ಅನಿಲ್ ಅಂಬಾನಿ ಕಂಪನಿಗೆ 648 ಕೋಟಿಯ ಏರ್ ಪೋರ್ಟ್ ಪ್ರಾಜೆಕ್ಟ್

ಉದ್ಯಮಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಗೆ ಗುಜರಾತ್ ನಲ್ಲಿ 648 ಕೋಟಿ ರುಪಾಯಿ ಮೌಲ್ಯದ ಹೊಸ ವಿಮಾನ ನಿಲ್ದಾಣದ ಗುತ್ತಿಗೆ ಸಿಕ್ಕಿದೆ. ಈ ವಿಮಾನ ನಿಲ್ದಾಣವು ರಾಜ್ ಕೋಟ್ ನ ಹಿಸ್ಸಾರ್ ನಲ್ಲಿ ನಿರ್ಮಾಣ ಆಗಲಿದೆ ಎಂದು ಕಂಪನಿಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದೇ ಗುತ್ತಿಗೆಗಾಗಿ ಎಲ್ ಅಂಡ್ ಟಿ, ಅಫ್ಕಾನ್ಸ್, ದಿಲೀಪ್ ಬಿಲ್ಡ್ ಕನ್ ಮತ್ತು ಗಾಯತ್ರಿ ಪ್ರಾಜೆಕ್ಟ್ಸ್ ಸೇರಿ ಒಂಬತ್ತು ಕಂಪನಿಗಳು ಸ್ಪರ್ಧೆ ನಡೆಸಿದ್ದವು. ಅದರಲ್ಲಿ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ನ ಬಿಡ್ ಅತಿ ಕಡಿಮೆ ಇತ್ತು. ಹಾಗೂ ಅದರ ತಾಂತ್ರಿಕ ಅಂಕ ತೊಂಬತ್ತೆರಡು ಪರ್ಸೆಂಟ್ ಗೂ ಹೆಚ್ಚಿತ್ತು ಎಂದು ಕಂಪನಿ ಹೇಳಿಕೊಂಡಿದೆ.

ಅಹಮದಾಬಾದ್ ಹಾಗೂ ರಾಜ್ ಕೋಟ್ ನ ಸಂಪರ್ಕಿಸುವ ಹೆದ್ದಾರಿಯ ಬಳಿ, ರಾಜಕೋಟ್ ವಿಮಾನ ನಿಲ್ದಾಣದಿಂದ ಮೂವತ್ತಾರು ಕಿ.ಮೀ. ದೂರದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ಆಗಲಿದೆ. ಅಹ್ಮದಾಬಾದ್ ಮೇಲಿನ ಒತ್ತಡವನ್ನು ಈ ನಿಲ್ದಾಣ ಕಡಿಮೆ ಮಾಡಲಿದೆ ಎಂದು ರಿಲಯನ್ಸ್ ಇನ್ ಫ್ರಾ ತಿಳಿಸಿದೆ.

Anil Ambani company lands 648 crore airport contract in Gujarat

ವಿಮಾನ ನಿಲ್ದಾಣದ ವಿನ್ಯಾಸ, ಎಂಜಿನಿಯರಿಂಗ್, ರನ್ ವೇ ನಿರ್ಮಾಣ, ಟ್ಯಾಕ್ಸಿ ನಿಲುಗಡೆ, ಅಗ್ನಿಶಾಮಕ ವ್ಯವಸ್ಥೆ ಇತ್ಯಾದಿ ವ್ಯವಸ್ಥೆಗಳನ್ನು ಅನಿಲ್ ಅಂಬಾನಿ ಅವರ ಕಂಪನಿಯೇ ನಿಗಾ ಮಾಡಲಿದೆ. ಇಡೀ ವಿಮಾನ ನಿಲ್ದಾಣದ ಕೆಲಸ ಮೂವತ್ತು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಕಂಪನಿಯ ರಫೇಲ್ ವ್ಯವಹಾರದ ವಿವಾದಕ್ಕೂ ಈಗಿನ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಿಲಯನ್ಸ್ ಇನ್ ಫ್ರಾಸ್ಟಕ್ಚರ್ ನಿಂದ ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸ್ವೀಡನ್ನಿನ ಎರಿಕ್ಸನ್ ಸಂಸ್ಥೆಗೆ 550 ಕೋಟಿ ರೂ. ಬಾಕಿ ಮೊತ್ತವನ್ನು ಅನಿಲ್ ಅಂಬಾನಿ ಅವರು ಪಾವತಿ ಮಾಡಬೇಕಿದೆ. ಎರಿಕ್ಸನ್ ಗೆ ಬಾಕಿ ಮೊತ್ತ ಪಾವತಿಸದ ರಿಲಯನ್ಸ್ ಕಮ್ಯುನಿಕೇಶನ್ ಚೇರ್ಮನ್ ಅನಿಲ್ ಅಂಬಾನಿ ಅವರಿಗೆ ಸುಪ್ರೀಂ ಕೋರ್ಟ್ ಜನವರಿ 7 ರಂದು ನೋಟಿಸ್ ನೀಡಿತ್ತು. ನಾಲ್ಕು ವಾರಗಳಲ್ಲಿ ಅದಕ್ಕೆ ಉತ್ತರಿಸುವಂತೆ ಗಡುವು ಸಹ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+