ಇಲ್ಲಿ ಇದೇ ಮೊದಲು ಪಾನ್ ಜಗಿದು ಉಗಿದಿದ್ದಕ್ಕೆ ದಂಡ!

ಅಹಮದಾಬಾದ್, ಏಪ್ರಿಲ್ 28: 'ಓ ಖಾಕೆ ಪಾನ್ ಬನಾರಸವಾಲ...' ಎನ್ನುವ ನಾಡಲ್ಲಿ ಪಾನ್ ಮಸಾಲ, ಜರ್ದಾ, ಬೀಡಿ ಸದಾಕಾಲ ಜಗಿಯುವ ನಾಡಲ್ಲಿ ಅಚ್ಚರಿಯ ಕಾನೂನು ತನ್ನ ಅಧಿಕಾರ ತೋರಿಸಿದೆ. ಇದೇ ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ಪಾನ್ ಮಸಾಲ ತಿಂದು ಉಗಿದ ಕಾರಣಕ್ಕೆ ದಂಡ ವಿಧಿಸಲಾಗಿದೆ.

ಈ ರೀತಿ ದಂಡ ಕಟ್ಟಿದ ಮೊಟ್ಟ ಮೊದಲ ವ್ಯಕ್ತಿಯ ಹೆಸರು ಮಹೇಶ್ ಕುಮಾರ್, ನಗರದ ನರೋಡಾ ಪ್ರದೇಶದ ಸರ್ದಾರ್ ಪಟೇಲ್ ರಸ್ತೆಯಲ್ಲಿ ಉಗಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಕ್ಷಣವೇ ಈ ವ್ಯಕ್ತಿಯ ವಿಳಾಸಕ್ಕೆ ಇ ಮೆಮೋ ಕಳಿಸಲಾಗಿದೆ. ಸಾರ್ವಜನಿಕ ಆರೋಗಕ್ಕೆ ಹಾನಿಯಾಗುವಂತೆ ನಡೆದುಕೊಂಡು ಕಾನೂನು ಉಲ್ಲಂಘಿಸಿದ ಅಪರಾಧಕ್ಕೆ 100 ರು ದಂಡ ಹಾಕಲಾಗಿದೆ.

In a first, Ahmedabad man fined for spitting pan masala

ಅಹಮದಾಬಾದ್ ನಗರ ಪಾಲಿಕೆಯ್ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದು, ನಗರ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಕರೆ ನೀಡಿದೆ. ರಾಷ್ಟ್ರೀಯ ಸ್ವಚ್ಛತಾ ಸಮೀಕ್ಷೆಯಲ್ಲಿ ಅಹಮದಾಬಾದ್ ನಗರವೂ ಸ್ವಚ್ಛನಗರವಾಗಿ ಆಯ್ಕೆಯಾಗಿದೆ.

ಪಾನ್ ಮಸಾಲ ತಿಂದು ಈ ರೀತಿ ಎಲ್ಲೆಂದರಲ್ಲಿ ಉಗಿಯುವವರಿಗೆ ನೋಟಿಸ್ ನೀಡಿದ್ದು , ಇ ಮೆಮೋ ಕಳಿಸಿದ್ದು ದೇಶದಲ್ಲಿ ಇದೇ ಮೊದಲು ಎನ್ನಬಹುದು.

ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಹಾಳು ಮಾಡುವವರ ವಿರುದ್ಧ 100 ರು ನಿಂದ 1000 ರು ತನಕ ದಂಡ ವಿಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+