ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಮೋದಿ ಪತ್ನಿ ಜಶೋದಾಬೆನ್

Recommended Video

      ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಮೋದಿ ಪತ್ನಿ ಜಶೋದಾಬೆನ್ | Oneindia kannada

      ಅಹ್ಮದಾಬಾದ್, ಜೂನ್ 15: ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್ ಅವರು ಗುಜರಾತಿನ ಅಹ್ಮದಾಬಾದಿನಲ್ಲಿ ನಡೆದ ಇಫ್ತಾರ್ ಕೂಟವೊಂದರಲ್ಲಿ ಪಾಲ್ಗೊಂಡಿದ್ದರು.

      ಬುಧವಾರ, ಅಹ್ಮದಾಬಾದ್ ನ ರಿಲೀಫ್ ರಸ್ತೆ ಬಳಿ ನಡೆದ ಇಫ್ತಾರ್ ಕೂಟವೊಂದರಲ್ಲಿ ಪಾಲ್ಗೊಂಡಿದ್ದ ಜಶೋದಾಬೆನ್ ಮುಸ್ಲಿಂ ಬಂಧು-ಬಾಂಧವರೊಂದಿಗೆ ಹಬ್ಬದ ಸಿಹಿ ಉಂಡರು.

      ಮುಸ್ಲಿಮರ ಪವಿತ್ರ ಮಾಸವಾದ ರಂಜಾನ್ ನಲ್ಲಿ ಸೂರ್ಯಾಸ್ತದ ನಂತರ ಉಪವಾಸ ವ್ರತ ಮುಗಿಸಿ, ಆಹಾರ ಸೇವಿಸುವ ಇಫ್ತಾರ ಕೂಟದಲ್ಲಿ, ತಮ್ಮ ಆತ್ಮೀಯ ಮುಸ್ಲಿಂ ಬಾಂಧವರಿಗೆ ಆಹಾರ ತಿನ್ನಿಸಿ ಜಶೋದಾಬೆನ್ ಸಂಭ್ರಮಿಸಿದರು.

      Jashodaben attends Iftar party in Ahmedabad

      ನಿವೃತ್ತ ಶಿಕ್ಷಕಿಯಾಗಿರುವ ಜಶೋದಾಬೆನ್ ಗುಜರಾತಿನ ವಡ್ನಗರ್ ನಿಂದ 35 ಕಿ.ಮೀ. ದೂರದಲ್ಲಿರುವ ಬ್ರಾಹ್ಮಣ್ ವಾಡಾ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

      ಕಳೆದ ಫೆಬ್ರವರಿಯಲ್ಲಿ ರಾಜಸ್ಥಾನಕ್ಕೆ ಹೊರಟಿದ್ದ ಜಶೋದಾಬೆನ್ ಅವರಿದ್ದ ವಾಹನ ಚಿತ್ತೋರ್ ಘರ್ ಬಳಿ ಅಪಘಾತಕ್ಕೀಡಾದ ಕಾರಣ ಜೊತೆಯಲ್ಲಿದ್ದ ಅವರ ಸಂಬಂಧಿ ಮೃತರಾಗಿದ್ದರು. ಅವರು ಕೂದಲೆಳೆಯ ಅಂತರದಿಂದ ಅಪಾಯದಿಂದ ಪಾರಾಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+