ಗುಜರಾತಿನಲ್ಲಿ ಬಿಜೆಪಿ ಮಾಜಿ ಶಾಸಕನ ಬರ್ಬರ ಹತ್ಯೆ
ಅಹ್ಮದಾಬಾದ್, ಜನವರಿ 08: ಗುಜರಾತಿನ ಬಿಜೆಪಿ ಮಾಜಿ ಶಾಸಕ ಜಯಂತಿಲಾಲ್ ಭಾನುಶಾಲಿ ಎಂಬುವವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ಗುಜರಾತಿನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸಾಯ್ಜಿ ನಗ್ರಿ ಎಕ್ಸ್ ಪ್ರೆಸ್ ಮತ್ತು ಕಟಾರಿಯಾ-ಸುರ್ಬಾರಿ ಸ್ಟೇಶನ್ ನಡುವೆ ಈ ಘಟನೆ ನಡೆದಿದ್ದು ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಘಟನೆ ನಡೆಯುವ ಸಂದರ್ಭದಲ್ಲಿ ಜಯಂತಿಲಾಲ್ ಅವರು ಭುಜ್ ನಿಂದ ಅಹ್ಮದಾಬಾದಿಗೆ ರೈಲಿನ ಮೂಲಕ ತೆರಳುತ್ತಿದ್ದರು.
ಗುಜರಾತಿನ ಅಬಾದಸಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಜಯಂತಿಲಾಲ್ ಅವರ ಮೇಲೆ ಕಳೆದ ವರ್ಷ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದರು.












Click it and Unblock the Notifications