ಅತ್ತ ಬಿಸಿಯೂಟದ ನೋವು, ಇತ್ತ ಡ್ಯಾನ್ಸರ್ಸ್ ನಲಿವು
ಬೆಂಗಳೂರು, ಜು.17: ಮುಂಬೈ ಹಾಗೂ ಮಹಾರಾಷ್ಟ್ರಗಳಲ್ಲಿ ಡ್ಯಾನ್ಸ್ ಬಾರ್ ಗಳನ್ನು ಮತ್ತೆ ಆರಂಭಿಸಲು ಸುಪ್ರೀಂಕೋರ್ಟ್ ಮಂಗಳವಾರ ಅನುಮತಿ ನೀಡಲಾಗಿದೆ.
ಡ್ಯಾನ್ಸ್ ಬಾರ್ ಗಳು, ಸ್ಟಾರ್ ಹೋಟೆಲ್ ಗಳ ಬಾರ್ ಗಳಲ್ಲೂ ನರ್ತನಕ್ಕೆ ಅವಕಾಶ ಇರಲಿಲ್ಲ. ಇದರಿಂದ ಮುಂಬೈಯೊಂದರಲ್ಲೇ ಸುಮಾರು 70,000 ಮಂದಿ ನರ್ತಕಿಯರು ನಿತ್ಯ ಜೀವನ ಸಾಗಿಸುವುದು ಕಷ್ಟವಾಗಿತ್ತು.
ಈ ಸಂತಸದ ಸುದ್ದಿ ಕೇಳಿ ಬಾರ್ ಡ್ಯಾನ್ಸರ್ ಗಳು ಖುಷಿಯಿಂದ ಸಿಹಿ ಹಂಚಿದ್ದಾರೆ. ಇನ್ನೊಂದೆಡೆ ಮಹಾರಾಷ್ಟ್ರ ಸರ್ಕಾರ ಯಾವುದೇ ಕಾರಣಕ್ಕೂ ಡಾನ್ಸ್ ಬಾರ್ ತೆರೆಯಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ನೋವಿನ ಸಂಗತಿ: ಬಿಹಾರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಉಂಡು ಮಕ್ಕಳು ಅಸ್ವಸ್ಥರಾದ ಘಟನೆಯಲ್ಲಿ, ಬುಧವಾರ ಬೆಳಗಿನ ವರದಿಯ ಪ್ರಕಾರ ಸಾವಿಗೀಡಾದವರ ಮಕ್ಕಳ ಸಂಖ್ಯೆ 20ಕ್ಕೆ ಏರಿದೆ.
ಶಾಲೆಯಲ್ಲಿ 8 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕೆಂದು ಖಿಚಡಿ ನೀಡಲಾಗಿತ್ತು. ಇದನ್ನು ಸೇವಿಸಿದ ತಕ್ಷಣವೇ ಮಕ್ಕಳು ಅಸ್ವಸ್ಥರಾದರು. 11 ಮಕ್ಕಳು ಆಸ್ಪತ್ರೆಗೆ ತೆರಳುವ ಮಾರ್ಗದಲ್ಲೇ ಸಾವಿಗೀಡಾದ್ದಾರೆ. ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ ನೋಡಿ...

ಮುಂಬೈ ಡ್ಯಾನ್ಸರ್ ನಲಿವು
ಡ್ಯಾನ್ಸ್ ಬಾರ್ ಗೆ ಅನುಮತಿ ಸಿಕ್ಕ ಸುದ್ದಿ ಕೇಳಿ ಬಾರ್ ಡ್ಯಾನ್ಸರ್ ಗಳು ಖುಷಿಯಿಂದ ಸಿಹಿ ಹಂಚಿದ್ದಾರೆ

ಬಿಹಾರದ ದುರಂತ
ಬಿಸಿಯೂಟ ಉಂಡು ಮಕ್ಕಳು ಅಸುನೀಗಿದ ದುರ್ಘಟನೆ ಬಿಹಾರದಲ್ಲಿ ನಡೆದಿತ್ತು. ದುಃಖತಪ್ತ ಕುಟುಂಬಗಳ ರೋದನ ಮುಗಿಲು ಮುಟ್ಟಿದೆ.

ಬಾರ್ ಡ್ಯಾನ್ಸರ್
ಬಾರ್ ಗಳಲ್ಲಿ ನರ್ತನ ನಿಲ್ಲಿಸಿದರೆ ಮುಂಬೈಯೊಂದರಲ್ಲೇ ಸುಮಾರು 70,000 ಮಂದಿಗೂ ಅಧಿಕ ನರ್ತಕಿಯರ ನಿತ್ಯ ಜೀವನ ಸಾಗಿಸುವುದು ಕಷ್ಟವಾಗಲಿದೆ

ಬಿಹಾರದ ದುರಂತ
ಬುಧವಾರ ಬೆಳಗಿನ ವರದಿಯ ಪ್ರಕಾರ ಸಾವಿಗೀಡಾದವರ ಮಕ್ಕಳ ಸಂಖ್ಯೆ 20ಕ್ಕೆ ಏರಿದೆ

ವೇಶ್ಯಾವಾಟಿಕೆಗೆ ಬೆಂಬಲ
ಕೋಲ್ಕತ್ತಾದಲ್ಲಿ ಸೆಕ್ಸ್ ವರ್ಕರ್ ಗಳು ಮೆರವಣಿಗೆ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ವಿಷವಾದ ಬಿಸಿಯೂಟ
ಶಾಲೆಯಲ್ಲಿ 8 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕೆಂದು ಖಿಚಡಿ ನೀಡಲಾಗಿತ್ತು. ಇದನ್ನು ಸೇವಿಸಿದ ತಕ್ಷಣವೇ ಮಕ್ಕಳು ಅಸ್ವಸ್ಥರಾದರು. 11 ಮಕ್ಕಳು ಆಸ್ಪತ್ರೆಗೆ ತೆರಳುವ ಮಾರ್ಗದಲ್ಲೇ ಸಾವಿಗೀಡಾದ್ದಾರೆ.


Click it and Unblock the Notifications
