'ನಮಗೆ ಬೇಕಿರುವುದು ಪ್ರಧಾನ ಮಂತ್ರಿಯೇ ಹೊರತು ಚೌಕಿದಾರನಲ್ಲ'

ಅಹಮದಾಬಾದ್, ಏಪ್ರಿಲ್ 23: ಪಾಟೀದಾರ್ ಸಂಘಟನೆಯ ಮುಖಂಡ, ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಇಂದು ಮೂರನೇ ಹಂತದ ಲೋಕಸಭಾ ಚುನವಣಾ ಪ್ರಕ್ರಿಯೆಯಲ್ಲಿ ಮತದಾನ ಮಾಡಿದರು. ಮತದಾನದ ಬಳಿಕ ಮಾತನಾಡಿದ ಹಾರ್ದಿಕ್ ಅವರು ಮೋದಿ ವಿರುದ್ಧ ಕಿಡಿಕಾರಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ನಮಗೆ ಬೇಕಿರುವುದು ಪ್ರಧಾನ ಮಂತ್ರಿಯೇ ಹೊರತು ಚೌಕಿದಾರನಲ್ಲ, ಚೌಕಿದಾರ ಬೇಕಿದ್ದರೆ ನಾನು ನೇಪಾಳಕ್ಕೆ ಹೋಗುತ್ತೇನೆ. ಈ ದೇಶಕ್ಕೆ ಪ್ರಧಾನ ಮಂತ್ರಿ ಬೇಕಿದ್ದು, ದೇಶವನ್ನು ಬಲಪಡಿಸಬೇಕಿದೆ. ಪ್ರಧಾನಿಯನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದರು.

ಗುಜರಾತಿನ 4 ಕೋಟಿಗೂ ಅಧಿಕ ಮತದಾರರು 371 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಜೊತೆಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಕಣದಲ್ಲಿ 45 ಅಭ್ಯರ್ಥಿಗಳಿದ್ದಾರೆ.

Elections 2019: We need a Prime Minister, not a Chowkidaar: Hardik Patel

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸ್ಪರ್ಧಿಸಿರುವ ಗಾಂಧಿನಗರ ಜೊತೆಗೆ ಕಛ್, ಬನಸ್ಕಾಂತಾ, ಪಟಾಣ್, ಮಹೆಸಾನಾ, ಸಬರ್ಕಾಂತಾ, ಅಹಮದಾಬಾದ್ ಪೂರ್ವ, ಅಹಮದಾಬಾದ್ ಪಶ್ಚಿಮ, ಸುರೇಂದ್ರನಗರ್, ರಾಜ್ ಕೋಟ್, ಪೋರ್ ಬಂದರ್, ಜಾಮ್ನ್ ನಗರ್, ಜುನಾಗಢ, ಅಮ್ರೇಲಿ, ಭಾವ್ ನಗರ್, ಆನಂದ್, ಖೇಡಾ, ಪಂಚ್ ಮಹಲ್, ದಹೋದ್, ವಡೋದರಾ, ಉದಯಪುರ್, ಬರೂಚ್, ಬರ್ದೋಲಿ, ಸೂರತ್, ನವ್ಸಾರಿ, ವಲ್ಸದ್ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+