ಗುಜರಾತಿನಲ್ಲಿ ಲಘುಭೂಕಂಪ: ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲು

ಅಹ್ಮದಾಬಾದ್, ಜೂನ್ 06: ಗುಜರಾತಿನಲ್ಲಿ ಬುಧವಾರ ರಾತ್ರಿ ಲಘುಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲಾಗಿದೆ.

ಇಲ್ಲಿನ ಅಹ್ಮದಾಬಾದ್, ಸಬರಕಂಠ, ಬನಶ್ಕಂಠ, ಅರಾವಳಿ ಮತ್ತು ಅಂಬಾಜಿಗಳಲ್ಲಿ ಭೂಕಂಪದ ಅನುಭವವಾಗಿದೆ. ಗುಜರಾತಿನ ಬನಶ್ಕಂಠದ ಪಲಾನ್ಪುರ ಭೂಕಂಪ ಕೇಂದ್ರವಾಗಿದ್ದು, ಇಲ್ಲಿ ರಾತ್ರಿ 10:31 ಕ್ಕೆ ಭೂಕಂಪ ಸಂಭವಿಸಿದೆ.

2001, ಜನವರಿ 26 ರಂದು ಗುಜರಾತಿನಲ್ಲಿ ಸಂಭವಿಸಿದ್ದ7.7 ತೀವ್ರತೆಯ ಭೀಕರ ಭೂಕಂಪದಲ್ಲಿ 13,800 ಜನ ಮೃತರಾಗಿದ್ದರೆ 1.5 ಲಕ್ಷಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

4.0 magnitude earthquake in Gujarat on wednesday

ಕಳೆದ ಏಪ್ರಿಲ್ ನಲ್ಲಿ ಅರುಣಅಚಲ ಪ್ರದೇಶದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿತ್ತಾದರೂ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಏಪ್ರಿಲ್ ನಲ್ಲೇ ಅಂಡಮಾನ್ ನಲ್ಲಿ ಎರಡು ಗಂಟೆಗಳಲ್ಲಿ 9 ಕಡೆ ಸಣ್ಣ ಪ್ರಮಾಣದ ಭೂಕಂಪ ಸಂಭವಿಸಿತ್ತು.

ಕಳೆದ ಮಾರ್ಚ್ ನಲ್ಲೂ ಅಂಡಮಾನ್ -ನಿಕೋಬಾರ್ ದ್ವೀಪದಲ್ಲಿ 4.8 ತೀವ್ರತೆಯ ಲಘುಭೂಕಂಪ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+