ನಿರೀಕ್ಷಿಸಿ ! ಬೆಂಗಳೂರಿನಲ್ಲಿ ಹೈಟೆಕ್ ಆಟೋರಿಕ್ಷಾ

Hi-tech autorickshaws to hit Bangalore roads by September
ಬೆಂಗಳೂರು, ಜು.9: ಸಾರ್ವಜನಿಕ ಸಾರಿಗೆ ಸಂಸ್ಥೆ ಓಡಿಸುವ ಬಸ್ಸುಗಳ ಟಿಕೆಟ್ ದರಕ್ಕೆ ಹೆದರಿ ಆಟೋರಿಕ್ಷಾ ಹತ್ತುವವರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಕಾರ್ ಪೂಲಿಂಗ್ ರೀತಿ ಆಟೋ ಪೂಲಿಂಗ್ ಶುರುವಾದರೂ ಅಚ್ಚರಿಯೇನಲ್ಲ. ಈ ನಡುವೆ ಆಟೋರಿಕ್ಷಾ ಸ್ವರೂಪವೇ ಬದಲಾಗುವ ಸುದ್ದಿಯೊಂದು ಡಿಎನ್ಎ ಪತ್ರಿಕೆ ಹೊರ ಹಾಕಿದೆ.

ಆಟೋರಿಕ್ಷಾ ಎಂದರೆ ಹೇಗಿರಲು ಸಾಧ್ಯವೇ ಎಂಬ ಕಲ್ಪನೆಗೂ ಮೀರಿದ ಬದಲಾವಣೆಗಳು ರಿಕ್ಷಾದಲ್ಲಿ ಕಂಡುಬರಲಿದೆಯಂತೆ. ಮಾಧವನ್ ಅಭಿನಯದ ತಮಿಳು/ಹಿಂದಿ ಚಿತ್ರದ ಸನ್ನಿವೇಶ ಇಲ್ಲಿ ನೆನಪಿಸಿಕೊಳ್ಳಬಹುದು. ಆಟೋರಿಕ್ಷಾ ಹತ್ತಿದ ನಾಯಕ ಎಸಿ ಆನ್ ಮಾಡು ಎನ್ನುತ್ತಾನೆ. ಫೀಜರ್ ಇದ್ಯಾ ಎಂದು ಕೇಳುತ್ತಾನೆ. ಅಮ್ಜಿ ಮುಂಬೈ ಲೋಕಲ್ ಹುಡುಗನಾದರೂ ನಾಯಕಿ ಮುಂದೆ ಫಾರೀನ್ ರಿಟರ್ನ್ ಎಂದು ಫೋಸ್ ಕೊಡುವ ದೃಶ್ಯ ಇದಾಗಿರುತ್ತದೆ. ಈಗ ಇದೇ ರೀತಿ ಒಂದಷ್ಟು ಮಾರ್ಪಟು ನಮ್ಮ ಬೆಂಗಳೂರಿನ ಆಟೋಗಳಲ್ಲೂ ಕಾಣಬಹುದಂತೆ.

ಮುಂಬರುವ ಸೆಪ್ಟೆಂಬರ್ ವೇಳೆಗೆ ಹೈಟೆಕ್ ಆಟೋರಿಕ್ಷಾಗಳು ಬೆಂಗಳೂರಿನ ರಸ್ತೆಗಳಲ್ಲಿ ಸದ್ದು ಮಾಡಲಿದೆ. ದಿ- ರಿಕ್ಸ್ ಎಂದು ಕರೆಯಲ್ಪಡುವ ಈ ಆಟೋರಿಕ್ಷಾಗಳಲ್ಲಿ ಇಂಟರ್ನೆಟ್ ಸಂಪರ್ಕವುಳ್ಳ ಟ್ಯಾಬ್ಲೆಟ್, ಜಿಪಿಎಸ್, ಡಿಜಿಟಲ್ ಮ್ಯಾಪ್ ಮಾಹಿತಿ, ಟ್ರ್ಯಾಕಿಂಗ್ ಸಾಧಕ, ಫೋನ್ ಅಪ್ಲಿಕೇಷನ್ ,ಇ ಪೇಪರ್, ಕೆಮೆರಾ ಮುಂತಾದ ಸೌಲಭ್ಯಗಳಿರುತ್ತದೆ.

ಇಷ್ಟೆಲ್ಲ ಇದ್ದ ಮೇಲೆ ಪ್ರಯಾಣ ದರ ವೋಲ್ವೋ ವಜ್ರ ಸಾರಿಗೆ ತಲೆ ಮೇಲೆ ಹೊಡೆದಂತೆ ರೇಟ್ ಇರಬೇಕು ಎಂದು ನೀವು ಊಹಿಸಿದರೆ ಅದು ಸುಳ್ಳು. ಇಷ್ಟೆಲ್ಲ ಸೌಲಭ್ಯದ ಹೊರತಾಗಿಯೂ ಮಾಮೂಲಿ ಮೀಟರ್ ಚಾರ್ಚ್(ನೋ ಎಕ್ಸ್ ಟ್ರಾ) ಮಾತ್ರ ಪ್ರಯಾಣಿಕರಿಂದ ಪಡೆಯಲಾಗುತ್ತದೆಯಂತೆ.

ಇದು ಸಾಧ್ಯವೇ ಎಂದು ಹುಬ್ಬೇರಿಸುವಂತೆ ಮಾಡುವ ಈ ಯೋಜನೆ ಬಗ್ಗೆ ಮಾತನಾಡಿದ ದಿ ರಿಕ್ಸ್ ಸಿಇಒ ಅರುಣ್ ಕುಮಾರ್ ' ಆಟೋರಿಕ್ಷಾ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಲು ಇದು ಸೂಕ್ತ ಉಪಾಯ. ಸುರಕ್ಷತೆ ಹಾಗೂ ಮನರಂಜನೆಯುಕ್ತ ಪ್ರಯಾಣ ನೀಡುವುದು ನಮ್ಮ ಗುರಿ' ಎಂದಿದ್ದಾರೆ.

ತಂತ್ರಜ್ಞಾನದ ಸಹಾಯದಿಂದ ಆಟೋರಿಕ್ಷಾ ಟ್ರ್ಯಾಕ್ ಮಾಡುವುದು ಸುಲಭ. ಅಪಘಾತ ಹಾಗೂ ಇನ್ನಿತರ ಸನ್ನಿವೇಶಗಳಲ್ಲಿ ಜಿಪಿಎಸ್ ಮುಂತಾದ ಸೌಲಭ್ಯ ಸಹಾಯಕವಾಗಲಿದೆ ಎಂದು ಕುಮಾರ್ ವಿವರಿಸಿದರು.

ಅಡ್ಡಾದಿಡ್ಡಿ ಅಟೋ ಓಡಿಸಿದರೆ ಹೆಡ್ ಆಫೀಸ್ ಗೆ ಅಲಾರಂ ಸಿಗ್ನಲ್ ಸಿಗುತ್ತದೆ. ಆಟೋಚಾಲಕನ ವರ್ತನೆ ಅನುಚಿತವಾಗಿದ್ದರೆ ಪ್ರಯಾಣಿಕರು ತಕ್ಷಣವೇ ದೂರು ದಾಖಲಿಸುವ ಸೌಲಭ್ಯ ಕೂಡಾ ನೀಡಲಾಗಿದೆ.

ಆರಂಭದಲ್ಲಿ ದಕ್ಷಿಣ ಬೆಂಗಳೂರು, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ ಹಾಗೂ ಮಾರತ್ ಹಳ್ಳಿ ಕಡೆ 20 ಆಟೋಗಳನ್ನು ರಸ್ತೆಗಿಳಿಸುತ್ತಿದ್ದೇವೆ. ಕಚೇರಿಗೆ ಹೋಗುವ ಪ್ರಯಾಣಿಕರನ್ನು ಗುರಿಯಾಗಿಟ್ಟುಕೊಂಡು ಮೊದಲ ಪ್ರಯೋಗ ನಡೆಯಲಿದೆ. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ನಂತರ ವಿವಿಧ ಬಡಾವಣೆಗಳಲ್ಲಿ ಆಟೋಗಳು ಸಂಚಾರ ಆರಂಭಿಸಲಿದೆ.

ಆಟೋಗಳ ಆನ್ ಲೈನ್ ಬುಕ್ಕಿಂಗ್ ಸೌಲಭ್ಯ, ಆಟೋರಿಕ್ಷಾ ಅಂದಗಾಣಿಸಲು ಚಿತ್ರಕಲಾ ಪರಿಷತ್ ಹಾಗೂ ಇನ್ನಿತರ ಕಲಾ ಕೇಂದ್ರ ನೆರವು ಪಡೆಯುವುದು ಮುಂತಾದ ಯೋಜನೆ ಜಾರಿಯಲ್ಲಿದೆ.

ಎಲ್ಲಾ ಆಟೋರಿಕ್ಷಾಗಳಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಲಾಗಿದೆ. ಆದರೆ, ಪ್ರತಿ ಆಟೋ ಒಳಾಂಗಣ ವಿನ್ಯಾಸ ವಿಭಿನ್ನವಾಗಿರಲಿದೆ ಎಂದು ಸಿಇಒ ಅರುಣ್ ಹೇಳಿದರು.

ಆದರೆ, ಈ ಸುಂದರ ಯೋಜನೆಗೂ ವಿಘ್ನ ತಪ್ಪಿದ್ದಲ್ಲ. ಹಿರಿಯ ಸಾರಿಗೆ ಅಧಿಕಾರಿಗಳು ದಿ ರಿಕ್ಸ್ ಯೋಜನೆಯನ್ನು ಟೀಕಿಸಿದ್ದಾರೆ. ಆದರೆ, ಕೆಲವು ಎನ್ ಜಿಒ ನೆರವಿನಿಂದ ಆರ್ ಟಿಒ ಹಾಗೂ ಬಿಬಿಎಂಪಿಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರ ಸಿಕ್ಕಿದೆ. ಶೀಘ್ರದಲ್ಲೇ ದಿ ರಿಕ್ಸ್ ರಸ್ತೆಯಲ್ಲಿ ಕಾಣಬಹುದು. ಸುಖ ಪ್ರಯಾಣ ನಿಮ್ಮದಾಗಲಿ ಎಂದು ಅರುಣ್ ಕುಮಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+