Get Updates
Get notified of breaking news, exclusive insights, and must-see stories!

ಲಿವ್ ಇನ್ ಸಂಬಂಧದಲ್ಲಿ ಗೆಳತಿಗೆ ಪ್ರೇಮ ಪರೀಕ್ಷೆ; ಗೆಳೆಯ ಈಗ ಅರೆಸ್ಟ್

ರಾಜ್ ಕೋಟ್ (ಗುಜರಾತ್), ಅಕ್ಟೋಬರ್ 18: ಗೆಳತಿ ತನ್ನನ್ನು ಎಷ್ಟು ಪ್ರೀತಿಸುತ್ತಾಳೆ ಎಂದು ತಿಳಿದುಕೊಳ್ಳುವ ಸಲುವಾಗಿ ತಾನೇ ಕಿಡ್ನಾಪ್ ಆದ ಹಾಗೆ ನಾಟಕ ಮಾಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಅತಿಥಿಯಾಗಿದ್ದಾನೆ. "ಇಷಾ ನನ್ನನ್ನು ಎಷ್ಟು ಪ್ರೀತಿಸುತ್ತಾಳೆ ಎಂದು ತಿಳಿದುಕೊಳ್ಳುವುದಕ್ಕೆ ಹೀಗೆ ಮಾಡಿದೆ" ಎಂದು ಆರೋಪಿ ಮೆಹುಲ್ ಜೋಶಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಕಛ್ ಜಿಲ್ಲೆಯ ಭುಜ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇಪ್ಪತ್ಮೂರು ವರ್ಷದ ಮೆಹುಲ್ ಜೋಶಿ ಹಾಗೂ ಹದಿನೆಂಟು ವರ್ಷದ ಇಷಾ ಪಂಚೆಲ್ ಲಿವ್ ಇನ್ ಸಂಬಂಧದಲ್ಲಿ ಇದ್ದರು. ಆಕೆ ತನ್ನನ್ನು ಎಷ್ಟು ಪ್ರೀತಿಸುತ್ತಾಳೆ ಎಂದು ತಿಳಿದುಕೊಳ್ಳುವ ಸಲುವಾಗಿ ತನ್ನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂಬ ನಾಟಕ ಆಡಿದ್ದಾನೆ. ಧ್ವನಿ ಬದಲಿಸುವ ಮೊಬೈಲ್ ಅಪ್ಲಿಕೇಷನ್ ಬಳಸಿ, ತಾನೇ ಇಷಾಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದಾನೆ. ಮೂರು ಲಕ್ಷ ಹಣ ನೀಡದಿದ್ದರೆ ನಿನ್ನ ಗೆಳೆಯನನ್ನು ಕೊಲ್ತೀನಿ ಎಂದಿದ್ದಾನೆ.

Kidnap Drama By Boyfriend To Test Girlfriends Love

ಇಷಾ ಪೊಲೀಸರಿಗೆ ದೂರು ನೀಡಿದ್ದಾಳೆ. ಗಾಂಧಿಧಾಮದಲ್ಲಿ ಮೊಬೈಲ್ ಲೊಕೇಷನ್ ಪತ್ತೆ ಆಗಿದೆ. ಅಲ್ಲಿನ ಅತಿಥಿಗೃಹದಲ್ಲಿ ಇದ್ದುಕೊಂಡು ಜೋಶಿ ಆಡಿದ ಕಿಡ್ನಾಪ್ ನಾಟಕ ಬಯಲಾಗಿದೆ. ಆತನ ಜತೆಗೆ ಮತ್ಯಾರೂ ಇರಲಿಲ್ಲ ಎಂಬುದು ಸಹ ಗೊತ್ತಾಗಿದ್ದು, ಪೊಲೀಸರನ್ನು ನೋಡುತ್ತಲೇ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+