ಚೆನ್ನೈ ಆಣ್ಣಾದೊರೈ ಓಡಿಸೋ ಆಟೋ ನೋಡ್ರಿ

ಬೆಂಗಳೂರು, ಆ.5: ಮುಂಬರುವ ಸೆಪ್ಟೆಂಬರ್ ವೇಳೆಗೆ ದಿ- ರಿಕ್ಸ್ ಎಂದು ಕರೆಯಲ್ಪಡುವ ಹೈಟೆಕ್ ಆಟೋರಿಕ್ಷಾಗಳು ಬೆಂಗಳೂರಿನ ರಸ್ತೆಗಳಲ್ಲಿ ಸದ್ದು ಮಾಡಲಿದೆ ಎಂಬ ಸುದ್ದಿಯನ್ನು ಓದಿರುತ್ತೀರಿ. ಅದರೆ, ಬೆಂಗಳೂರಿನ ರಸ್ತೆಗಳಲ್ಲಿ ಈ ರಿಕ್ಷಾಗಳು ಇಳಿಯುವ ಮೊದಲೇ ಇಂಥದ್ದೇ ಒಂದು ರಿಕ್ಷಾ ಚೆನ್ನೈ ರಸ್ತೆಗಳಲ್ಲಿ ಓಡಾಡುತ್ತಾ ಫೇಸ್ ಬುಕ್ ಪುಟಗಳಲ್ಲಿ ಹಂಚಿಕೆಯಾಗುತ್ತಿದೆ.

ಅಣ್ಣಾ ದೊರೈ ಓಡಿಸುವ ಆಟೋ ಚೆನ್ನೈ ಸಿಟಿಯಲ್ಲಿ ಚಿರಪರಿಚಿತ. ಎಲ್ಲಾ ಆಟೋ ಡ್ರೈವರ್ ಗಿಂತ ಕೊಂಚ ಭಿನ್ನವಾಗಿ ಯೋಚನೆ ಮಾಡಿದ ಅಣ್ಣಾ ದೊರೈ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ. ಬೆಂಗಳೂರಿನ ದಿ ರಿಕ್ಸ್ ಎಂಬ ಸಂಸ್ಥೆ ಹುಟ್ಟು ಹಾಕಲು ಯತ್ನಿಸಿರುವ ಹೈಟೆಕ್ ಆಟೋರಿಕ್ಷಾ ಮಾದರಿಯನ್ನು ಅಣ್ಣಾದೊರೈ ಒಬ್ಬನೇ ನೀಡುತ್ತಿದ್ದಾನೆ ಎಂಬುದು ಅಚ್ಚರಿಯ ಸಂಗತಿ.

ಅಣ್ಣಾದೊರೈ ಆಟೋ ವಿಶೇಷ: ಈ ಆಟೋರಿಕ್ಷಾದಲ್ಲಿ ಉಚಿತವಾಗಿ ಮೊಬೈಲ್ ಬ್ಯಾಟರಿ ಚಾರ್ಚ್ ಮಾಡಿಕೊಳ್ಳಬಹುದು. ಟಿವಿ ನೋಡಬಹುದು, ವೈಫೈ ಉಚಿತ, ವಿವಿಧ ಭಾಷೆಯ ಮ್ಯಾಗಜೀನ್, ದಿನಪತ್ರಿಕೆಗಳು ಲಭ್ಯ, ಗ್ರಾಹಕರಿಗೆ ಬಂಪರ್ ಬಹುಮಾನ ಸ್ಪರ್ಧೆಗಳಿವೆ, ದಾನ ನೀಡಲು ಮುಂದಾಗುವ ಪ್ರಯಾಣಿಕರು ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವಂತೆ ಅಣ್ಣಾದೊರೈ ಮಾಡಿದ್ದಾನೆ.

ಅಣ್ಣಾದೊರೈ ಆಟೋರಿಕ್ಷಾ ಇದೀಗ ಐದನೇ ವರ್ಷದ ಸಂಚಾರ ಕಾಣುತ್ತಿದೆ. ತ್ರಿಶಾ ಮಹಾಜನ್ ಎಂಬ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬರು ಅಣ್ಣಾದೊರೈ ಸಂದರ್ಶನ ಮಾಡಿ ಯೂ ಟ್ಯೂಬ್ ನಲ್ಲಿ ಹಾಕಿ ಒಂದು ವರ್ಷ ದಾಟಿದೆ. ಆದರೆ, ಫೇಸ್ ಬುಕ್ ನಲ್ಲಿ ಇತ್ತೀಚೆಗೆ ಅಣ್ಣಾದೊರೈ ಆಟೋ ಸುದ್ದಿ ಸದ್ದು ಮಾಡಿದ್ದರಿಂದ ಅತನ ಪರಿಚಯಾತ್ಮಕ ಲೇಖನ ಇಲ್ಲಿದೆ ಓದಿ..

 ರಿಯಾಯಿತಿ ಸೌಲಭ್ಯ

ರಿಯಾಯಿತಿ ಸೌಲಭ್ಯ

ವಿಶೇಷ ದಿನಗಳಲ್ಲಿ ಮಕ್ಕಳು, ಅಬಲೆಯರು, ಶಿಕ್ಷಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ಸೌಲಭ್ಯವಿದೆ. ಅಬ್ದುಲ್ ಕಲಾಂ ಹುಟ್ಟುಹಬ್ಬದ ದಿನ ರಿಯಾಯಿತಿ ಜೊತೆಗೆ ಚಾಕಲೋಟ್ ಹಂಚುತ್ತಾನೆ.

ಬಂಪರ್ ಬಹುಮಾನ

ಬಂಪರ್ ಬಹುಮಾನ

ಮೊಬೈಲ್ ಹಾಗೂ ಡಿಟಿಎಚ್ ರೀಚಾರ್ಚ್ ಕೂಡಾ ಮಾಡಿಸಿಕೊಳ್ಳಬಹುದು.. ಇನ್ನೂ ಇತ್ಯಾದಿ ಸೌಲಭ್ಯಗಳು ಒಂದೇ ಆಟೋದಲ್ಲಿ ಸಿಗುತ್ತದೆ. ಪ್ರಯಾಣಿಕರಿಗೆ ಬಂಪರ್ ಬಹುಮಾನ ಯೋಜನೆ, ಸ್ಪರ್ಧೆ ಕೂಡಾ ಇದೆ.

ಪ್ರಯಾಣಿಕರು ಖುಷಿಯಾಗಿರಬೇಕು ಸಾರ್, ಅವರು ತೃಪ್ತಿಯಿಂದ ಪ್ರಯಾಣ ಮಾಡಿ ನಮ್ಮನ್ನು ಹರಿಸಿದರೆ ಅದೇ ನಮ್ಮ ಭಾಗ್ಯ ಎನ್ನುತ್ತಾನೆ 29 ವರ್ಷದ ಅಣ್ಣಾದೊರೈ.

ಪತ್ರಿಕೆ ಜೊತೆ ವೈಫೈ

ಪತ್ರಿಕೆ ಜೊತೆ ವೈಫೈ

ಎಷ್ಟು ಖರ್ಚು ಮಾಡ್ತಿಯಪ್ಪಾ: ಮ್ಯಾಗಜೀನ್ ಗಳನ್ನು ಖರೀದಿಸಲು ತಿಂಗಳಿಗೆ ಸುಮಾರು 4000 ರು ಖರ್ಚು ಮಾಡುವ ಅಣ್ಣಾದೊರೈ ಸುಮಾರು 35 ಕ್ಕೂ ಅಧಿಕ ಪ್ರಸರಣ ಸಂಸ್ಥೆ ಮ್ಯಾಗಜೀನ್ ಪಡೆಯುತ್ತಿದ್ದಾನೆ. ದಿನಪತ್ರಿಕೆ, ವಾರಪತ್ರಿಕೆ,ಮಾಸಪತ್ರಿಕೆಗಳು ಪ್ರಯಾಣಿಕರಿಗೆ ಲಭ್ಯವಿರುತ್ತದೆ.

ಆಟೋಗೆ ಬೇಡಿಕೆ

ಆಟೋಗೆ ಬೇಡಿಕೆ

ಒಟ್ಟಾರೆ ತಿಂಗಳಿಗೆ 5 ಸಾವಿರ ಖರ್ಚು ಮಾಡಿ ಪ್ರಯಾಣಿಕರ ಮನಸ್ಸು ತೃಪ್ತಿ ಪಡಿಸುವ ಅಣ್ಣಾದೊರೈಗೆ ಪ್ರತಿದಿನ 1 ಸಾವಿರ ರು ಅಧಿಕ ಲಾಭ ಸಿಗುತ್ತಿದೆಯಂತೆ, ಒಮ್ಮೆ ಪ್ರಯಾಣಿಸಿದ ಜನ ಮತ್ತೊಮ್ಮೆ ಹುಡುಕಿಕೊಂಡು ಬರುತ್ತಾರಂತೆ. ಕೆಲವರು ಫೋನ್ ಮಾಡಿ ಕರೆಸಿಕೊಳ್ಳುತ್ತಾರೆ ಎನ್ನುತ್ತಾನೆ ಅಣ್ಣಾದೊರೈ

ಇದು ಸಿಂಪಲ್ ಷೇರ್ ಆಟೋ

ಇದು ಸಿಂಪಲ್ ಷೇರ್ ಆಟೋ

ಬೆಳಗ್ಗೆ 8 ರಿಂದ 1 ಗಂಟೆ ಹಾಗೂ ಸಂಜೆ 5 ರಿಂದ ರಾತ್ರಿ 11 ರ ತನಕ ಈ ಹೈಟಕ್ ಅಟೋ ಓಡಾಟ ಕಾಣಬಹುದು. 11 ಕಿ.ಮೀ ದೂರಕ್ಕೆ ಕೇವಲ 15 ರು ಪಡೆಯುತ್ತಾನೆ.

ಇದೇ ದೂರ ಕ್ರಮಿಸಲು ಇತರೆ ಷೇರ್ ಆಟೋಗಳು 20 ರು ಡಿಮ್ಯಾಂಡ್ ಮಾಡುತ್ತಾರೆ. ನನಗೆ ಹಣಕ್ಕಿಂತ ಜನ ಮುಖ್ಯ. ಜನ ನನ್ನನ್ನು ನೆನಪಿಸಿಕೊಳ್ಳುವುದು ಮುಖ್ಯ ಎನ್ನುತ್ತಾನೆ ಅಣ್ಣಾದೊರೈ
ಪತ್ರಿಕೆ ಜೊತೆ ವೈಫೈ

ಪತ್ರಿಕೆ ಜೊತೆ ವೈಫೈ

ಎಲ್ಲಕ್ಕಿಂತ ಬಂಪರ್ ಕೊಡುಗೆ ಎಂದರೆ, ವೈಫೈ ಹೊಂದಿರುವ ಆಟೋರಿಕ್ಷಾ ಹತ್ತಿ ನೀವು ಛೇ ಲ್ಯಾಪ್ ಟ್ಯಾಪ್, ಸ್ಮಾರ್ಟ್ ಫೋನ್ ತರೋದು ಮರೆತೆ ಎಂದು ಪೇಚಾಡುತ್ತಿದ್ದಾರೆ. ನಿಮ್ಮ ಮುಂದೆ 10 ಇಂಚಿನ ಟ್ಯಾಬ್ಲೆಟ್ ಇಡುತ್ತಾನೆ ಅಣ್ಣಾದೊರೈ.

ಐಟಿ ಕಂಪನಿಗಳಲ್ಲಿ ಉದ್ಯೋಗಿಯಾಗಿರುವವರಿಗೆ ಇಂಟರ್ನೆಟ್ ಎಷ್ಟು ಮುಖ್ಯ ಎಂಬುದು ನನಗೆ ತಿಳಿದ ಮೇಲೆ ಇಂಟರ್ನೆಟ್ ಡಾಂಗಲ್ ಇರುವ ವೈ ಫೈ ರೂಟರ್ ಪಡೆದೆ. ಉಚಿತವಾಗಿ ಅಂತರ್ಜಾಲ ಸಂಪರ್ಕ ಒದಗಿಸಲು ಆರಂಭಿಸಿದೆ ಎಂದು ಅಣ್ಣಾದೊರೈ ಹೇಳುತ್ತಾನೆ.

ಕಿರು ಚಿತ್ರ ನೋಡಿ

ಅಣ್ಣಾದೊರೈ ವಿಶೇಷ ಆಟೋ ಕುರಿತ ಕಿರು ಚಿತ್ರ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+