ಖಾಲಿ ಫ್ಲ್ಯಾಟ್‌ವೊಂದರಲ್ಲಿ ಒಂದೇ ಕುಟುಂಬದ 6 ಮಂದಿಯ ಮೃತದೇಹ ಪತ್ತೆ

ಅಹಮದಾಬಾದ್, ಜೂನ್ 19: ಒಂದೇ ಕುಟುಂಬದ ಆರು ಮಂದಿಯ ಮೃತದೇಹ ಅಹಮದಾಬಾದ್‌ನ ಅಪಾರ್ಟ್‌ಮೆಂಟ್‌ ಒಂದರ ಖಾಲಿ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದೆ.

4 ವರ್ಷದ ಅಮ್ರಿಷ್ ಪಟೇಲ್, ಅವರ ಸಹೋದರ 40 ವರ್ಷದ ಗೌರಂಗ್ ಪಟೇಲ್ ಹಾಗು ಇಬ್ಬರ ನಾಲ್ಕು ಮಂದಿಯ ಶವ ವಾಟ್ವಾ ಜಿಐಡಿಸಿ ಪ್ರದೇಶದಲ್ಲಿರು ಖಾಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ದೊರೆತಿದೆ ಎಂದು ಇನ್‌ಸ್ಪೆಕ್ಟರ್ ರೋಹಿಣಿ ತಿಳಿಸಿದ್ದಾರೆ.

ಇಬ್ಬರು ಸಹೋದರರು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಜೂನ್ 17 ರಂದು ಔಟಿಂಗ್ ಹೋಗುತ್ತೇವೆ ಎಂದು ಪತ್ನಿಯರಿಗೆ ತಿಳಿಸಿ ಮಕ್ಕಳೊಂದಿಗೆ ಮನೆಯಿಂದ ಹೊರಗೆ ಬಂದಿದ್ದರು.

6 Members Of A Same Family Found Dead In Empty Flat

ಗುರುವಾರ ರಾತ್ರಿ ಅವರಿಗೆ ಹಿಂದಿರುಗಲು ಸಾಧ್ಯವಾಗಿಲ್ಲ, ಯಾರೂ ಇಲ್ಲದ ಫ್ಲ್ಯಾಟ್‌ ಒಂದರಲ್ಲಿ ಉಳಿದುಕೊಂಡಿದ್ದರು. ಮನೆಯ ಒಳಗಿಂದ ಲಾಕ್‌ ಮಾಡಿಕೊಂಡಿದ್ದರು.

ಸಹೋದರರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಕ್ಕಳಿಗೆ ವಿಷವುಣಿಸಿರಬಹುದು ಎಂದು ಅಂದಾಜಿಸಲಾಗಿದೆ. ಇಬ್ಬರ ಮೃತದೇಹ ಡ್ರಾಯಿಂಗ್‌ ರೂಮ್‌ನಲ್ಲಿ, 9 ಹಾಗೂ 7 ವರ್ಷದ ಬಾಲಕಿಯರ ಮೃತದೇಹ ಅಡುಗೆ ಮನೆಯಲ್ಲಿ, ಇಬ್ಬರು 12 ವರ್ಷದ ಬಾಲಕರ ಮೃತದೇಹ ಬೆಡ್‌ರೂಮ್‌ನಲ್ಲಿ ಪತ್ತೆಯಾಗಿತ್ತು. ಫೊರೆನ್ಸಿಕ್ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+