ಲೋಕಸಭೆಯ 10 ಯುವ ಸದಸ್ಯರಲ್ಲಿ ರಮ್ಯಾ ನಂ.1
'ಏಳಿ ಯುವಕರೇ ಎದ್ದೇಳಿ, ಗುರಿ ತಲುಪುವವರೆಗೂ ನಿಲ್ಲದಿರಿ' ಇದು ಭಾರತ ದೇಶ ಕಂಡ ಅತ್ಯಂತ ಪ್ರಭಾವಶಾಲಿ ಮತ್ತು ತತ್ವಜ್ಞಾನಿ ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು.
ಜನಪ್ರತಿನಿಧಿಗಳಾಗಲು ವಯೋಮಿತಿಯ ಲಿಮಿಟ್ ಇರ ಬೇಕೆನ್ನುವುದು ಹಿಂದಿನಿಂದ ಇಂದಿನವರೆಗೂ ಚರ್ಚೆಯ ವಿಷಯವಾಗಿದೆಯೇ ಹೊರತು ಅದು ಇದುವರೆಗೂ ಕಾರ್ಯರೂಪಕ್ಕೆ ಬರಲೇ ಇಲ್ಲ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಬೇಕೆಂದು ಹೇಳುತ್ತಲೇ ಬಂದಿದ್ದಾರೆ.
ಕೆಲವೊಂದು ವಿಚಾರದಲ್ಲಿ ಯುವಕರಿಗೆ ಆದ್ಯತೆ ನೀಡಬೇಕೆನ್ನುವ ವಿಚಾರ ಕಾರ್ಯರೂಪಕ್ಕೆ ಬಂದಿದ್ದರೂ, ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವ ನೀತಿ ಅನುಸರಿಸುತ್ತಾರೆ ಎನ್ನುವುದು ಮುಖ್ಯ.
ಯುವಕರಿಗೆ ಪ್ರಾತಿನಿಧ್ಯ ನೀಡುತ್ತಾರೋ ಅಥವಾ ಗೆದ್ದ ಎತ್ತಿನ ಬಾಲ ಹಿಡಿದುಕೊಂಡು ಹೋಗುತ್ತಾರೋ? ಕಾದು ನೋಡಣ. ಈ ಮಧ್ಯೆ ಇದುವರೆಗಿನ (15ನೇ) ಲೋಕಸಭೆಯ ಇತಿಹಾಸದಲ್ಲಿನ ಹತ್ತು ಅತಿ ಕಿರಿಯ ಸದಸ್ಯರು ಯಾರು? ಸ್ಲೈಡಿನಲ್ಲಿ..

ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ
ಮಂಡ್ಯ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಆಯ್ಕೆಯಾದ ರಮ್ಯಾ ಲೋಕಸಭೆ ಇತಿಹಾಸದಲ್ಲಿ ಇದುವರೆಗಿನ ಅತಿ ಕಿರಿಯ ಸಂಸತ್ ಸದಸ್ಯರು. ರಮ್ಯಾ ಹುಟ್ಟಿದ್ದು 29.11.1982ರಲ್ಲಿ. ಅಂದರೆ ರಮ್ಯಾಗೆ ಈಗ 30.8 ವರ್ಷ.

ಮೊಹಮ್ಮದ್ ಹಮದುಲ್ಲಾ ಸಯೀದ್
ಕಾಂಗ್ರೆಸ್ ಮುಖಂಡ ಪಿ ಎಂ ಸಯೀದ್ ಪುತ್ರ ಮೊಹಮ್ಮದ್ ಹಮದುಲ್ಲಾ ಸಯೀದ್ ಲಕ್ಷದ್ವೀಪ ಕ್ಷೇತ್ರದ ಕಾಂಗ್ರೆಸ್ ಸಂಸದ. ಇವರು ಹುಟ್ಟಿದ್ದು 11.04.1982 ಅಂದರೆ ಅವರಿಗೀಗ 31.4 ವರ್ಷ.

ನಿಲೇಶ್ ರಾಣೆ
ಮಾಜಿ ಶಿವಸೇನೆ, ಕಾಂಗ್ರೆಸ್ ನಾಯಕ ನಾರಾಯಣ್ ರಾಣೆ ಅವರ ಪುತ್ರ ನಿಲೇಶ್ ನಾರಾಯಣ್ ರಾಣೆ ಮಹಾರಾಷ್ಟ್ರದ ರತ್ನಗಿರಿ - ಸಿಂಧುದುರ್ಗ ಕ್ಷೇತ್ರದ ಕಾಂಗ್ರೆಸ್ ಸಂಸದ. ಇವರು ಹುಟ್ಟಿದ್ದು 17.03.1981 ಅಂದರೆ ಇವರಿಗೀಗ 32.5 ವರ್ಷ.

ವರುಣ್ ಗಾಂಧಿ
ಬಿಜೆಪಿಯ ಫೈರ್ ಬ್ರಾಂಡ್ ಫಿರೋಜ್ ವರುಣ್ ಗಾಂಧಿ ಹುಟ್ಟಿದ್ದು 13.03.1980ರಲ್ಲಿ. ಉತ್ತರಪ್ರದೇಶದ ಪಿಲಿಬಿಟ್ ಕ್ಷೇತ್ರದ ಸಂಸದರಾಗಿರುವ ಇವರ ವಯಸ್ಸು 33.5 ವರ್ಷ.

ಸಾರಿಕಾ ಸಿಂಗ್
ಸಾರಿಕಾ ಸಿಂಗ್ ಅವರು ರಾಷ್ಟೀಯ ಜನತಾದಳದ ಟಿಕೆಟಿನಿಂದ ಆಯ್ಕೆಯಾಗಿದ್ದಾರೆ. ಉತ್ತರಪ್ರದೇಶದ ಹತ್ರಾಸ್ ಕ್ಷೇತ್ರದಿಂದ ಆಯ್ಕೆಯಾದ ಸಾರಿಕಾ ಸಿಂಗ್ ಹುಟ್ಟಿದ್ದು 09.08.1980ರಲ್ಲಿ. ಅಂದರೆ ಇವರಿಗೀಗ 33 ವರ್ಷ.

ಅಗತಾ ಸಂಗ್ಮಾ
ಮಾಜಿ ಸ್ಪೀಕರ್ ಪಿ ಎ ಸಂಗ್ಮಾ ಪುತ್ರಿಯಾಗಿರುವ ಅಗತಾ ಸಂಗ್ಮಾ ಹುಟ್ಟಿದ್ದು 24.07.1980ರಲ್ಲಿ. ಮೇಘಾಲಯದ ತುರಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಇವರು ಮನಮೋಹನ್ ಸಿಂಗ್ ಸರಕಾರದಲ್ಲಿ ಸಚಿವೆ ಕೂಡಾ. ಇವರ ವಯಸ್ಸು 33.1ವರ್ಷ.

ಮೌಸಂ ನೂರ್
ಪಶ್ಚಿಮ ಬಂಗಾಳದ ಮಲ್ದಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿರುವ ಇವರು ಹುಟ್ಟಿದ್ದು 15.10.1979ರಲ್ಲಿ. ಇವರ ವಯಸ್ಸು 33.10 ವರ್ಷ.

ಸಚಿನ್ ಪೈಲಟ್
ಮಾಜಿ ಕಾಂಗ್ರೆಸ್ ಸಚಿವ ರಾಜೇಶ್ ಪೈಲಟ್ ಪುತ್ರ ಸಚಿನ್ ಪೈಲಟ್ ರಾಜಸ್ಥಾನದ ಅಜ್ಮೀರ್ ಕ್ಷೇತ್ರದ ಕಾಂಗ್ರೆಸ್ ಸಂಸದ. ಸಚಿವರೂ ಆಗಿರುವ ಸಚಿನ್ ಹುಟ್ಟಿದ್ದು 07.09.1977ರಲ್ಲಿ. ಇವರ ವಯಸ್ಸು 36 ವರ್ಷ.

ಮಿಲಿಂದ್ ದಿಯೋರಾ
ಹಿರಿಯ ರಾಜಕಾರಿಣಿ ಮುರುಳಿ ದಿಯೋರಾ ಪುತ್ರರಾಗಿರುವ ಮಿಲಿಂದ್ ದಿಯೋರಾ ಹುಟ್ಟಿದ್ದು 04.12.1976ರಲ್ಲಿ. ಮುಂಬೈ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿರುವ ಇವರು ಸಚಿವರು ಕೂಡಾ. ಇವರ ವಯಸ್ಸು 36.8 ವರ್ಷ.

ದುಷ್ಯಂತ್ ಸಿಂಗ್
ರಾಜಸ್ಥಾನದ ಜಲ್ವಾರ್ - ಬಾರನ್ ಕ್ಷೇತ್ರದ ಬಿಜೆಪಿ ಸಂಸದ. ಇವರು ಹುಟ್ಟಿದ್ದು 11.09.1973ರಲ್ಲಿ, ಇವರ ವಯಸ್ಸು 40.












Click it and Unblock the Notifications