ಸೂರತ್: ಒಂದೇ ದಿನ 34 ಮಂದಿ ಆಟೋ ಚಾಲಕರಿಗೆ ಕೊರೊನಾ ಸೋಂಕು

ಸೂರತ್, ಮಾರ್ಚ್ 23: ಗುಜರಾತ್‌ನ ಸೂರತ್‌ನಲ್ಲಿ ಒಂದೇ ದಿನ 34 ಮಂದಿ ಆಟೋ ಚಾಲಕರಿಗೆ ಕೊರೊನಾ ಸೋಂಕು ತಗುಲಿದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ.

ಸಂಭಾವ್ಯ ಕೊರೊನಾ ಸೋಂಕಿತರನ್ನು ಗುರುತಿಸಲು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಒಂದೇ ದಿನ 34 ಆಟೋ ರಿಕ್ಷಾ ಚಾಲಕರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಆಟೋ ರಿಕ್ಷಾಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅವರು ಮನವಿ ಮಾಡಿದ್ದಾರೆ. ಕೊರೊನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಅಂಗಡಿ ಮಾಲೀಕರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ.

In Surat, 34 Autorickshaw Drivers Found Infected In Single Day

ಒಟ್ಟಾರೇ ಈವರೆಗೂ ಸೂರತ್ ನಲ್ಲಿ 45,182 ಪ್ರಕರಣಗಳು ಕಂಡುಬಂದಿದ್ದು, 42, 544 ಜನರು ಗುಣಮುಖರಾಗಿದ್ದಾರೆ. 862 ಸೋಂಕಿತರು ಮೃತಪಟ್ಟಿದ್ದಾರೆ.

ಸೂರತ್ ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಮವಾರ 429 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆಟೋ ರಿಕ್ಷಾ ಚಾಲಕರು, ತರಕಾರಿ ವರ್ತಕರು ಮತ್ತು ದಿನಸಿ ಅಂಗಡಿಗಳ ಕೆಲಸಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಲಾಗಿದೆ.

ನೆಗೆಟಿವ್ ಪರೀಕ್ಷಾ ವರದಿ ಬಂದವರಿಗೆ ಆರೋಗ್ಯ ಕಾರ್ಡ್ ನೀಡಲಾಗಿದೆ ಎಂದು ಸೂರತ್ ಮಹಾನಗರ ಪಾಲಿಕೆ ಆಯುಕ್ತ ಬಿಎನ್ ಪಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+