Get Updates
Get notified of breaking news, exclusive insights, and must-see stories!

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ IAF ಸಿಬ್ಬಂದಿ ವಜಾ

ಅಹಮದಾಬಾದ್, ಆಗಸ್ಟ್ 13: ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿರುವ ಐಎಎಫ್ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿರುವ ಘಟನೆ ನಡೆದಿದೆ.

ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಭಾರತೀಯ ವಾಯುಪಡೆಯು ತನ್ನ ಒಬ್ಬ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ. ಇದು ಸೇವಾ ಷರತ್ತು ಎಂದು ಕೇಂದ್ರ ಸರ್ಕಾರ ಗುಜರಾತ್ ಹೈಕೋರ್ಟ್‌ಗೆ ತಿಳಿಸಿದೆ.

"ಭಾರತದಾದ್ಯಂತ, ಕೇವಲ ಒಂಬತ್ತು ಸಿಬ್ಬಂದಿ ಮಾತ್ರ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಅವರೆಲ್ಲರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ.

IAF Sacks Staffer For Refusing To Get Vaccinated Against COVID-19

ಒಬ್ಬರು ಪ್ರತಿಕ್ರಿಯಿಸಲಿಲ್ಲ, ಆದ್ದರಿಂದ ಪ್ರತಿಕ್ರಿಯೆಯ ಕೊರತೆಯ ದೃಷ್ಟಿಯಿಂದ, ಅವರ ಸೇವೆಯನ್ನು ಈಗಾಗಲೇ ಕೊನೆಗೊಳಿಸಲಾಗಿದೆ" ಎಂದು ವ್ಯಾಸ್ ನ್ಯಾಯಾಲಯಕ್ಕೆ ತಿಳಿಸಿದರು.

ಸಾಮಾನ್ಯವಾಗಿ ಲಸಿಕೆಯ ಬಗ್ಗೆ ಹೇಳುವುದಾದರೆ, ಇದು ಐಚ್ಛಿಕವಾಗಿದೆ, ಆದರೆ ಈಗ ವಾಯುಪಡೆಗೆ ಸಂಬಂಧಿಸಿದಂತೆ ಅದನ್ನು ಸೇವಾ ಷರತ್ತನ್ನಾಗಿ ಮಾಡಲಾಗಿದೆ. ಇದು ಸೇವೆಗೆ ಸೇರುವ ಮುನ್ನ ತೆಗೆದುಕೊಂಡ ಪ್ರಮಾಣವಚನದ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ನಂತರ ನೀಡಲಾಗಿದ್ದ ನೋಟಿಸ್ ಪ್ರಶ್ನಿಸಿ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಐಎಎಫ್‌ಗೆ ಸೂಚಿಸಿದೆ.
ಗುಜರಾತ್‌ನ ಜಾಮ್‌ನಗರದಲ್ಲಿರುವ ಐಎಎಫ್ ಕಾರ್ಪೋರಲ್ ಯೋಗೇಂದ್ರ ಕುಮಾರ್ ಅವರ ಅರ್ಜಿಯ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ದೇವಾಂಗ್ ವ್ಯಾಸ್ ಅವರು ಹೈಕೋರ್ಟ್‌ಗೆ ಈ ಮಾಹಿತಿ ನೀಡಿದ್ದಾರೆ.

ಭಾರತದಾದ್ಯಂತ ಒಂಬತ್ತು ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ ಮತ್ತು ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಸಲ್ಲಿಸಿದ ಒಬ್ಬರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ವ್ಯಾಸ್ ಅವರು ನ್ಯಾಯಮೂರ್ತಿಗಳಾದ ಎಜೆ ದೇಸಾಯಿ ಮತ್ತು ಎಪಿ ಠಾಕರ್ ಅವರ ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.

ಆದಾಗ್ಯೂ, ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರ ಹೆಸರು ಅಥವಾ ಇತರ ಯಾವುದೇ ವಿವರಗಳನ್ನು ಅವರು ನೀಡಿಲ್ಲ.

ಕೊವಿಡ್ ಯೋಧರ ಸಹಾಯದೊಂದಿಗೆ ಭಾರತ, ಕೊರೊನಾ ವೈರಸ್ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದೆ. ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಜನರು ಮತ್ತು ಸರಕುಗಳು ಎರಡನ್ನೂ ಸಾಗಿಸುವ ಮೂಲಕ ಐಎಎಫ್, ಕೊರೊನಾ ತಡೆಗಟ್ಟುವ ರಾಷ್ಟ್ರದ ಪ್ರಯತ್ನಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದೆ.

ವೈದ್ಯರು, ಪ್ಯಾರಾ-ಮೆಡಿಕ್ ಗಳು ಮತ್ತು ಕೊವಿಡ್ ಪರೀಕ್ಷೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸುವ ಉಪಕರಣಗಳೂ ಸೇರಿದಂತೆ, 600 ಟನ್ ಗಳಿಗೂ ಹೆಚ್ಚು ವೈದ್ಯಕೀಯ ಸಾಮಗ್ರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ವಿಮಾನದ ಮೂಲಕ ಸಾಗಿಸಲಾಗಿದೆ.

ಕೊರೊನಾ ವಿರುದ್ಧದ ಹೋರಾಟವನ್ನು ಐಎಎಫ್ ಸಿಬ್ಬಂದಿ ಮುಂದುವರೆಸಿದ್ದಾರೆ. ಭಾರತದ ಎಲ್ಲ ಕೊರೊನಾ ಯೋಧರಿಗೆ ಕೃತಜ್ಞತೆ ಸಲ್ಲಿಸಲು, ಐಎಎಫ್ ತನ್ನ ಸಹ ಸಂಸ್ಥೆಗಳ ನೆರವಿನಿಂದ, ಭಾರತದ ಈ ವೀರ ಯೋಧರಿಗೆ ವಿಶಿಷ್ಠ ರೀತಿಯಲ್ಲಿ ಗೌರವ ಸಲ್ಲಿಸಲು ಯೋಜಿಸುತ್ತಿದೆ. ಕೊರೊನಾ ವೈರಸ್ ಬಿಕ್ಕಟ್ಟಿನ ಈ ಸಮಯದಲ್ಲಿ ದಣಿವರಿಯದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೊವಿಡ್ ಯೋಧರಿಗೆ ವಿಮಾನ ಹಾರಾಟದ ಮೂಲಕ ಭಾರತೀಯ ವಾಯುಪಡೆ ಗೌರವ ಸಲ್ಲಿಸಲು ಯೋಜಿಸಿದೆ.

ಭಾರತೀಯ ವಾಯುಪಡೆ, ದೆಹಲಿ ಮತ್ತು ಎನ್ ಸಿ ಆರ್ ಪ್ರದೇಶಗಳಲ್ಲಿ ಹಲವಾರು ವಿಮಾನಗಳಿಂದ ಹಾರಟ ನಡೆಸುವ ಯೋಜನೆ ಹೊಂದಿದೆ. ಈ ಹಾರಾಟ ಚಟುವಟಿಕೆ ಐಎಎಫ್ ನ ತರಬೇತಿಯನ್ನೂ ಒಳಗೊಂಡಿದ್ದು ಕೊವಿಡ್-19 ಕ್ಕೆ ಸಂಬಂಧಿಸಿದ ಸರಕುಗಳನ್ನು ಸಾಗಿಸುವ ಸಾಗಾಣೆ ವಿಮಾನಗಳನ್ನು ಮತ್ತು ಹೆಲಿಕಾಪ್ಟರ್ ಗಳನ್ನೂ ಒಳಗೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+