ಆಗ್ರಾದಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ
ಆಗ್ರಾ, ಮೇ 12: ಬಹಿರ್ದೆಸೆಗೆ ತೆರಳಿದ್ದ ಎಂಟನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಸೈಯಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕಿ ಬೆಳಗ್ಗೆ 6.15ರ ಸುಮಾರಿಗೆ ಬಹಿರ್ದೆಸೆಗೆಂದು ಹೊಲದ ಬಳಿ ಹೋಗಿದ್ದಾಳೆ.
ಮೂರು ಗಂಟೆಗಳಾದರೂ ಆಕೆ ಮನೆಗೆ ಬಾರದಿದ್ದಾಗ ಮನೆಯವರು ಗಾಬರಿಗೊಂಡು ಹೊಲದತ್ತ ತೆರಳಿ ಹುಡುಕಲು ಆರಂಭಿಸಿದ್ದಾರೆ. ಆಕೆ ವಿವಸ್ತ್ರವಾಗಿ ಶವವಾಗಿ ಬಿದ್ದಿದ್ದಳು. ಮೈಮೇಲೆ ತರಚಿದ ಗಾಯಗಳೂ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ತಂದೆ-ತಾಯಿ ಇಲ್ಲದ ತಬ್ಬಲಿ, ತಂದೆ ಸಾವಿನ ಬಳಿಕ ತಾಯಿಯೂ ಕೂಡ ಕಣ್ಮರೆಯಾಗಿದ್ದರು. ಆಕೆ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದಳು. ಆಕೆಯ ವಸ್ತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬಳಿಕ ಇನ್ನಷ್ಟು ಮಾಹಿತಿ ಹೊರಬೀಳಲಿದೆ.
ಬಾಲಕಿಯ ಕುಟುಂಬದವರಿಗೆ ಯಾರೇ ಶತೃಗಳಿರಲಿಲ್ಲ, ಯಾರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿಲ್ಲ.











Click it and Unblock the Notifications