಕರಿಗೆ ನಿರುದ್ಯೋಗ ಭತ್ಯೆ ಮುಂತಾದ ಭರವಸೆಗಳನ್ನು ನೀಡಿದ್ದಾರೆ. ಉದ್ಯೋಗ, ನೀರಿನ ತೆರಿಗೆಯಿಂದ ವಿನಾಯಿತಿ, 100 ಯೂನಿಟ್ ಬಳಕೆಯವರೆಗೆ ಉಚಿತ ವಿದ್ಯುತ್, ರೈತರಿಗೆ ಸಾಲದ ಅಲೆ, ವಿದ್ಯುತ್ ಬಿಲ್‌ಗಳಲ್ಲಿ ಪರಿಹಾರ, ಹೊಸ ವೈಜ್ಞಾನಿಕ ಮದ್ಯ ನೀತಿ ಇತ್ಯಾದಿಗಳನ್ನು ರಾಜ್ಯದಲ್ಲಿ ಅರ್ಹರು ಪಡೆಯುತ್ತಾರೆ ಎಂದು ಘೋಷಿಸಿದ್ದಾರೆ.
ವಘೇಲಾ ಅವರು ಪಕ್ಷವನ್ನು ಘೋಷಿಸುವುದಕ್ಕೂ ಮುನ್ನ ಶನಿವಾರದಂದು ದೆಹಲಿಯಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬ್ಬಲ್ ಅವರನ್ನು ಭೇಟಿ ಮಾಡಿದ್ದು ವಿಶೇಷವಾಗಿತ್ತು. ಪ್ರಾದೇಶಿಕ ಪಕ್ಷವನ್ನು ಪ್ರಾರಂಭಿಸುವ ಮೂಲಕ ಸರಿಯಾದ ನಡೆ ಇಟ್ಟಿದ್ದರೆಬೆಂಬಲ ನೀಡುವಂತೆ ಕೋರಿದ್ದಾರೆ ಎಂಬ ಸುದ್ದಿಯಿದೆ.
2017 ರಲ್ಲೂ, ವಘೇಲಾ ಅವರು ಪ್ರಾದೇಶಿಕ ಪಕ್ಷವಾದ ಜನ ವಿಕಲ್ಪ್ ಪ್ರಾರಂಭಿಸಿದ್ದರು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಶೇಕಡಾ 1ರಷ್ಟು ಮತವನ್ನು ಪಡೆಯಲು ಸಾಧ್ಯವಾಗಿರಲಿಲ್ಲ, ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ವಘೇಲಾ ಸ್ಪರ್ಧಿಸಿರಲಿಲ್ಲ. ಆದರೆ, ಈ ಬಾರಿ ಹೊಸ ಪಕ್ಷದ ಮೂಲಕ ಮತ್ತೆ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.












Click it and Unblock the Notifications