ಕುಡಿದ ಮತ್ತಿನಲ್ಲಿ ಹೆರಿಗೆ ಮಾಡಿ, ತಾಯಿ, ಶಿಶುವನ್ನು ಕೊಂದ ಪಾಪಿ ವೈದ್ಯ
ಅಹಮದಾಬಾದ್, ನವೆಂಬರ್ 28: ಕುಡಿದ ಮತ್ತಿನಲ್ಲಿ ವೈದ್ಯನೊಬ್ಬ ಹೆರಿಗೆ ಮಾಡಿಸಿದ ಪರಿಣಾಮ ತಾಯಿ, ಶಿಶು ಇಬ್ಬರೂ ಸಾವಿಗೀಡಾದ ಘಟನೆ ಗುಜರಾತಿನ ಬೋಟೋಡ್ ಜಿಲ್ಲೆಯಲ್ಲಿ ನಡೆದಿದೆ.
ವೈದ್ಯ ಪ್ರಾಣ ಉಳಿಸಬೇಕೇ ಹೊರತು ಪ್ರಾಣ ತೆಗೆಯಬಾರದು ಆತ ಆ ಕೆಲಸಕ್ಕೆ ಅನ್‌ಫಿಟ್ ಆಗಿದ್ದಾನೆ ಎಂದು ಅರ್ಥ, ವೈದ್ಯರೇ ದೇವರು ಎಂದು ಹೇಳುತ್ತಾರೆ, ಆದರೆ ಈ ಪ್ರಕರಣದಲ್ಲಿ ಅದೆಲ್ಲವೂ ಉಲ್ಟಾ ಆಗಿದೆ.
ಕಾಮಿನೆಬೆನ್ ಛಾಂಛಿಯಾ(22) ಮೃತ ತಾಯಿ. ಛಾಂಛಿಯಾ ಹೆರಿಗೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದಳು, ಹೆರಿಗೆ ಬಳಿಕ ತಾಯಿ, ಮಗು ಇಬ್ಬರೂ ಸಾವಿಗೀಡಾಗಿದ್ದಾರೆ ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ದೂರುತ್ತಿದ್ದಾರೆ.

ಪೊಲೀಸರು ಆಸ್ಪತ್ರೆಗೆ ಬಂದು ವಿಚಾರಣೆ ನಡೆಸಿದಾಗ ಅಸಲಿ ಕಾರಣ ಬಹಿರಂಗಗೊಂಡಿದೆ ವೈದ್ಯ ಕರ್ತವ್ಯದ ವೇಳೆ ಮದ್ಯಪಾನ ಮಾಡಿದ್ದ ಎಂದು ತಿಳಿದುಬಂದಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದ್ದು, ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಪ ಸಾಬೀತಾದರೆ ವೈದ್ಯನ ಮೇಲೆ ಚಾರ್ಜ್ ಶೀಟ್ ದಾಖಲಿಸಲು ಭಾರತೀಯ ದಂಡಸಂಹಿತೆಯಲ್ಲಿ ಅವಕಾಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications