ವಿಮಾನದಲ್ಲಿ ಕಿರಿಕ್: ಲಂಕಾ ಕ್ರಿಕೆಟಿಗನಿಗೆ ಕೊನೆಗೂ ಶಿಕ್ಷೆ

drunk-lankan-cricketer-ramith-brit-airways-flight-fined
ನವದೆಹಲಿ, ಜುಲೈ 19:ಇಪ್ಪತ್ತು ದಿನಗಳ ಹಿಂದೆ ಬ್ರಿಟೀಷ್ ಏರ್ ವೇಸ್ ಸಂಸ್ಥೆಯ ವಿಮಾನ 35 ಸಾವಿರ ಅಡಿ ಮೇಲೆ ಆಗಸದಲ್ಲಿ ತೇಲಾಡುತ್ತಿದ್ದಾಗ ತನ್ನೊಳಗಿದ್ದ 'ಪರಮಾತ್ಮ'ನಿಂದ ಪ್ರೇರಿತನಾಗಿ ತಾನೂ ಆಗಸದಲ್ಲಿ ಓಲಾಡ ಬಯಸಿದ್ದ ಪ್ರಯಾಣಿಕ/ ಶ್ರೀಲಂಕಾದ ಕ್ರಿಕೆಟ್ ಆಟಗಾರನಿಗೆ ಶಿಕ್ಷೆ ವಿಧಿಸಲಾಗಿದೆ.

ಇದೂ Sun-strike ಕಥೆಯೇ:
ಸದರಿ ಗುಂಡು ಪಾರ್ಟಿಗೆ ಶಿಕ್ಷೆಯಾಯಿತು ಎನ್ನುವುದಕ್ಕಿಂದ ಮೊದಲು ಆತ ಯಾರು ಎಂಬುದನ್ನು ತಿಳಿದುಕೊಂಡರೆ ಆತನ ದುಸ್ಸಾಹಸಕ್ಕೆ ಪ್ರೇರಣೆಯಾಗಿದ್ದು ಯಾವುದು ಎಂಬುದು ಅರಿವಿಗೆ ಬರುತ್ತದೆ. ಈತ ಲಂಕಾ ತಂಡದ ಆರಂಭಿಕ ದಾಂಡಿಗ ರಮಿತ್‌ ರಂಬುಕ್ವೆಲ್ಲ. ಈತನ ತಂದೆ ಶ್ರೀಲಂಕಾದ ವಾರ್ತಾ ಸಚಿವ ಕೆಹಿಲಿಯಾ ರಂಬುಕ್ವೆಲ್ಲ.

ಗುಂಡು ಹೆಚ್ಚಾಗಿ ತೂರಾಡುತ್ತಲೇ ವಿಮಾನದ exit ಬಾಗಿಲನ್ನು ಬಾಗಿಲನ್ನು ತೆರೆದು, ವಿಮಾನದಲ್ಲಿದ್ದ 229 ಪ್ರಯಾಣಿಕರಿಗೆ ಪರಲೋಕ ತೋರಿಸಲು 21 ವರ್ಷದ ರಮಿತ್‌ ಯತ್ನಿಸಿದ್ದ. ಆತನಿಗೆ ಈಗ ಪ್ರವಾಸ ಸಂಭಾವನೆಯ ಶೇ. 50ರಷ್ಟು ಮೊತ್ತವನ್ನು ಕಟ್ ಮಾಡಲಾಗಿದೆ.

ಕಳೆದ ತಿಂಗಳ ಕೊನೆಯಲ್ಲಿ ವೆಸ್ಟ್‌ ಇಂಡೀಸಿನಿಂದ ವಾಪಸಾಗುತ್ತಿದ್ದ ವೇಳೆ ಶ್ರೀಲಂಕಾ 'ಎ' ತಂಡದ ಕ್ರಿಕೆಟಿಗ ಬ್ರಿಟಿಷ್‌ ಏರ್‌ವೇಸ್‌ ವಿಮಾನದಲ್ಲಿ ಅವಾಂತರ ಮಾಡಿದ್ದ. ಆದರೆ ವಿಮಾನ ಸಂಸ್ಥೆ ತನಿಖೆಯನ್ನು ಕಾಯ್ದಿರಿಸಿ, ಪ್ರಯಾಣಿಕನ ಬಗ್ಗೆ ಗೌಪ್ಯತೆ ಕಾಪಾಡಿತ್ತು.

ಇದೀಗ ತಂಡದ ಮ್ಯಾನೇಜರ್‌ ಜಯಂತ ಸೆನೆವಿರತ್ನೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ವರದಿ ಸಲ್ಲಿಸಿದ್ದು, ಅದರಂತೆ ರಮಿತ್‌ ಗೆ ಪ್ರವಾಸ ಸಂಭಾವನೆಯ ಶೇ. 50ರಷ್ಟು ದಂಡ ವಿಧಿಸಲಾಗಿದೆ. ಶಿಸ್ತುಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.

ವಿಮಾನದಲ್ಲಿ ರಮಿತ್‌ ಕುಡಿದ ಮತ್ತಿನಲ್ಲಿದ್ದ ಎಂದು ವರದಿಯಾಗಿತ್ತು. ಆದರೆ ತನಗೆ ನಿದ್ರೆಯಲ್ಲಿ ನಡೆಯುವ ಅಭ್ಯಾಸವಿದೆ. ಅದರಿಂದ ಈ ಎಡವಟ್ಟು ಸಂಭವಿಸಿದೆ ಎಂಬುದಾಗಿ ರಮಿತ್‌ ಸಮರ್ಥಿಸಿಕೊಂಡಿದ್ದಾನೆ.

ವಿಮಾನವು ಸೈಂಟ್ ಲೂಸಿಯಾದಿಂದ ಲಂಡನ್ ಗಾಟ್ವಿಕ್ ನತ್ತ ಚಲಿಸುತ್ತಿತ್ತು. ವೆಸ್ಟ್ ಇಂಡೀಸ್ ವಿರುದ್ಧ ಜೂನ್ 27ರಂದು ಮುಕ್ತಾಯವಾದ ಕ್ರಿಕೆಟ್ ಸರಣಿಯನ್ನು ಮುಗಿಸಿಕೊಂಡು ಲಂಕಾ ತಂಡ ತಾಯ್ನಾಡಿಗೆ ವಾಪಸಾಗುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+