ರಾಜ್ ಕೋಟ್ ನ ಈಶಾನ್ಯ ಭಾಗದಲ್ಲಿ ಭೂಕಂಪದ ಅನುಭವ

ರಾಜ್ ಕೋಟ್, ಜೂನ್ 14: ರಾಜ್ ಕೋಟ್ ನ ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ ಭಾನುವಾರ ರಾತ್ರಿ ವೇಳೆ ಭೂಕಂಪ ಸಂಭವಿಸಿದೆ.

ರಾಷ್ಟ್ರೀಯ ಸಿಸ್ಮೋಲಾಜಿ (ಎನ್ ಸಿಎಸ್) ಈ ಬಗ್ಗೆ ಮಾಹಿತಿ ನೀಡಿದ್ದು, ಗುಜರಾತಿನ ರಾಜ್ ಕೋಟ್ ನಲ್ಲಿ ರಾತ್ರಿ 8.13 ನಿಮಿಷದ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ರಿಕ್ಚರ್ ಮಾಪಕದಲ್ಲಿ 5.5 ರಷ್ಟು ತೀವ್ರತೆ ಕಂಡು ಬಂದಿದೆ.

Earthquake hits Gujarat; Epicentre near Rajkot

ಗುಜರಾತ್ ನ ಅಹಮದಾಬಾದ್ ಮುಂತಾದ ಕಡೆ ಭಾನುವಾರ ಭಾರಿ ಮಳೆ ಕೂಡಾ ಆಗಿದೆ. ಭೂಕಂಪದ ಕೇಂದ್ರ ಬಿಂದುವು ರಾಜ್ ಕೋಟ್ ನಿಂದ 118 ಕಿ. ಮೀ ವಾಯುವ್ಯಕ್ಕೆ ಕಂಡು ಬಂದಿದೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಸಾವು ನೋವು, ಆಸ್ತಿ ಹಾನಿ ಸಂಭವಿಸಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ರಾತ್ರಿ 8.35ರ ಲಘು ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ 3.0 ದಾಖಲಾಗಿದೆ ಎಂದು ಎನ್ ಸಿಎಸ್ ಮಾಹಿತಿ ನೀಡಿದೆ.

ಜೂನ್ 3 ರಂದು ನೋಯ್ಡಾದಲ್ಲಿ 3.0 ತೀವ್ರತೆಯ ಭೂಕಂಪದ ಅನುಭವ ದಾಖಲಾಗಿತ್ತು. ಇದಾದ ಬಳಿಕ ದೆಹಲಿ, ಎನ್ ಸಿ ಆರ್ ಪ್ರದೇಶದಲ್ಲೂ ಭೂಕಂಪದ ಅನುಭವವಾಗಿತ್ತು ಎಂದು ಎನ್ ಸಿಎಸ್ ತಿಳಿಸಿದೆ. ದೆಹಲಿ, ನೋಯ್ಡಾ, ಗುರುಗ್ರಾಮ ಭಾಗದಲ್ಲಿ ಒಟ್ಟಾರೆ, 5 ದಿನಗಳಲ್ಲಿ 3 ಬಾರಿ ಭೂಮಿ ಕಂಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+