23 ಜೆಡಿಎಸ್ ಶಾಸಕರು ಕಾಂಗ್ರೆಸ್ಸಿಗೆ: ಎಚ್ಡಿಕೆಗೆ ಡಿಕೆಶಿ ಡಿಚ್ಚಿ

bangalore-anekal-23-jds-mlas-ready-to-join-congress-dk-shivakumar
ಬೆಂಗಳೂರು, ಆಗಸ್ಟ್ 13: ಜೆಡಿಎಸ್ ಪಕ್ಷದ 40 ಶಾಸಕರ ಪೈಕಿ ಅರ್ಧಕ್ಕರ್ಧ ಮಂದಿ ಕಾಂಗ್ರೆಸ್ ಸೇರಲು ಸಿದ್ಧವಿರುವುದಾಗಿ ಕನಕಪುರ ಶಾಸಕ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಡಿಕೆಶಿ ಧಮಾಕಾ!: ಇದೇನು ನಿನ್ನೆ 65ನೇ ಹುಟ್ಟುಹಬ್ಬ ಆಚರಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿಕೆ ಶಿವಕುಮಾರ್ ಬರ್ತ್ ಡೆ ಗಿಫ್ಟೋ ಅಥವಾ ತಮ್ಮನ್ನು ಮಂತ್ರಿ ಮಾಡುವ ಭರವಸೆ ನೀಡಿರುವ ಸಿಎಂ ಸಿದ್ದುಗೆ ಋಣಭಾರ ಸಲ್ಲಿಸುವ ಪ್ರಯತ್ನವೋ ಅಥವಾ ಅತ್ತ ತಮ್ಮ ತಮ್ಮನಿಗೆ ನೀರಿಳಿಸುತ್ತಿರುವ ಜೆಡಿಎಸ್ ಅಧಿನಾಯಕ ಎಚ್ ಡಿ ಕುಮಾರಸ್ವಾಮಿಗೆ ನೇರವಾಗಿ ಕೊಟ್ಟಿರುವ ಡಿಚ್ಚಿಯೋ - ಎಂಬ ಸತ್ಯಾಂಶವನ್ನು ಖುದ್ದು ಡಿಕೆಶಿ (ಅಥವಾ ಕುಮಾರಸ್ವಾಮಿ ಅದರೂ ಪರವಾಗಿಲ್ಲ) ತಿಳಿಸಿದರೆ ಕನ್ನಡನಾಡಿನ ಜನತೆ ಧನ್ಯತೆ ಅನುಭವಿಸುತ್ತಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಮತ್ತು ತಾವು ಪ್ರತಿಪಕ್ಷ ನಾಯಕನಾಗುವುದು ನಿಕ್ಕಿಯಾಗುತ್ತಿದ್ದಂತೆ ಖುದ್ದು ಎಚ್ ಡಿ ಕುಮಾರಸ್ವಾಮಿಯೇ ಇಂತಹ ಹುಳಬಿಟ್ಟಿದ್ದರು. ತಮಗೆ ಪ್ರತಿಪಕ್ಷ ನಾಯಕನಾಗುವ ಅವಕಾಶವನ್ನು ತಪ್ಪಿಸಲು ಸಿಎಂ ಸಿದ್ದು ಆಪರೇಶನ್ ಹಸ್ತಕ್ಕೆ ಮುಂದಾಗಿದ್ದಾರೆ ಎಂದು ಅಲವತ್ತುಕೊಂಡಿದ್ದರು.

ಆದರೆ ಅದೆಲ್ಲಾ ಹಾಗಿರಲಿ, ಈಗ ಕಾಂಗ್ರೆಸ್ಸಿನ ಹಿರಿಯ ನಾಯಕ, ದೊಡ್ಡ ಗೌಡರ ಕುಟುಂಬದ ಕಡುವೈರಿ ಡಿಕೆ ಶಿವಕುಮಾರ್ ಅವರೇ ಈಗ ಜೆಡಿಎಸ್ ಪಕ್ಷದ 23 ಶಾಸಕರು ಕಾಂಗ್ರೆಸ್ ಹೊಸ್ತಿಲಲ್ಲಿದ್ದಾರೆ ಎಂದಿದ್ದಾರೆ. ಹೌದು, 23 ಶಾಸಕರ ಸಂಖ್ಯೆಯನ್ನು ಇಷ್ಟೊಂದು ನಿಖರವಾಗಿ/ನಿರ್ದಿಷ್ಟವಾಗಿ ಹೇಳುತ್ತಿದ್ದಾರೆ ಅಮದರೆ ಅದರಲ್ಲೇನಾದರೂ ನಿಜಾಂಶ ಇದೆಯಾ ಎಂದು ನೋಡುವಂತಾಗಿದೆ. ಇದು ಕುಮಾರಸ್ವಾಮಿ ಅವರ ನಿದ್ದೆಗೆಡಿಸಿರಲಿಕ್ಕೂ ಸಾಕು!

ಎಲ್ಲಿ ಹೇಳಿದ್ದಾರೆ?: ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆ ನಿಮಿತ್ತ ಆನೇಕಲ್ ಭಾಗದ ಕೂಡ್ಲು ಸಮೀಪ ಗ್ಲೋಬಲ್ ಸಂಸ್ಥೆಯಲ್ಲಿ ತಮ್ಮ ಪಕ್ಷದ ಸ್ಥಳೀಯ ಮುಖಂಡರ ಜತೆ ಭಾನುವಾರ ತಡರಾತ್ರಿ ಮಾತುಕತೆ ನಡೆಸಿದ ವೇಳೆ ಜೆಡಿ ಎಸ್ ಶಾಸಕರ ಗುಳೆ ಏಳುವ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಕಾರಣವಾದರೂ ಏನು?: ಅಪ್ಪ-ಮಕ್ಕಳ ಪಕ್ಷದಲ್ಲಿ ಉಸಿರುಗಟ್ಟಿದ ವಾತಾವರಣ ಇದೆ. ಅದರಿಂದ ಹೊರಬರಲು ಇಚ್ಚಿಸಿರುವ ಸದರಿ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಗಾಗಲೇ ಭೇಟಿ ಮಾಡಿ, ಮಾತುಕತೆಯನ್ನೂ ನಡೆಸಿದ್ದಾರೆ.

ದೇವೇಗೌಡರಿಗೆ ಮಾತ್ರ ಮೀಸಲಾಗಿರುವ ಪಾರ್ಟಿಯಲ್ಲಿ ಅಪ್ಪ-ಮಕ್ಕಳ ಜತೆ ಯಾರಿಗಾದರೂ ವಿರಸ ಬಂದರೆ ಅವರನ್ನು ಕೂಡಲೇ ಕಿಕ್ ಔಟ್ ಮಾಡುತ್ತಾರೆ. ಇದೆಲ್ಲವನ್ನೂ ಅರಿತು ಅನುಭವಿಸುತ್ತಿರುವ ಸದರಿ 23 ಶಾಸಕರು ಜೆಡಿಎಸ್ ಗೆ ಗುಡ್ ಬೈ ಹೇಳಲು ಸಿದ್ಧರಾಗಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+