ಮಗ ಮೋದಿಗೆ ಆಶೀರ್ವದಿಸಿ ಮತ ಚಲಾಯಿಸಿದ ಹೀರಾ ಬೆನ್

ಅಹಮದಾಬಾದ್, ಏಪ್ರಿಲ್ 23: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ 95 ವರ್ಷದ ಹೀರಾ ಬೆನ್ ಅವರು ಇಂದು ಮತ ಚಲಾಯಿಸಿದರು.

ಮೋದಿ ಅವರು ಮತ ಚಲಾಯಿಸಲು ತೆರಳುವ ಮೊದಲು ಮನೆಗೆ ತೆರಳಿ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಗನಿಗೆ ಆಶೀರ್ವದಿಸಿದ ತಾಯಿ ಹೀರಾ ಬೇನ್, ತೆಂಗಿನಕಾಯಿ, ಶಾಲು ಜೊತೆಗೆ ಐದುನೂರು ರೂಪಾಯಿ ಹಣ ನೀಡಿ ಚುನಾವಣೆಯಲ್ಲಿ ಗೆಲ್ಲುವಂತೆ ಹಾರೈಸಿದರು. ಮಗನಿಗೆ ಸಿಹಿ ತಿನ್ನಿಸಿ ತಾವೂ ಸಿಹಿ ತಿಂದರು.

ಹೀರಾಬೆನ್ ಅವರು ಗುಜರಾತ್‌ನ ಗಾಂಧಿನಗರದಿಂದ ರೈಸಾನ್ ಎಂಬಲ್ಲಿ ವಾಸವಾಗಿದ್ದು, ಅವರು ಮೋದಿ ಅವರ ಸಹೋದರ ಪಂಕಜ್‌ ಮೋದಿ ಅವರೊಂದಿಗೆ ತೆರಳಿ ಮತಚಲಾಯಿಸಿದರು.

Narendra Modis mother Heera Ben casted her vote

ಇತ್ತ ಮೋದಿ ಅವರು ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದರು. ಮತಚಲಾಯಿಸಿ ಟ್ವೀಟ್ ಮಾಡಿರುವ ಮೋದಿ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಕಾರ್ಯದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.

Narendra Modis mother Heera Ben casted her vote

ಇಂದು ಮೂರನೇ ಹಂತದ ಲೋಕಸಭೆ ಚುನಾವಣೆಯು ನಡೆಯುತ್ತಿದ್ದು ಗುಜರಾತ್ ಸೇರಿದಂತೆ 15 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+