ರಾಜ್ಯಸಭಾ ಸದಸ್ಯತ್ವ 100 ಕೋಟಿಗೆ ಸೇಲ್?

Birendra Singh
ನವದೆಹಲಿ, ಜು.29 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಕಾಂಗ್ರೆಸ್ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿ ಮಾಡುತ್ತಿದ್ದಾರೆ. ರಾಜ್ಯಸಭೆಯ ಸದಸ್ಯತ್ವ 100 ಕೋಟಿಗೆ ಮಾರಾಟವಾಗುತ್ತದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿ ವಿವಾದ ಹುಟ್ಟುಹಾಕಿದ್ದಾರೆ.

ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಹರಿಯಾಣದ ರಾಜ್ಯಸಭಾ ಸದಸ್ಯ ಬೀರೇಂದರ್ ಸಿಂಗ್ ಸೋಮವಾರ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯಸಭಾ ಸದಸ್ಯಸ್ಥಾನ 100 ಕೋಟಿಗೆ ಮಾರಾಟ ವಾಗುತ್ತದೆ. ಎಲ್ಲಾ ಪಕ್ಷಗಳಲ್ಲೂ ಇದು ನಡೆಯುತ್ತದೆ ಎಂದು ಸಿಂಗ್ ಹೇಳಿದ್ದಾರೆ.

ಸಿಂಗ್ ಮಾತಿನಂತೆ ರಾಜ್ಯಸಭೆ ಸದಸ್ಯರಾಗಬೇಕೆಂದರೆ ಯಾರೂ ಉಚಿತವಾಗಿ ಆಯ್ಕೆ ಆಗುವುದಿಲ್ಲವಂತೆ. ಕನಿಷ್ಟವೆಂದರೆ 100 ಕೋಟಿ ಹಣ ಕೋಡಬೇಕೆಂತೆ. ತಾವು 80 ಕೋಟಿ ಕೊಟ್ಟು ರಾಜ್ಯಸಭೆಗೆ ಬಂದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.

ರಾಜ್ಯಸಭಾ ಸದಸ್ಯ ಸ್ಥಾನ ಅರ್ಹರಿಗೆ ನೀಡಲಾಗುತ್ತದೆ ಎಂಬುದು ಕೇವಲ ಕಾಗದದ ಮೇಲಿನ ಮಾತಾಗಿ ಉಳಿದಿದೆ. ಎಲ್ಲಾ ಪಕ್ಷಗಳು ಇದನ್ನು ಮಾರಿಕೊಳ್ಳುತ್ತವೆ ಎಂದು ಸಿಂಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ವಿವಿಧ ಪಕ್ಷಗಳ ಕಣ್ಣು ಕೆಂಪಾಗಿಸಿದೆ.

ಹಣ ನೀಡಲು ಸಾಧ್ಯವಿಲ್ಲದವರು ರಾಜ್ಯಸಭೆಗೆ ಆಯ್ಕೆಯಾಗುವುದಿಲ್ಲ. ಎಷ್ಟೋ ಜನ ಬುದ್ಧಿವಂತರಿದ್ದರೂ ಹಣದ ಕೊರತೆಯಿಂದ ಮೇಲ್ಮನೆಗೆ ಬರುವುದಿಲ್ಲ ಎಂಬುದು ಸಿಂಗ್ ವಿಶ್ಲೇಷಣೆ. ರಾಜಕೀಯ ವಲಯದಲ್ಲಿ ಸಿಂಗ್ ಹೇಳಿಕೆ ಭಾರೀ ವಿವಾದ ಎಬ್ಬಿಸಿದೆ.

ಕಾಂಗ್ರೆಸ್ ನಾಯಕರು ಚುನಾವಣೆ ಹತ್ತಿರವಾಗುತ್ತಿರುವಾಗ ಇಂತಹ ಹೇಳಿಕೆ ನೀಡಿ ಪ್ರತಿಪಕ್ಷಗಳ ಬಾಯಿಗೆ ಆಹಾರವಾಗುತ್ತಿದ್ದಾರೆ. ಇದು ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರುವುದೇ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+