ಭಾರತೀಯ ಸಿಗರೇಟುಗಳು ನಿಜಕ್ಕೂ ಅಪಾಯಕಾರಿ!
ನವದೆಹಲಿ, ಜುಲೈ 29: ಸಿಗರೇಟುಗಳು ಮೊದಲೇ ಮಾರಕ. ಅಂತಹುದರಲ್ಲಿ ಭಾರತದಲ್ಲಿ ತಯಾರಾಗಿ ಮಾರಾಟವಾಗುವ ಸಿಗರೇಟುಗಳು ಮತ್ತಷ್ಟು ಮಾರಕ/ ಅಪಾಯಕಾರಿ! ಹಾಗಾಗಿ ಸಿಗರೇಟ್ ತುದಿಗೆ ಬೆಂಕಿ ಹಚ್ಚುವ ಮುನ್ನ ಎಚ್ಚರಾ ಎಚ್ಚರ!
ಭಾರತದಲ್ಲಿ ಉತ್ಪಾದನೆಯಾಗುವ ಸಿಗರೇಟುಗಳು ನಿಜಕ್ಕೂ ಮಾರಕ/ ಅಪಾಯಕಾರಿ ಎಂಬುದು ಸರಕಾರಕ್ಕೂ ಗೊತ್ತಾಗಿದೆ. ಹಾಗಾಗಿ ಸಿಗರೇಟಿನಲ್ಲಿ ಬಳಕೆಯಾಗುತ್ತಿರುವ ವಿಷಕಾರಿ ನಿಕೋಟಿನ್ ಮತ್ತು ಟಾರ್ ವಸ್ತುಗಳು ಯಾವ ಪ್ರಮಾಣದಲ್ಲಿವೆ ಎಂಬುದನ್ನು ಅಳೆಯಲು ದೇಶದಲ್ಲಿ ನಾಲ್ಕು ಪ್ರಯೋಗಾಲಯಗಳನ್ನು ತೆರೆಯಲು ಮುಂದಾಗಿದೆ. ಮೊಟ್ಟಮೊದಲ ಅತ್ಯಾಧುನಿಕ ಸಿಗರೇಟ್ ಲ್ಯಾಬೊರೇಟರಿ ಚಂಡೀಗಢದಲ್ಲಿ ಸ್ಥಾಪನೆಯಾಗಲಿದೆ.
ಭಾರತೀಯ ಸಿಗರೇಟುಗಳಲ್ಲಿ ಬಳಕೆಯಾಗುತ್ತಿರುವ ನಿಕೋಟಿನ್ ಮತ್ತು ಟಾರ್ ಅಂಶ/ ಪ್ರಮಾಣ ಜಾಗತಿಕ ಮಟ್ಟದಲ್ಲಿ ನಿಗದಿಪಡಿಸಿರುವ ಮಟ್ಟಕ್ಕಿಂತ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವೇ ಘೋಷಿಸಿದೆ.

ನಾಲ್ಕು ಕಡೆ cigarette laboratory
ಚಂಡೀಗಢದಲ್ಲಿ ಶೀಘ್ರವೆ ಪ್ರಧಾನ ಪ್ರಯೋಗಾಲಯ ಸ್ಥಾಪನೆಯಾಗಲಿದ್ದು, ಮುಂಬೈ, ಅಹಮದಾಬಾದ್, ಕೋಲ್ಕೊತ್ತಾ ಮತ್ತು ಚೆನ್ನೈನಲ್ಲಿ ಪ್ರಾದೇಶಿಕ ಕೇಂದ್ರಗಳು ಅಸ್ತಿತ್ವಕ್ಕೆ ಬರಲಿವೆ.

nicotine, tar ನಿಗದಿತ ಪ್ರಮಾಣಕ್ಕಿಂತ ಅಧಿಕ
ಪ್ರಯೋಗಾಲಯಗಳಲ್ಲಿ ಸಿಗರೇಟ್ ಹೊಗೆಯನ್ನು ಸಂಗ್ರಹಿಸಿ, ಅದರಲ್ಲಿರುವ carcinogenic ಅಂಶವನ್ನು ವಿಶ್ಲೇಷಣೆಗೊಳಪಡಿಸಲಾಗುವುದು. ಈ ಮಧ್ಯೆ, ಕೇಂದ್ರೀಯ ತಂಬಾಕು ಸಂಶೋಧನಾ ಸಂಸ್ಥೆಯು ಸಿಗರೇಟಿನಲ್ಲಿ nicotine ಮತ್ತು tar ಅಂಶಗಳು ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವುದನ್ನು ಪತ್ತೆ ಹಚ್ಚಿದೆ. ಈ ಅಪಾಯಕಾರಿ ಅಂಶಗಳು ಅಪಾಯದ ಮಟ್ಟಕ್ಕಿಂತ ತುಂಬಾ ಹೆಚ್ಚಾಗಿದೆ.

Central Tobacco Act ಉಲ್ಲಂಘನೆ
ಒಂದು ಸಿಗರೇಟಿನಲ್ಲಿ tar ಅಂಶ 10 ಮಿಲಿ ಗ್ರಾಂ ಇರಬೇಕು. ಆದರೆ ಭಾರತದಲ್ಲಿ ಉತ್ಪಾದನೆಯಾಗುವ ಸಿಗರೇಟಿನಲ್ಲಿ ಇದರ ಪ್ರಮಾಣ 15 ಮಿಲಿ ಗ್ರಾಂ ನಷ್ಟಿದೆ. ಇನ್ನು, nicotine ಅಂಶ 1 ಮಿಲಿ ಗ್ರಾಂ ನಷ್ಟಿರಬೇಕು. ಆದರೆ ಅದು ಮಿತಿಮೀರಿದೆ. ಇದು Central Tobacco Act ಉಲ್ಲಂಘನೆಯಾಗಿದೆ.

ಅಮೆರಿಕದ Johns Hopkins University ತಜ್ಞರು
ಪ್ರಯೋಗಾಲಯಗಳ ಸ್ಥಾಪನೆಯಲ್ಲಿ ಅಮೆರಿಕದ Johns Hopkins University ತಜ್ಞರು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನೆರವಾಗುತ್ತಿದ್ದಾರೆ. ದೆಹಲಿ, ಚಂಡೀಗಢ, ಅಹಮದಾಬಾದ್ ಮತ್ತು ಚೆನ್ನೈಗೆ ಈಗಾಗಲೇ ಭೇಟಿ ನೀಡಿದ್ದ ಅಮೆರಿಕದ ತಜ್ಞರು ಭಾರತೀಯ ಅಧಿಕಾರಿಗಳಿಗೆ ನೆರವಾಗಿದ್ದಾರೆ.
Cigarettes and Other Tobacco Products (Packging and Labeling) Act ಪ್ರಕಾರ ತಂಬಾಕು ಉತ್ಪಾದಕರು ಸಿಗರೇಟಿನಲ್ಲಿ ಬಳಸಿರುವ nicotine ಮತ್ತು tar ಪ್ರಮಾಣವನ್ನು ನಮೂದಿಸುವುದು ಕಡ್ಡಾಯ.












Click it and Unblock the Notifications