• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಸಾನ್ ಧೂಮಕೇತು ಬಗ್ಗೆ ಬೆಂಗಳೂರಲ್ಲಿ ಕಾರ್ಯಾಗಾರ

By Prasad
|

ಬೆಂಗಳೂರು, ಆ. 18 : ಐಸಾನ್ ಎಂಬ ಧೂಮಕೇತು ಇನ್ನು ಕೆಲವೇ ತಿಂಗಳಲ್ಲಿ ಸೌರವ್ಯೂಹದೊಳಗೆ ಕಾಣಿಸಿಕೊಳ್ಳಲಿದೆ. ಆಗಸವನ್ನು ಗುಡಿಸುವ ಪೊರಕೆಯಂತೆ ಕಾಣಿಸುವ ನಯನ ಮನೋಹರವಾದ ಐಸಾನ್ ಧೂಮಕೇತುವು 28.11.2013ರಿಂದ ಭೂಕಕ್ಷೆಗೆ ಹತ್ತಿರದಲ್ಲಿ ಹಾದು ಹೋಗಲಿದ್ದು, ತದನಂತರ ಇದು ಮತ್ತಷ್ಟು ಪ್ರಕಾಶಮಾನವಾಗಿ ಕಾಣಲಿದೆ.

ರಾಷ್ಟ್ರಾದ್ಯಂತ ಈ ಧೂಮಕೇತುವನ್ನು ಹಿಂಬಾಲಿಸಿ ಆಕರ್ಷಕ ದೃಶ್ಯಗಳನ್ನು ಸೆರೆಹಿಡಿಯಲು ವಿವಿಧ ವಿಜ್ಞಾನ ಸಂಸ್ಥೆಗಳು, ಖಗೋಳ ಅಧ್ಯಯನ ಗುಂಪುಗಳು ಮತ್ತು ಇತರೆ ಸಂಘಟನೆಗಳು ಕಾತುರದಿಂದ ಸಿದ್ದತೆ ನಡೆಸಿವೆ. ವಿವಿಧ ಗ್ರಹಣಗಳು ಮತ್ತು ಶುಕ್ರ ಸಂಕ್ರಮ, ಇತ್ಯಾದಿ ಘಟನಾವಳಿಗಳ ಸಮಯದಲ್ಲಿಯಂತೆಯೇ ಈ ಘಟನಾವಳಿಯನ್ನೂ ಸಹ ರಾಜ್ಯದ ಹಲವಾರು ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸಲು ಭಾರತ ಜ್ಞಾನ ವಿಜ್ಞಾನ ಸಮಿತಿ ತಯಾರಿ ನಡೆಸಿದೆ.

ಇದಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರದ ವಿಜ್ಞಾನ ಪ್ರಸಾರ್ ಮತ್ತು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು ಸಂಸ್ಥೆಗಳ ಸಹಯೋಗದೊಂದಿಗೆ ದಕ್ಷಿಣ ರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡುವ ಸಲುವಾಗಿ ರಾಷ್ಟ್ರ ಮಟ್ಟದ 3 ದಿನಗಳ ಐಸಾನ್ ಧೂಮಕೇತು ಕುರಿತು ಕಾರ್ಯಾಗಾರವನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ಮತ್ತು ಸಮಕಾಲೀನ ಅಧ್ಯಯನ ಕೇಂದ್ರ, ಭಾರತೀಯ ವಿಜ್ಞಾನ ಮಂದಿರ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿವೆ.

ಆಗಸ್ಟ್ 22ರಿಂದ 24ರವರೆಗೆ ದಕ್ಷಿಣ ರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಈ ಸಂಪನ್ಮೂಲ ವ್ಯಕ್ತಿಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ನಡೆಸಿ ಶಿಕ್ಷಕರಿಗೆ ಮತ್ತು ವಿಜ್ಞಾನ ಕಾರ್ಯಕರ್ತರಿಗೆ ತರಬೇತಿ ನೀಡಲಿದ್ದಾರೆ. ದಕ್ಷಿಣದ 6 ರಾಜ್ಯಗಳಿಂದ ಒಟ್ಟು 40 ಜನರು ಮೂರು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಐಸಾನ್ ಧೂಮಕೇತು ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಐಸಾನ್ ಧೂಮಕೇತು ಕುರಿತಾಗಿ ಜಾಗೃತಿ ಮೂಡಿಸಲು ಹಾಗೂ ಮತ್ತಷ್ಟು ವಿವರಗಳನ್ನು ನೀಡುವ ಸಲುವಾಗಿ 19ನೇ ಆಗಸ್ಟ್, ಸೋಮವಾರ ಬೆಳಿಗ್ಗೆ 11.30ಕ್ಕೆ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದ್ದು, ಇದರಲ್ಲಿ ಭಾರತೀಯ ಖಗೋಳಭೌತಶಾಸ್ತ್ರ ಸಂಸ್ಥೆಯ ವಿಜ್ಞಾನಿಗಳಾದ ಪ್ರೊ. ಪ್ರಜ್ವಲ ಶಾಸ್ತ್ರಿ, ಡಾ: ಎಸ್. ಚಟರ್ಜಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಖಜಾಂಚಿ ಜೈಕುಮಾರ್ ಮತ್ತು ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರಭಾರವರು ಹಾಜರಿರುತ್ತಾರೆ.

ಪತ್ರಿಕಾಗೋಷ್ಠಿ ಸ್ಥಳ : ಬೆಂಗಳೂರು ಪ್ರೆಸ್ ಕ್ಲಬ್, ಹೈಕೋರ್ಟ್ ಹತ್ತಿರ, ಬೆಂಗಳೂರು.

ದಿನಾಂಕ & ವೇಳೆ : ಆಗಸ್ಟ್ 19, ಸೋಮವಾರ, ಬೆಳಿಗ್ಗೆ 11.30ಕ್ಕೆ

English summary
Comet ISON will make an appearance soon in the inner solar system. This sun-grazing comet will reach perihelion on 28th Nov 2013. To provide more information on the ISON comet, by Centre for Contemporary Studies, IISc has called a press conference on Aug. 19th at the Press club at 11.30 AM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X