ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಅಸ್ವಸ್ಥ, ಶಸ್ತ್ರ ಚಿಕಿತ್ಸೆ
Recommended Video
ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಅಸ್ವಸ್ಥ | Oneindia Kannada
ಅಹಮದಾಬಾದ್, ಸೆಪ್ಟೆಂಬರ್ 4: ಗೃಹ ಸಚಿವ ಅಮಿತ್ ಶಾ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರು ಕುಸುಮ್ ದೀರ್ಜಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಲಿಪ್ಮೋ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಅವರ ಚಿಕಿತ್ಸೆ ಸ್ಥಿರವಾಗಿದ್ದು, ಸಂಜೆಯಷ್ಟೊತ್ತೊಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಚಿಕಿತ್ಸೆಯಾಗಿದೆ ಲಿಪ್ಮೋವನ್ನು ಬೇರ್ಪಡಿಸಲಾಗಿದೆ, ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಇಂದೇ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿಯಾಗಲಿದ್ದಾರೆ.

ಕಳೆದ ಜನವರಿಯಲ್ಲಿಯೂ ಜ್ವರದಿಂದ ಬಳಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಏಮ್ಸ್ಗೆ ದಾಖಲಾಗಿದ್ದರು.
ಲಿಪ್ಮೋ ಶಸ್ತ್ರ ಚಿಕಿತ್ಸೆ ಎಂದರೆ ಕೊಬ್ಬಿನಾಂಶ ಹೆಚ್ಚಾದಾಗ ಬೆಳೆಯುವ ಗಡ್ಡೆಯಾಗಿದ್ದು, ವಿಪರೀತ ನೋವು ಬರುವ ಕಾರಣ ಶಸ್ತ್ರ ಚಿಕಿತ್ಸೆ ಮಾಡಲೇಬೇಕಾಗುತ್ತದೆ. ಇದರಿಂದ ಯಾವುದೇ ಹಾನಿಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications