ಗುಜರಾತ್ ಅಮ್ಯೂಸ್ ಮೆಂಟ್ ಪಾರ್ಕ್ ಅವಘಡ; ಇಬ್ಬರು ಸಾವು, 28 ಮಂದಿಗೆ ಗಾಯ
ಗುಜರಾತ್ ನಲ್ಲಿರುವ ಅಹ್ಮದಾಬಾದ್ ನ ಕಂಕರಿಯಾ ಲೇಕ್ ಲಾನ್ ನಲ್ಲಿನ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಭಾನುವಾರ ನಡೆದ ಅವಘಡದಲ್ಲಿ ಇಬ್ಬರು ಮೃತಪಟ್ಟು, ಇಪ್ಪತ್ತೆಂಟು ಮಂದಿ ಗಾಯಗೊಂಡಿದ್ದಾರೆ. ಅಹ್ಮದ್ ಬಾದ್ ನ ಮುನ್ಸಿಪಲ್ ಕಮಿಷನರ್ ವಿಜಯ್ ನೆಹ್ರಾ ಮಾತನಾಡಿ, ಗಾಯಾಳುಗಳು ಎಲ್.ಜಿ.ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ತನಿಖೆಗೆ ಆದೇಶ ನೀಡಲಾಗಿದೆ. ಪೊಲೀಸರು, ವಿಧಿ ವಿಜ್ಞಾನ ತಂಡದವರು ಸ್ಥಳಕ್ಕೆ ತೆರಳಿದ್ದು, ಈ ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ನೆಹ್ರಾ ತಿಳಿಸಿದ್ದಾರೆ. ಪೊಲೀಸರು ಇನ್ನೂ ಎಫ್ ಐಆರ್ ದಾಖಲಿಸಿಲ್ಲ. ಮೃತರಲ್ಲಿ ಇಬ್ಬರು ವಯಸ್ಕರರು ಎಂದು ತಿಳಿದುಬಂದಿದೆ.

ಆಟದ ಹೆಸರು "ಡಿಸ್ಕವರಿ". ಅರವತ್ತೈದು ಅಡಿ ಎತ್ತರದಲ್ಲಿ ಹಾಗೂ ಎರಡು ಬದಿಗೆ ಮೂವತ್ತು ಅಡಿ ತೂಗುತ್ತಿತ್ತು. ಗೇಟ್ ಸಂಖ್ಯೆ ನಾಲ್ಕರ ಬಳಿ ಇತ್ತು. ಇದನ್ನು ಸೂಪರ್ ಸ್ಟಾರ್ ಅಮ್ಯೂಸ್ ಮೆಂಟ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿತ್ತು.

ನೆಹ್ರಾ ಮಾತನಾಡಿ, ಪ್ರಾಥಮಿಕ ತನಿಖೆ ಪ್ರಕಾರ ಸಾಮರ್ಥ್ಯಕ್ಕೆ ತಕ್ಕಷ್ಟು ಜನ ಮಾತ್ರ ಇದ್ದರು. ಮೂವತ್ತೆರಡು ಸಾಮರ್ಥ್ಯದ ಇದರಲ್ಲಿ ಮೂವತ್ತೊಂದು ಮಂಡಿ ಇದ್ದರು. ಮೊದಲ ಸುತ್ತಿನಲ್ಲಿಯೇ ಹೈಡ್ರಾಲಿಕ್ ಪುಲ್ಲಿಯ ತಂತಿ ತುಂಡಾಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಮಾಹಿತಿ ಬಹಿರಂಗ ಪಡಿಸಿದೆ. ಹೈಡ್ರಾಲಿಕ್ ವ್ಯವಸ್ಥೆ ವೈಫಲ್ಯಕ್ಕೆ ಕಾರಣ ಕಂಡುಹಿಡಿಯಲಾಗುತ್ತಿದೆ ಎಂದಿದ್ದಾರೆ.












Click it and Unblock the Notifications